Advertisement
ಹನೂರು ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಅರಣ್ಯದಂಚಿನ ಜನರು, ಬುಡಕಟ್ಟು ಜನರ ಪೋಡುಗಳು ಸಹ ಇದರಲ್ಲಿ ಸೇರಿವೆ. ಕೋವಿಡ್-19 ಪರಿಸ್ಥಿತಿಯನ್ನು ಶಾಸಕ ಆರ್. ನರೇಂದ್ರ ಹೇಗೆ ನಿಭಾಯಿಸುತ್ತಿದ್ದಾರೆ?
Related Articles
Advertisement
ಸೋಲಿಗರು, ಬೇಡಗಂಪಣರು ಕಾಡಿನೊಳಗೆವಾಸಿಸುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಹೇಗಿದೆ?
ಸೋಲಿಗರಿಗೆ ಸರ್ಕಾರದಿಂದ ಪಡಿತರ ವಿತರಿಸಲಾಗುತ್ತಿದೆ. ಪೌಷ್ಟಿಕ ಆಹಾರವನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ. 3 ತಿಂಗಳಿಗೊಮ್ಮೆ ಅಕ್ಕಿ, ರಾಗಿ, ದ್ವಿದಳ ಧಾನ್ಯಗಳು, ಮೊಟ್ಟೆ, ಬೆಲ್ಲ ತುಪ್ಪ ಇತ್ಯಾದಿ ನೀಡಲಾಗುತ್ತಿದೆ.ಸೋಲಿಗರಿಗೆ ಆಹಾರದ ಕೊರತೆ ಇಲ್ಲ.ಆದರೆ ಕಾಡೊಳಗಿನ ಗ್ರಾಮಗಳಲ್ಲಿರುವಬೇಡಗಂಪಣರಿಗೆ ಸ್ವಲ್ಪ ತೊಂದರೆಯಿದೆ. ಕೆಲಸಕ್ಕೆಹೋಗುತ್ತಿದ್ದರು. ವ್ಯಾಪಾರ ಮಾಡುತ್ತಿದ್ದರು.ಅನೇಕರು ಮಲೆ ಮಹದೇಶ್ವರ ದೇವಾಲಯದಲ್ಲಿಕೆಲಸ ಮಾಡುತ್ತಿದ್ದರು. ಈಗ ದೇವಾಲಯದಲ್ಲಿ ಕೆಲಸಇಲ್ಲ. ಬೇಡಂಪಣ ಕುಟುಂಬಗಳಿಗೆ ತಾಲೂಕುಆಡಳಿತದಿಂದ ನೆರವು ನೀಡಲಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ನೆರವು ನೀಡುತ್ತಿವೆ. ಅವರಿಗೆ ಇನ್ನೂಹೆಚ್ಚಿನ ನೆರವಿನ ಅಗತ್ಯವಿದೆ.
ಕೋವಿಡ್ ಸೋಂಕನ್ನು ನಿಯಂತ್ರಿಸಲುಆರೋಗ್ಯ ಇಲಾಖೆಗೆ ಪೂರಕವಾಗಿ ಶಾಸಕರಾಗಿ ನೀವು ಮಾಡುತ್ತಿರುವ ಕೆಲಸಗಳೇನು?
ಗ್ರಾಮ ಪಂಚಾಯಿತಿಗೊಂದು ಟಾಸ್ಕ್ಫೋರ್ಸ್‌ಮಾಡಿದ್ದೇನೆ. ಗ್ರಾಪಂ ಸದಸ್ಯರು, ವೈದ್ಯರು, ಆಶಾ,ಅಂಗನವಾಡಿ ಕಾರ್ಯಕರ್ತರು ಮನೆ ಸರ್ವೆ ಮಾಡಿ,ಪಾಸಿಟಿವ್ ಬಂದವರನ್ನು ಟ್ರಯಾಜ್‌ನಿಂದ ಕಡ್ಡಾಯವಾಗಿ ಕೋವಿಡ್ ಕೇರ್‌ಗೆ ಕಳುಹಿಸಲಾಗುತ್ತಿದೆ. ಟೆಸ್ಟಿಂಗ್ ಜಾಸ್ತಿ ಮಾಡಿಸಿದ್ದೇನೆ.ನಾನು ದಾನಿಗಳಿಗೆ ಮನವಿ ಮಾಡಿ, ಟಾಟಾ ಸ್ಮಾರಕಸಂಸ್ಥೆಯಿಂದ 24 ಆಕ್ಸಿಜನ್ ಸಾಂದ್ರಕಗಳನ್ನು ಹನೂರುತಾಲೂಕಿಗೆ ನೀಡಿದ್ದೇನೆ. 50 ಪಲ್ಸ್ ಆಕ್ಸಿಮೀಟರ್‌ಗಳನ್ನು ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡಿಸಿ ದ್ದೇನೆ. 5000 ಎನ್ 95 ಮಾಸ್ಕ್ಗಳನ್ನುಕೊರೊನಾ ವಾರಿಯರ್ಸ್‌ಗೆ ನೀಡಲಾಗಿದೆ.ಗ್ರಾಮ ಪಂಚಾಯಿತಿ 17 ಟಾಸ್ಕ್ ಫೋರ್ಸ್‌ಸಭೆಗಳನ್ನು ನಡೆಸಿದ್ದೇನೆ. ತಿಳಿವಳಿಕೆ ನೀಡಲಾಗುತ್ತಿದೆ.5 ತಾಲೂಕು ಮಟ್ಟದ ಸಭೆಗಳನ್ನು ನಡೆಸಿದ್ದೇನೆ.ವಾರಕ್ಕೆರಡು ದಿನ ಕೋವಿಡ್ ಕೇರ್ ಸೆಂಟರ್‌ಗಳಿಗೆಭೇಟಿ ನೀಡುತ್ತಿದ್ದೇನೆ.
ಕೋವಿಡ್ ನಿಯಂತ್ರಣದ ಕೆಲಸಗಳಿಗಾಗಿ ನಿಮ್ಮಶಾಸಕರ ನಿಧಿಯಿಂದ ಎಷ್ಟು ಹಣ ನೀಡಿದ್ದೀರಿ?
ಶಾಸಕರ ಅನುದಾನದಿಂದ 24 ಲಕ್ಷ ರೂ.ನೀಡಿದ್ದೇನೆ. ಇದರಲ್ಲಿ ಆ್ಯಂಬುಲೆನ್ಸ್ ಖರೀದಿಸಲಾಗುತ್ತಿದೆ. ಮಾಜಿ ಸಂಸದ ಧ್ರುವನಾರಾಯಣ ಅವರಿಗೆಮನವಿ ಮಾಡಿ, ಅವರಿಂದ ಇನ್ನೊಂದು ಆ್ಯಂಬುಲೆನ್ಸ್‌ಕೊಡಿಸಿದ್ದೇನೆ. ಇನ್ನೂ 26 ಲಕ್ಷ ರೂ. ಅನುದಾನ ಇದೆ.ಕೋವಿಡ್ ಸಂಬಂಧಿ ಕೆಲಸಗಳಿಗೆ ಹಣ ಬೇಕಾದರೆ,ಕೂಡಲೇ ಅದಕ್ಕೆ ನೀಡುತ್ತೇನೆ.
ಕೆ.ಎಸ್. ಬನಶಂಕರ ಆರಾಧ್ಯ