ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ 48 ಮಂದಿ ಪೊಲೀಸರಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ.
ಈ ಕುರಿತು ಎಸ್ ಪಿ ಅಕ್ಷಯ್ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಲ್ಲಿ, ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಒಟ್ಟು 48 ಮಂದಿ ಪೊಲೀಸರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಕರ್ತವ್ಯನಿರತ ಪೊಲೀಸರನ್ನು ಕೋವಿಡ್ ಬೆಂಬಿಡದೇ ಕಾಡುತ್ತಿದೆ .ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತಂಕ ಹೆಚ್ಚು ಮಾಡಿದೆ.
ಇದನ್ನೂ ಓದಿ : ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರಿಗೂ ಕೋವಿಡ್ ದೃಢ
ಕಾಫಿನಾಡಿನಲ್ಲಿ ದಿನೇ ದಿನೇ ಕೋವಿಡ್ ಸೋಂಕು ಹೆಚ್ಚಾಹುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸ್ತೆಗಿಳಿದ 210 ವಾಹನಗಳು ಸೀಜ್ ಗಳನ್ನು ಪೊಲೀಸರು ಸೀಜ್ ಮಾಡುವ ಮೂಲಕ ನಿಯಮ ಪಾಲನೆ ಮಾಡದವರರಿಗೆ ತಕ್ಕ ಶಿಕ್ಷೆ ನೀಡಿದ್ದಾರೆ. ಇನ್ನೊಂದಡೆ ಸಾಮಾಜಿಕ ಅಂತರ ಪಾಲಿಸದ ಅಂಗಡಿಗಳಿಗೆ ದಂಡದ ಶಿಕ್ಷೆ ನೀಡಿದ್ದಾರೆ.
ಒಟ್ಟು 42 ಕೇಸ್ ದಾಖಲಿಸಿ, 45,000 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.ಮಾಸ್ಕ್ ಹಾಕದ 300 ಜನರಿಂದ 30,000 ದಂಡ ವಸೂಲಿ ಮಾಡಿದ್ದಾರೆ.