Advertisement

ಬೆತ್ತಲೆಯಾಗಿ ನರಳಾಡಿದ ಕೋವಿಡ್ ಸೋಂಕಿತ ವೃದ್ಧ: ಡಿಸಿಎಂ ತವರೂರಿನ ವೃದ್ಧನ ನರಳಾಟ

03:17 PM Jul 17, 2020 | keerthan |

ಬೆಳಗಾವಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ತವರು ತಾಲೂಕಿನ ಕೋವಿಡ್-19 ಸೋಂಕಿತ ವೃದ್ಧನೋರ್ವ ಬಿಮ್ಸ್ ನ‌ ಕೋವಿಡ್ ಆಸ್ಪತ್ರೆಯಲ್ಲಿ ಬೆತ್ತಲಾಗಿ ನರಳಾಡಿರುವ ಮನಕಲುಕುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

Advertisement

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ 65 ವರ್ಷದ ವೃದ್ಧ ಕೋವಿಡ್-19 ಸೋಂಕಿತನಾಗಿ ಬಿಮ್ಸ್ ನಲ್ಲಿ ದಾಖಲಾಗಿದ್ದಾನೆ. ಆದರೆ ಬೆಡ್ ಸಿಗದೇ ನೆಲದ‌ ಮೇಲೆ ವೃದ್ಧನಿಗೆ ಬೆಡ್ ಹಾಕಿ‌ ಮಲಗಿಸಲಾಗಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧನಿಗೆ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ.‌ ವೃದ್ಧ ನರಳಾಡುತ್ತಿರುವ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಇಷ್ಟೆಲ್ಲ ವೃದ್ಧ ಬೆತ್ತಲೆಯಾಗಿ ಒದ್ದಾಡುತ್ತಿದ್ದರೂ ವೈದ್ಯರು ಇತ್ತ ನೋಡದೇ, ಕನಿಕರ ತೋರದೇ ಅಮಾನವೀಯವಗಿ ವರ್ತಿಸಿದ್ದಾರೆ.

ಜಿಲ್ಲಾಸ್ಪತ್ರೆ ವೈದ್ಯರು ವೃದ್ಧನಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ. ಬೆಡ್​ಗಳ ಕೊರತೆಯಿಂದಗಿ ನೆಲದ ಮೇಲೆ ಮಲಗಿಸಲಾಗಿದೆ. ವೃದ್ಧನಿಗೆ ಐದು ಗಂಟೆಗಳ ಕಾಲ ಸೂಕ್ತ ಚಿಕಿತ್ಸೆ ನೀಡಿಲ್ಲ. ವೃದ್ಧನ ಗಂಟಲು ದ್ರವ ಮಾದರಿ ಪಡೆದು ತಪಾಸಣೆ​ ಮಾಡಿದಾಗ ಕೋವಿಡ್-19 ಸೋಂಕು ದೃಢಪಟ್ಟಿದೆ.

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ‌ವೃದ್ಧನಿಗೆ ಚಿಕಿತ್ಸೆ ನೀಡದೇ ಅಮಾನವೀಯವಾಗಿ ವರ್ತಿಸಲಾಗಿದೆ ಎಂದು ವೈದ್ಯರ ವಿರುದ್ಧ ವೃದ್ಧನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next