Advertisement

ಕೋವಿಡ್‌ ಪಾಸಿಟಿವ್‌ ಇದ್ದ ವ್ಯಕ್ತಿ ಕಾರ್ಯಕ್ರಮದಲ್ಲಿ ಭಾಗಿ: ಆಕ್ರೋಶ

12:12 PM Jan 17, 2022 | Team Udayavani |

ನೆಲಮಂಗಲ: ಕೊರೊನಾ ಪಾಸಿಟಿವ್‌ ಬಂದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಸಮಸ್ಯೆ ಇಲ್ಲ ಅಂದರೆ ಮನೆಯಲ್ಲಿ ಹೋಂ ಐಸೋಲೇಷನ್‌ಆಗಬೇಕು ಎಂಬ ಸ್ಪಷ್ಟ ನಿಯಮವಿದ್ದರೂ, ಸರ್ಕಾರಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಪಟ್ಟಣದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎನ್‌ಪಿಎಲ್‌ ಪಂದ್ಯಾವಳಿ ಉದ್ಘಾಟನೆಯಲ್ಲಿ ಭಾಗವಹಿಸಿದ್ದು, ತಡವಾಗಿ ಬೆಳಕಿಗೆ ಬಂದಿದ್ದು, ನಾಗರಿಕರ ಕೋಪಕ್ಕೆ ಗುರಿಯಾಗಿದ್ದಾರೆ.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸಿಂಗ್‌ ಅಧಿಕಾರಿಯಾಗಿರುವ ನರಸಿಂಹ ಮೂರ್ತಿ ಕಳೆದ 5ದಿನದ ಹಿಂದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ ರ್ಯಾಟ್‌ ಪರೀಕ್ಷೆ ಮಾಡಿಸಿದ್ದು, ಪ್ರಯೋಗಾಲಯದ ವರದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿತ್ತು.ಸೋಂಕು ದೃಢಪಟ್ಟಿದ್ದರೂ, ಚಿಕಿತ್ಸೆ ಜವಾಬ್ದಾರಿಯುತಸ್ಥಾನದಲ್ಲಿರುವ ಆರೋಗ್ಯ ಇಲಾಖೆ ಅಧಿಕಾರಿನರಸಿಂಹಮೂರ್ತಿ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿ ಸುವುದರೊಂದಿಗೆ ಕ್ರಿಕೆಟ್‌ ತಂಡದಲ್ಲಿ ಆಟಗಾರ ರಾಗಿರುವುದು ಕ್ರಿಕೆಟ್‌ ಪ್ರಿಯರಲ್ಲಿ ಬೇಸರವನ್ನು ಮೂಡಿಸಿದೆ.

ಏನಿದು ಪಂದ್ಯಾವಳಿ: ಕ್ರಿಕೇಟ್‌ ಲೋಕದಲ್ಲಿ ಐಪಿಎಲ್‌ ಪ್ರಾರಂಭವಾದ ಬಳಿಕ ಅದರಿಂದ ಉತ್ತೇಜಿತರಾದ ನೆಲಮಂಗಲ ಕ್ರಿಕೆಟಿಗರು ಎನ್‌ ಪಿಎಲ್‌ ಪಂದ್ಯಾವಳಿ ಪ್ರಾರಂಭಿಸಿ ತಾಲೂಕಿನಲ್ಲಿ ಕ್ರಿಕೆಟ್‌ ಪಂದ್ಯಾವಳಿಗೆ ಹೊಸ ರೂಪವನ್ನು ಕೊಟ್ಟಿದ್ದರಲ್ಲದೆ, ತಾಲೂಕಿನಲ್ಲಿ ನಡೆಯುವಪಂದ್ಯಾವಳಿಗಳಲ್ಲಿ ಅತ್ಯಂತ ಹೆಚ್ಚು ಮೊತ್ತದ ನಗದು ಬಹುಮಾನ ಮತ್ತು ಬೃಹತ್‌ ಟ್ರೋಫಿಯನ್ನು ನೀಡುವ ಪಂದ್ಯಾವಳಿ ಇದಾಗಿದೆ. ಅದರಂತೆ ಜ. 14ರಂದು ನೆಲಮಂಗಲ ಪ್ರೀಮಿ ಯರ್‌ ಲೀಗ್‌ ಪಂದ್ಯಾವಳಿಯನ್ನು ಅಂಬೇಡ್ಕರ್‌ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಾರ್ವಜನಿಕರ ಆಕ್ರೋಶ: ಕೊರೊನಾ ಪಾಸಿಟಿವ್‌ ಬಂದಿದ್ದ ನರ್ಸಿಂಗ್‌ ಅಧಿಕಾರಿ ನರಸಿಂಹಮೂರ್ತಿ ಮನೆಯಲ್ಲಿ ವಿಶ್ರಾಂತಿಪಡೆಯುವುದರ ಬದಲಿಗೆ ಸಾರ್ವಜನಿಕಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದುಅಕ್ಷಮ್ಯ ಅಪರಾಧವಾಗಿದೆ. ಅದರೊಂದಿಗೆ ಕ್ರಿಕೆಟ್‌ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಇವರು ಸನ್ಮಾನವನ್ನು ಸ್ವೀಕರಿಸಿದ್ದು, ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದವರು ಆತಂಕಪಟ್ಟರೆ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುಮಾನ: ಸಾರ್ವಜನಿಕ ಆಸ್ಪತ್ರೆ ನರ್ಸಿಂಗ್‌ ಅಧಿಕಾರಿ ನರಸಿಂಹಮೂರ್ತಿ ಎನ್‌ಪಿಎಲ್‌ ಪಂದ್ಯಾವಳಿಯ ತಂಡವೊಂದರಲ್ಲಿ ಕ್ರಿಕೆಟ್‌ ಆಟವಾಡುವ ಹಂಬಲದಿಂದ ಹಾಗೂ ರಾಷ್ಟ್ರೀಯ ವಿಪತ್ತು ನಿಯಮದಡಿ ಸೇವೆಯಲ್ಲಿ ಕಡ್ಡಾಯ ವಾಗಿರಬೇಕು ಎಂಬ ಕಾರಣಕ್ಕೆ ನಕಲಿ ವರದಿ ಪಡೆದುಕೊಂಡು ರಜೆ ಪಡೆಯುವ ದುರುದ್ದೇಶವಿದ್ದು, ಆಸ್ಪತ್ರೆ ಅಧಿಕಾರಿಗಳಿಂದ ಪಾಸಿಟಿವ್‌ ರಿಪೋರ್ಟ್‌ ಪಡೆದಿದ್ದಾರಾ ನರಸಿಂಹಮೂರ್ತಿ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ಪ್ರತಿಕ್ರಿಯೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ನರಸಿಂಹಯ್ಯಪತ್ರಿಕೆಯೊಂದಿಗೆ ಮಾತನಾಡಿ, ನರ್ಸಿಂಗ್‌ ಅಧಿಕಾರಿ ನರಸಿಂಹಮೂರ್ತಿ ಅವರಿಗೆಕೋವಿಡ್‌ ಸೋಂಕು ದೃಢಪಟ್ಟು 5 ದಿನಗಳೇ ಕಳೆದಿವೆ. ನಿಯಮದ ಪ್ರಕಾರವಾಗಿ ಅವರು ಮನೆಯಲ್ಲಿ ಐಸೋಲೇಷನ್‌ನಲ್ಲಿರಬೇಕಿತ್ತು. ಆದರೆ, ಪಂದ್ಯಾವಳಿಯ ಉದ್ಘಾಟನೆಯಲ್ಲಿಭಾಗವಹಿಸಿದ್ದು ತಪ್ಪು. ಅವರ ಈ ನಡೆಯಿಂದ ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ. ಅವರಿಗೆಕಾರಣ ಕೇಳಿ ನೋಟಿಸ್‌ ನೀಡಿ ಸೂಕ್ತ ಕ್ರಮಕ್ಕೆಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸ ಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next