Advertisement

ಹಾಸ್ಟೆಲ್‌ ಅಡುಗೆ ಸಹಾಯಕಿಗೆ ಕೋವಿಡ್

03:43 PM Jun 25, 2020 | Team Udayavani |

ಮುಂಡಗೋಡ: ಟಿಬೆಟಿಯನ್‌ ಕಾಲೋನಿಯ ಟಿಸಿವಿ ಹಾಸ್ಟೆಲ್‌ ನಲ್ಲಿ ಕ್ವಾರಂಟೈನ್‌ನಲ್ಲಿ ಅಡುಗೆ ಸಹಾಯಕಿಯಾಗಿದ್ದ 45 ವರ್ಷದ ಟಿಬೆಟಿಯನ್‌ ಮಹಿಳೆಗೆ ಕೋವಿಡ್ ವೈರಸ್‌ ಇರುವುದು ದೃಢಪಟ್ಟಿದೆ.

Advertisement

ದೆಹಲಿಯಿಂದ ಬಂದು ಟಿಬೆಟಿಯನ್‌ ಕ್ಯಾಂಪ್‌ನ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ನಲ್ಲಿದ್ದ ವ್ಯಕ್ತಿಗೆ ಜೂ. 16ರಂದು ಕೋವಿಡ್ ವೈರಸ್‌ ಇರುವುದು ಪತ್ತೆಯಾಗಿತ್ತು. ಇವರ ಸಂಪರ್ಕದಿಂದ ಹಾಸ್ಟೆಲ್‌ನಲ್ಲಿ ಅಡುಗೆ ಸಹಾಯಕಿಯಾಗಿದ್ದ 45 ವರ್ಷದ ಟಿಬೆಟಿಯನ್‌ ಮಹಿಳೆಗೂ ವೈರಸ್‌ ಹರಡಿದೆ.  ಈ ಮಹಿಳೆಗೆ ಪ್ರಥಮ ಸಂಪರ್ಕದಲ್ಲಿದ್ದ ಟಿ.ಸಿ.ವಿ. ಹಾಸ್ಟೆಲ್‌ ನಲ್ಲಿ ಕ್ವಾರಂಟೈನ್‌ನಲ್ಲಿದ್ದ 54 ಜನರು ಹಾಗೂ ಈ ಮಹಿಳೆಯ ಕ್ಯಾಂಪ್‌ ನಂ.2ರಲ್ಲಿರುವ ಮನೆಯಲ್ಲಿ 4 ಜನರನ್ನು ಸೇರಿ ಒಟ್ಟು 60 ಜನರನ್ನು ಪ್ರಥಮ ಸಂಪರ್ಕವೆಂದು ಗುರುತಿಸಲಾಗಿದ್ದು, ಮನೆಯ 4 ಜನರನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಕೋವಿಡ್ ದೃಢಪಟ್ಟ ಟಿಬೆಟಿಯನ್‌ ಮಹಿಳೆಯನ್ನು ಕಾರವಾರದ ಕೋವಿಡ್‌ -19 ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ತಹಶೀಲ್ದಾರ್‌ ಶ್ರೀಧರ ಮುಂದಲಮನಿ, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಎಚ್‌.ಎಫ್‌. ಇಂಗಳೆ, ಟಿಬೆಟಿಯನ್‌ ಕ್ಯಾಂಪ್‌ನ ಆಡಳಿತ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದರು. ತಾಲೂಕಿನಲ್ಲಿ ಈವೆರೆಗೆ 4 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಈಗಾಗಲೆ ಇಬ್ಬರು ಗುಣಮುಖರಾಗಿ ಮನೆಗೆ ತೆರಳಿದ್ದು, ಇಬ್ಬರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next