Advertisement

ಸಾಮಾನ್ಯವಾಗುತ್ತಿದೆಯೇ ಸೋಂಕು? : ಅಕ್ಟೋಬರ್‌ನಿಂದ ಇಳಿಕೆಯತ್ತ ಕೋವಿಡ್

02:12 AM Feb 12, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಬಹುತೇಕ ತಗ್ಗಿದೆ. ಆದರೆ ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಬದಲಿಗೆ ಇತರ ಸಾಂಕ್ರಾಮಿಕ ರೋಗಗಳಂತೆ ಪರಿಸರದ ಭಾಗ ವಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.

Advertisement

ಕಾಲರಾ, ಎಚ್‌1ಎನ್‌1ನಂತಹ ಸಾಂಕ್ರಾಮಿಕ ರೋಗಗಳು ದಶಕಗಳ ಹಿಂದೆ ಸಾಕಷ್ಟು ಕಾಡಿದ್ದವು. ಅನಂತರ ಸಂಪೂರ್ಣ ನಿರ್ಮೂಲನೆಯೂ ಆಗದೆ, ಹೆಚ್ಚು ಅಬ್ಬರವನ್ನೂ ಮಾಡದೆ ನಿಯಂತ್ರಿತ ಮಟ್ಟದಲ್ಲಿ ಉಳಿದುಕೊಂಡಿವೆ. ಇಂಥ ಸಾಂಕ್ರಾಮಿಕ ರೋಗಗಳ ಪಟ್ಟಿಗೆ ಕೊರೊನಾ ಕೂಡ ಸೇರ್ಪಡೆಯಾಗುತ್ತಿದೆ ಎನ್ನುತ್ತಿವೆ 2021ರ ಕೊರೊನಾ ಅಂಕಿ ಅಂಶಗಳು.

ಜ. 1ರ ಬಳಿಕ ರಾಜ್ಯದ 10 ಜಿಲ್ಲೆಗಳಲ್ಲಿ ಕೊರೊನಾ ಸಾವು ಶೂನ್ಯವಿದೆ. 17 ಜಿಲ್ಲೆಗಳಲ್ಲಿ ಬೆರಳೆಣಿಕೆ ಸಂಖ್ಯೆಯ ಸಾವು ವರದಿಯಾಗಿದೆ. ಅಲ್ಲದೆ ಸದ್ಯ 5 ಜಿಲ್ಲೆಗಳು ಅತೀ ಕಡಿಮೆ ಸಕ್ರಿಯ ಪ್ರಕರಣ ಹೊಂದಿವೆ. 20 ಜಿಲ್ಲೆಗಳು 100ಕ್ಕೂ ಕಡಿಮೆ ಪ್ರಕರಣಗಳನ್ನು ಹೊಂದಿವೆ. ಫೆ. 1ರಿಂದೀಚೆಗೆ 23 ಜಿಲ್ಲೆಗಳಲ್ಲಿ ಶೂನ್ಯ ಸಾವು, 6 ಜಿಲ್ಲೆಗಳಲ್ಲಿ ಬೆರಳೆಣಿಕೆ ಪ್ರಕರಣ ದಾಖಲಾಗಿರುವುದು ಗಮನಾರ್ಹ.

ಅಕ್ಟೋಬರ್‌ ಮಧ್ಯದಿಂದ ಸೋಂಕು ಇಳಿಕೆಯ ಹಾದಿ ಹಿಡಿ ದಿದ್ದು, ಬಳಿಕ ಅರ್ಧಕ್ಕರ್ಧ ಕುಸಿ ಯುತ್ತ ಬಂದಿದೆ. ಹೊಸ ವರ್ಷ ದಿಂದೀಚೆಗೆ ನಿತ್ಯ ಸರಾಸರಿ 500 ಕೊರೊನಾ ಪ್ರಕರಣಗಳು, 5ಕ್ಕಿಂತಲೂ ಕಡಿಮೆ ಸಾವು ವರದಿಯಾಗಿವೆ.

ಒಂದು ಸ್ಥಾನ ಕುಸಿದ ರಾಜ್ಯ
ದೇಶ ಮಟ್ಟದಲ್ಲಿಯೂ ಕರ್ನಾಟಕ 9.4 ಲಕ್ಷ ಪ್ರಕರಣಗಳೊಂದಿಗೆ 3ನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನಗಳಲ್ಲಿ ಮಹಾರಾಷ್ಟ್ರ (20.5 ಲಕ್ಷ), ಕೇರಳ (9.85 ಲಕ್ಷ) ಇವೆ.

Advertisement

26 ದಿನಗಳಲ್ಲಿ 70 ಲಕ್ಷ ಮಂದಿಗೆ ಲಸಿಕೆ
ದೇಶದಲ್ಲಿ ಗುರುವಾರ 26 ದಿನಗಳಲ್ಲಿ 70 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಈ ಮೂಲಕ ಜಗತ್ತಿನಲ್ಲಿಯೇ ಶೀಘ್ರಗತಿಯಲ್ಲಿ ಹೆಚ್ಚು ಜನರಿಗೆ ಲಸಿಕೆ ಹಾಕಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next