ಹೊಸದಿಲ್ಲಿ/ಮುಂಬಯಿ: ದೇಶದಲ್ಲಿ ಅತ್ಯಂತ ಹೆಚ್ಚು ಕೊರೊನಾ ಸೋಂಕು ಹೊಂದಿರುವ ಮಹಾರಾಷ್ಟ್ರದಲ್ಲಿ ಒಂದೇ ದಿನ 23,179 ಕೇಸು ಗಳು ದೃಢಪಟ್ಟಿವೆ. ಮುಂಬಯಿ ಒಂದರ ಲ್ಲಿಯೇ 2,377 ಕೇಸುಗಳು ವರದಿಯಾಗಿವೆ. ಜತೆಗೆ 2,64, 897 ಡೋಸ್ ಲಸಿಕೆ ಹಾಕಲಾಗಿದೆ. ನಾಗಪುರ, ವಿದರ್ಭ, ಮುಂಬಯಿಯ ಚೆಂಬೂರ್ ಸಹಿತ ಹಲವು ಭಾಗಗಳಲ್ಲಿ ಸೋಂಕು ಸಂಖ್ಯೆ ಮತ್ತ ಷ್ಟು ಹೆಚ್ಚಾಗಿದೆ. ಇದೇ ವೇಳೆ, ಮಂಗಳ ವಾರದಿಂದ ಬುಧವಾರದ ಅವಧಿಯಲ್ಲಿ ದೇಶಾದ್ಯಂತ 28,903 ಹೊಸ ಕೇಸು, 188 ಮಂದಿ ಅಸುನೀಗಿದ್ದಾರೆ.
ಜಗತ್ತಿನಲ್ಲಿ: ಪೋಲಂಡ್‌ನಲ್ಲಿ ಒಂದೇ ದಿನ 25,502 ಪ್ರಕರಣಗಳು ದೃಢಪಟ್ಟಿದ್ದರಿಂದ ಅಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಇಟಲಿಯ ಹೆಚ್ಚಿನ ಪ್ರಾಂತ್ಯಗಳಲ್ಲಿಯೂ ಇದೇ ಕ್ರಮ ಜಾರಿಗೊಳಿಸಲಾಗಿದೆ. ರಷ್ಯಾದಲ್ಲಿ ಹೊಸತಾಗಿ 8,998 ಕೇಸುಗಳು ದೃಢಪಟ್ಟಿವೆ.
ದೇಶದಲ್ಲಿ ಕೊರೊನಾ ಲಸಿಕೆ ವ್ಯರ್ಥವಾಗುವ ಪ್ರಮಾಣ ಶೇ.6.5. ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ತಲಾ ಶೇ.17.6 ಮತ್ತು 11.6 ಎಂದು ಕೇಂದ್ರ ಸರಕಾರ ಹೇಳಿದೆ.
ದಿಲ್ಲಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಇದು ವರೆಗೆ ದೇಶದಲ್ಲಿ 3.51 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ 45-60 ವರ್ಷ ವಯೋಮಿತಿಯ 1.38 ಕೋಟಿ ಮಂದಿಯೂ ಸೇರಿದ್ದಾರೆ ಎಂದರು. ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಲಸಿಕೆ ವ್ಯರ್ಥ ಪ್ರಮಾಣ ಶೇ.6.5 ಎಂದು ಅವರು ಹೇಳಿ ದ್ದಾರೆ. 16 ರಾಜ್ಯಗಳ 70 ಜಿಲ್ಲೆಗಳಲ್ಲಿ 15 ದಿನಗಳಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದೇ ವೇಳೆ, ರಾಜ್ಯಗಳ ಕೋರಿಕೆ ಮೇರೆಗೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಬಗ್ಗೆ ರಾಜ್ಯ ಸರಕಾರಗಳು ಪ್ರಧಾನಿ ಜತೆಗಿನ ಸಭೆಯ ವೇಳೆ ಪ್ರಸ್ತಾವಿಸಿವೆ ಎಂದು ಮೂಲಗಳು ತಿಳಿಸಿವೆ
ಆಸ್ಟ್ರಾಜೆನೆಕಾಕ್ಕೆ ಬೆಂಬಲ: ದೇಶದಲ್ಲಿ ಆಸ್ಟ್ರಾಜೆನೆಕಾ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಭಯ ಅಗತ್ಯವಿಲ್ಲ ಎಂದಿದೆ ಕೇಂದ್ರ ಸರಕಾರ. ಲಸಿಕೆಯ ಬಗ್ಗೆ ಕಳವಳ ಪಡುವ ಅಗತ್ಯ ಇಲ್ಲ ಎಂದಿದ್ದಾರೆ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದೆ ಎಂದಿದ್ದಾರೆ. ಐರೋಪ್ಯ ಒಕ್ಕೂಟ ಮತ್ತು ಇತರ ದೇಶಗಳಲ್ಲಿ ಆಸ್ಟ್ರಾಜೆನೆಕಾ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾದ ಬಳಿಕ ಅದನ್ನು ನೀಡುವುದನ್ನು ನಿಲ್ಲಿಸಿದ್ದವು ಮತ್ತು ಅದರ ಬಗ್ಗೆ ತನಿಖೆ ನಡೆಸುತ್ತಿವೆ.