Advertisement

ಎರಡೇ ದಿನದಲ್ಲಿ ಲಕ್ಷ ಮೀರಿದ ಸೋಂಕಿತರು: 14 ಲಕ್ಷ ದಾಟಿದ ದೇಶದ ಸೋಂಕಿತರ ಸಂಖ್ಯೆ

03:07 PM Jul 27, 2020 | keerthan |

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ ಸೋಂಕು ಅಂಕೆಯಿಲ್ಲದೆ ಬೆಳೆಯುತ್ತಿದೆ. ಕಳೆದ ಎರಡು ದಿನದಲ್ಲಿ ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೋವಿಡ್ -19 ಸೋಂಕಿತರು ಪತ್ತೆಯಾಗುತ್ತಿದ್ದಾರೆ.

Advertisement

ದೇಶದಲ್ಲಿ ರವಿವಾರ 54 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟ- ಈ ಮೂರು ರಾಜ್ಯದಲ್ಲೇ ಒಟ್ಟು 21 ಸಾವಿರ ಪ್ರಕರಣ ದೃಢವಾಗಿದೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 14 ಲಕ್ಷದ ಗಡಿ ದಾಟಿದೆ.

ಮಹಾರಾಷ್ಟ್ರದ ಕೋವಿಡ್ ಸೋಂಕಿತರ ಸಂಖ್ಯೆ 3,75,799ಕ್ಕೆ ಏರಿಕೆಯಾಗಿದೆ. ರವಿವಾರ ಒಂದೇ ದಿನ 9,431 ಪ್ರಕರಣ ಪತ್ತೆಯಾಗಿದೆ. ಒಂದೇ ದಿನ 267 ಜನ ಸೋಂಕಿತರು ಸಾವನ್ನಪ್ಪಿದ್ದು, ರಾಜ್ಯದ ಸಾವವಿನ ಸಂಖ್ಯೆ 13,656ಕ್ಕೆ ಏರಿದೆ.

ಕರ್ನಾಟಕ ರಾಜ್ಯದಲ್ಲಿ ರವಿವಾರ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ರವಿವಾರ 5,199 ಸೋಂಕಿತರು ಪತ್ತೆಯಾದರೆ 82 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 6986 ಜನರಿಗೆ ಸೋಂಕು ದೃಢವಾಗಿದೆ. ದಕ್ಷಿಣ ಭಾರತದ ಉಳಿದ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next