Advertisement

ವಿಚಾರಣೆಗೆ ಕರೆತಂದ ಆರೋಪಿಗೆ ಕೋವಿಡ್ ಪಾಸಿಟಿವ್: 4 ಜನ ಪೋಲಿಸರು ಕ್ವಾರಂಟೈನ್ ಗೆ!

06:14 PM Jul 09, 2020 | keerthan |

ಶಿವಮೊಗ್ಗ: ಕಳ್ಳತನ ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದ ಪೊಲೀಸರಿಗೆ ಈಗ ಆತಂಕ ಶುರುವಾಗಿದೆ. ಕಾರಣ ಬಂಧಿಸಿದ ಆರೋಪಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಸದ್ಯ ಆತನ ಸಂಪರ್ಕಕ್ಕೆ ಬಂದಿದ್ದ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.

Advertisement

ಶಿಕಾರಿಪುರ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಕೇಸ್ ಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆತರಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಕಳ್ಳನನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದ್ದರು. ಸದ್ಯ ಆತನ ಕೋವಿಡ್ ತಪಾಸಣಾ ವರದಿ ಬಂದಿದ್ದು, ಕೋವಿಡ್ ಸೋಂಕು ಇರುವುದು ಧೃಡಪಟ್ಟಿದೆ

ಈ ಹಿನ್ನಲೆಯಲ್ಲಿ ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಕಳ್ಳನನ್ನು ವಿಚಾರಣೆ ನಡೆಸಿದ್ದ 4 ಜನ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ. ಪಿಎಸ್ಐ ತಾತ್ಕಾಲಿಕ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ.

ಶಿಕಾರಿಪುರ ಪಟ್ಟಣ ಠಾಣೆಯನ್ನು‌ ಈಗಾಗಲೇ ‌ಸ್ಯಾನಿಟೈಸ್ ಮಾಡಲಾಗಿದೆ ಸೋಂಕಿತ ಕಳ್ಳನಿಗೆ ಕೋವಿಡ್ 19 ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next