ಚಿಕ್ಕನಾಯಕನಹಳ್ಳಿ: ಕೋವಿಡ್ ಅರ್ಭಟ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದಿನನಿತ್ಯ ಪಾಸಿಟಿವ್ ಕೇಸ್ ದಾಖಲಾಗುತ್ತಿದೆ.ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಜನಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಕೋವಿಡ್‌ರೋಗಿಗಳ ಮೇಲೆ ತಾಲೂಕು ಆಡಳಿತ ನಿಗಾವಹಿಸದಿದ್ದರೆ, ತಾಲೂಕಿನಲ್ಲಿ ಕೊರೊನಾ ಕೈಮೀರುವುದರಲ್ಲಿ ಅನುಮಾನವಿಲ್ಲ.ತಾಲೂಕಿನಲ್ಲಿ ಪ್ರಸ್ತುತ 96 ಪಾಸಿಟಿವ್ ಕೇಸ್‌ಪತ್ತೆಯಾಗಿವೆ.
ಪಾಸಿಟಿವ್ ಬಂದ ವ್ಯಕ್ತಿಯ ಪ್ರೈಮರಿಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವವರಿಗೆ ಹೆಚ್ಚುಕೊರೊನಾ ಪಾಸಿಟಿವ್ ದಾಖಲಾಗುತ್ತಿದೆ. ಆರೋಗ್ಯಇಲಾಖೆ ಹಾಗೂ ತಾಲೂಕು ಆಡಳಿತ ಕೊರೊನಾತಡೆಗಟ್ಟಲು ಹಲವು ಕಾರ್ಯಕ್ರಮ ಹಾಕಿಕೊಂಡಿದ್ದು,ಸಾರ್ವಜನಿಕರ ಸಹಕಾರ ವಿಲ್ಲದ್ದೆ ಕಾರ್ಯಕ್ರಮಕಾರ್ಯರೂಪಕ್ಕೆ ಬರದಂತಾಗುತ್ತಿದೆ.
ಸರ್ಕಾರಿ ಕಚೇರಿಗಳಲ್ಲಿಯೂ ಕೋವಿಡ್ ಮಾರ್ಗಸೂಚನೆ ಪಾಲನೆಮಾಡಲಾಗುತ್ತಿಲ್ಲ. ಶುಕ್ರವಾರ ಬೆಸ್ಕಾಂ ಕಚೇರಿಯಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದು,ಕಚೇರಿಯನ್ನು ಸ್ಯಾನಿಟೈಸರ್ ಮಾಡಲಾಗಿದೆ.
96 ಪಾಸಿಟಿವ್ ಕೇಸ್: ಶುಕ್ರವಾರ ಒಂದೇ ದಿನ 31ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದ್ದು, ಒಟ್ಟುತಾಲೂಕಿನಲ್ಲಿ 96 ಪಾಸಿಟಿವ್ ಕೇಸ್‌ಗಳಿವೆ. 12 ಜನತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು,79 ಜನ ಹೋಂ ಐಸೋಲೇಶನ್‌ನಲ್ಲಿ ಇದ್ದಾರೆ.ಸರ್ಕಾರ 45ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತಿದ್ದು, ಆದರೆ, ಹಿರಿಯನಾಗರಿ ಕರು ಲಸಿಕೆ ಪಡೆಯಲು ಯಾಕೋ ಹಿಂಜರಿಯು ತ್ತಿ ದ್ದಾರೆ.
ಇದುವರೆಗೂ ಕೇವಲ ಶೇ.27ರಷ್ಟು ಜನಮಾತ್ರ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.ಕೋವಿಡ್ ಒಬ್ಬದಿಂದ ಒಬ್ಬರಿಗೆ ಹರಡುವಲಕ್ಷಣವಿರುವುದರಿಂದ ಪಾಸಿಟಿವ್ ರೋಗಿಗಳನ್ನುಗುಣಮುಖ ವಾಗುವವರೆಗೆ ಜನರ ಜೊತೆ ಸಂಪರ್ಕಕ್ಕೆಬಾರದಂತೆ ನೋಡಿಕೊಳ್ಳುವ ಅನಿವಾರ್ಯಉಂಟಾಗಿದೆ. ಪಾಸಿಟಿವ್ ರೋಗಿಗಳ ಜೊತೆಯಲ್ಲಿನವ್ಯಕ್ತಿಗಳಿಗೆ ಹೆಚ್ಚು ಪಾಸಿಟಿವ್ ಬರುತ್ತಿದ್ದು, ಇದರಿಂದಕೊರೊನಾ ಕೇಸ್ ಹೆಚ್ಚಾಗುತ್ತಿದೆ.
ಲಾಕ್‌ಡೌನ್, ಸೀಲ್‌ಡೌನ್ ಸಮಯದಲ್ಲಿ ಮನೆಯಲ್ಲಿ ಇರದೇಓಡಾಡುತ್ತಿದ್ದ ಪಾಸಿಟಿವ್ ರೋಗಿಗಳು, ಯಾವುದೇನಿರ್ಬಂಧವಿಲ್ಲದ ಸಮಯದಲ್ಲಿ ಐಸೋಲೇಶನ್‌ನಲ್ಲಿಇರುತ್ತಾರಾ?. ಪಾಸಿಟಿವ್ ಕೇಸ್‌ಗಳಿಗೆ ನಿರ್ಬಂಧಮಾಡದಿದ್ದರೆ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ.
ಚೇತನ್