Advertisement

ಉಡುಪಿ ನಗರಸಭೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್

12:37 PM Jul 14, 2020 | Mithun PG |

ಉಡುಪಿ: ನಗರಸಭೆ ಆರೋಗ್ಯ ಇಲಾಖೆ ಸಿಬ್ಬಂದಿಯೋರ್ವರಿಗೆ ಕೋವಿಡ್ 19 ಸೊಂಕು  ಧೃಡಪಟ್ಟಿದೆ ಎಂದು ವರದಿಯಾಗಿದೆ.

Advertisement

ಕಳೆದ ಅನೇಕ ದಿನಗಳಿಂದ ಈ ಸಿಬ್ಬಂದಿ ಕ್ವಾರಂಟೈನ್ ನಲ್ಲಿ ಇದ್ದರು ಎಂದು ಮಾಹಿತಿ ತಿಳಿದುಬಂದಿದೆ. ಇವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಇಂದು ವರದಿ ಬಂದಿದೆ.

ಸಿಬ್ಬಂದಿಗೆ ಕೋವಿಡ್ ವೈರಸ್ ದೃಢಪಟ್ಟ ಹಿನ್ನಲೆಯಲ್ಲಿ. ಇದೀಗ ನಗರಸಭೆ ಆರೋಗ್ಯ ಇಲಾಖೆ ಕಚೇರಿಗೆ ಬಾಗಿಲು ಹಾಕಲಾಗಿದೆ. ಸಾರ್ವಜನಿಕರ ಪ್ರವೇಶಕ್ಕೂ ನಿರ್ಬಂಧ ಹೇರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next