Advertisement

ಶಾಲಾ ಮಕ್ಕಳಿಗೆ ಕೋವಿಡ್‌ : ಪೋಷಕರು, ಗ್ರಾಮಸ್ಥರಲ್ಲಿ ಆತಂಕ

03:44 PM Dec 30, 2021 | Team Udayavani |

ಮದ್ದೂರು: ತಾಲೂಕಿನ ಹಳ್ಳಿಕೆರೆ ಕಿರಿಯ ಪ್ರಾಥಮಿಕ ಶಾಲೆಯ ಐದು ಮಕ್ಕಳಲ್ಲಿ ಕೋವಿಡ್‌-19 ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಪೋಷಕರೂ ಹಾಗೂ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ವಹಿಸಿದ್ದಾರೆ.

Advertisement

ಗ್ರಾಪಂವಾರು ಆರೋಗ್ಯ ಇಲಾಖೆಯ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆ ಯರು ಶಾಲೆಯಲ್ಲಿ ಸಾಮೂಹಿಕ ಕೋವಿಡ್‌ ತಪಾಸಣೆ ಸಂದರ್ಭ ವೇಳೆ ಶಾಲೆಯ 60 ಮಕ್ಕಳ ಪೈಕಿ 5 ಮಕ್ಕಳಿಗೆ
ಸೋಂಕು ಕಂಡುಬಂದ ಹಿನ್ನಲೆಯಲ್ಲಿ ಸದರಿ ಮಕ್ಕಳನ್ನು ಸದ್ಯಕ್ಕೆ ಚಿಕಿತ್ಸೆ ನೀಡಿ ಹೋಂ ಐಸೋಲೇಷನ್‌ಗೆ ಒಳಪಡಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಹಾಗೂ ಪ್ರಭಾರ ತಾಲೂಕು ಆರೋಗ್ಯಾ ಧಿಕಾರಿ ಡಾ. ನಾಗೇಂದ್ರರಾವ್‌ ಮತ್ತು ಸಿಬ್ಬಂದಿ, ಸ್ಥಳಕ್ಕಾಗಮಿಸಿ ಸ್ಥಳೀಯ ಆರೋಗ್ಯ ಕಾರ್ಯಕರ್ತರಿಂದ ಮಾಹಿತಿ
ಸಂಗ್ರಹಿಸಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸಲಹೆ ನೀಡಿದ್ದಾರೆ.

ಸೋಂಕಿತ ಮಕ್ಕಳ ಕುಟುಂಬ ಸದಸ್ಯರು ಮತ್ತು ಸಂಪರ್ಕಿತರಿಗೆ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸಿದ್ದು, ಇದರ ಮಾಹಿತಿ ಲಭ್ಯವಾಗಬೇಕಾಗಿದ್ದು ಸಂಜೆ ಅಥವಾ ನಾಳೆ ಫ‌ಲಿತಾಂಶ ಬರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಶಾಲೆಗೆ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಿದ್ದು, ಒಂದು ವಾರಗಳ ಸೀಲ್‌ಡೌನ್‌ಗೆ ಕ್ರಮ ವಹಿಸಿರುವುದಾಗಿ ಬಿಇಒ ಮಹದೇವ ಪತ್ರಿಕೆಗೆ ತಿಳಿಸಿದ್ದಾರೆ.

Advertisement

ಇದನ್ನೂ ಓದಿ : ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ…ನಾಗಾಲ್ಯಾಂಡ್‌ನಲ್ಲಿ ಆಫ್ಸಪಾ ಇನ್ನೂ 6 ತಿಂಗಳು ವಿಸ್ತರಣೆ

Advertisement

Udayavani is now on Telegram. Click here to join our channel and stay updated with the latest news.

Next