Advertisement

ರಾಜ್ಯದಲ್ಲಿ 25 ಸಾವಿರಕ್ಕಿಂತ ಕಡಿಮೆ ಕೋವಿಡ್ ಕೇಸ್: ಇಂದು 56 ಸಾವು

07:38 PM Jan 31, 2022 | Team Udayavani |

ಬೆಂಗಳೂರು : ರಾಜ್ಯ ದಲ್ಲಿ ದಿನನಿತ್ಯದ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಲೇ ಇದ್ದು, ಸೋಮವಾರ 24,172 ಹೊಸ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಅತೀ ಹೆಚ್ಚಿನ 10,692 ಹೊಸ ಪ್ರಕರಣಗಳು ದೃಢ ಪಟ್ಟಿವೆ. ಭಾನುವಾರ 28,264 ಹೊಸ ಪ್ರಕರಣಗಳು ದಾಖಲಾಗಿದ್ದವು.

Advertisement

ರಾಜ್ಯದಲ್ಲಿ ಧನಾತ್ಮಕ ದರ 17.11% ಇದ್ದು, 30,869 ಡಿಸ್ಚಾರ್ಜ್‌ಗಳು ಇಂದು ದಾಖಲಾಗಿವೆ. 2,44,331 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿ 1ಲಕ್ಷದ 34 ಸಾವಿರ ಪ್ರಕರಣಗಳಿವೆ.

ಇಂದು ರಾಜ್ಯದಲ್ಲಿ 56 ಸೋಂಕಿತರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.
ಇಂದು 1,41,240 ಮಂದಿಯ ಪರೀಕ್ಷೆ ಮಾಡಲಾಗಿದೆ.

ಜನವರಿ 23 ರಂದು ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 50 ಸಾವಿರ ದಾಟಿ ಆತಂಕ ನಿರ್ಮಾಣವಾಗಿತ್ತು, ಆ ಬಳಿಕ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next