Advertisement

ಬಿಳಿಗಿರಿರಂಗ ದೇವಾಲಯದ ಅರ್ಚಕರಿಗೆ ಕೋವಿಡ್ : ಭಕ್ತರಲ್ಲಿ ಆತಂಕ

09:35 PM Apr 06, 2021 | Team Udayavani |

ಯಳಂದೂರು:(ಚಾಮರಾಜನಗರ ಜಿಲ್ಲೆ) ತಾಲೂಕಿನ ಪ್ರಸಿದ್ಧ ಪ್ರವಾಸಿತಾಣವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿರುವ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಅಮ್ಮನವರಿಗೆ ಪೂಜೆ ಸಲ್ಲಿಸುವ ಅರ್ಚಕರೂ ಸೇರಿದಂತೆ ಇವರ ಕುಟುಂಬ ಮೂವರು ಸೇರಿದಂತೆ ಒಟ್ಟು ನಾಲ್ಕು ಜನರಿಗೆ ಕೊರೊನಾ ಬಂದಿದ್ದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

Advertisement

ಏ.2 ರಂದು ದೇಗುಲದ ಮಹಾಸಂಪ್ರೋಕ್ಷಣಾ ಕಾರ್ಯಕ್ರಮ ನಡೆದಿದ್ದು ಇದರಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ರವರಿಗೆ ಏ. 4 ರಂದು ಕೋವಿಡ್‌ ದೃಢಪಟ್ಟಿತ್ತು.ಈ ಹಿನ್ನೆಲೆಯಲ್ಲಿ ಇಲ್ಲಿನ ಅರ್ಚಕರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು ಇವರಲ್ಲಿ ಇಬ್ಬರಿಗೆ ಕೋವಿಡ್‌ನ ಲಕ್ಷಣಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಐದು ದಿನಗಳ ಕಾಲ ನಡೆದ ಮಹಾಸಂಪ್ರೋಕ್ಷಣೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದರು. ಅಲ್ಲದೆ ಭಕ್ತರಿಗೆ ಪೂಜೆಯನ್ನು ನೆರವೇರಿಸಿದ್ದರು. ಅಂದು ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್, ಶಾಸಕರಾದ ಎನ್. ಮಹೇಶ್, ಆರ್. ನರೇಂದ್ರ, ಉಪವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬದೋಲೆ ಸೇರಿದಂತೆ ಹಲವರು ಹಾಜರಿದ್ದರು. ಅಲ್ಲದೆ ಇದಾದ ನಂತರ ದೇಗುಲಕ್ಕೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಈಗ ಅರ್ಚಕರಿಗೂ ಕೋವಿಡ್ ಆಗಿರುವುದರಿಂದ ಇಲ್ಲಿಗೆ ಭೇಟಿ ನೀಡಿದ್ದ ಭಕ್ತರಲ್ಲೂ ಆತಂಕ ಮನೆ ಮಾಡಿದೆ.

ಇದನ್ನೂ ಓದಿ :ಅಪ್ಪ ಹೊಲದಲ್ಲಿ ; ಮಗ ಚಿನ್ನದ ಬೇಟೆಯಲ್ಲಿ ! ಸಾಲ ಮಾಡಿ ಕಲಿತ ಪದವಿಗೆ ಸಿಕ್ತು 14 ಚಿನ್ನ

ದೇಗುಲ ಸ್ಯಾನಿಟೈಸೇಷನ್, ತೀರ್ಥ, ಪ್ರಸಾದ ನೀಡಿಕೆ ಸ್ಟಾಪ್: ದೇವಸ್ಥಾನದ ಅರ್ಚಕರೂ ಸೇರಿದಂತೆ ಅವರ ಕುಟುಂಬದ ನಾಲ್ವರಿಗೆ ಕೋವಿಡ್ ಆಗಿರುವ ಹಿನ್ನೆಲೆಯಲ್ಲಿ ದೇಗುದಲ್ಲಿ ತೀರ್ಥ ಪ್ರಸಾದವನ್ನು ನಿಲ್ಲಿಸಲಾಗಿದೆ. ಅಲ್ಲದೆ ದಾಸೋಹ ಭನವದಲ್ಲಿ ಪ್ರಸಾದ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ದೇಗುಲದ ಆವರಣವನ್ನು ಸ್ಯಾನಿಟೈಜ್ ಮಾಡಲಾಗಿದೆ. ಅಲ್ಲದೆ ದೇಗುಲದ ಸಿಬ್ಬಂಧಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ದೇಗುಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next