ದೇವನಹಳ್ಳಿ: ಕೊರೊನಾ ವಾರಿಯರ್ಸ್‌ತಮ್ಮ ಜೀವದ ಹಂಗು ತೊರೆದು ಸೋಂಕಿತರನ್ನು ಗುಣಪಡಿಸುತ್ತಿದ್ದಾರೆ. ಸೋಂಕು ಹರಡ ದಂತೆ ಎಚ್ಚರವಹಿಸಿದ್ದಾರೆ ಎಂದು ಜಿಪಂಸದಸ್ಯ ಕೆ.ಸಿ.ಮಂಜುನಾಥ್ ತಿಳಿಸಿದರು.
ತಾಲೂಕಿನ ಆಲೂರುದುದ್ದನಹಳ್ಳಿಗ್ರಾಪಂಯಲ್ಲಿ ಕಾಂಗ್ರೆಸ್ ಪಕ್ಷದಿಂದವಾರಿಯರ್ಸ್‌ಗೆ ಉಚಿತ ದಿನಸಿ ಕಿಟ್‌ವಿತರಿಸಿ ಮಾತನಾಡಿ, ಕೊರೊನಾ ವಾರಿಯ ರ್ಸ್‌ಗೆ ದಿನಸಿ ಕಿಟ್ ನೀಡಿ ಪ್ರೋತ್ಸಾಹಿಸಲಾಗಿದೆ. ಉತ್ತಮ ಸೇವೆಯಿಂದ ಕೊರೊನಾತಾಲೂಕಿನಲ್ಲಿ ಇಳಿಮುಖವಾಗಿದೆ.
ಇವರಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸೋಂಕುಕಡಿಮೆಯಾಗುತ್ತಿರುವ ಬೆನ್ನೆಲೆ ಜನರುಎಚ್ಚರ ತಪ್ಪಬಾರದು ಎಂದರು.ಜನರಿಗೆ ಕೊರೊನಾ ಪರೀಕ್ಷೆ ಗ್ರಾಪಂ ಅಧ್ಯಕ್ಷೆಗೌರಮ್ಮ ರಾಮಣ್ಣ ಮಾತನಾಡಿ, ಮೊಬೈಲ್‌ಕ್ಲಿನಿಕ್ ಮೂಲಕ ಜನರಿಗೆ ಕೊರೊನಾ ಪರೀಕ್ಷೆನಡೆಸಿ, ಪಾಸಿಟಿವ್ ಬಂದವರಿಗೆ ಕೋವಿಡ್‌ಕೇರ್ ಸೆಂಟರ್‌ಗಳಿಗೆ ದಾಖಲು ಮಾಡಲಾಗುತ್ತಿದೆ.
ಕೊರೊನಾ ವಾರಿಯರ್ಸ್‌ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮಗಳಲ್ಲಿಈಗಾಗಲೇ ಆಲೂರುದುದ್ದನಹಳ್ಳಿ ಗ್ರಾಪಂವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಸ್ಯಾನಿಟೈಸರ್‌ಮಾಡಲಾಗುತ್ತಿದೆ. ಕೊರೊನಾ ಕಡಿವಾಣಹಾಕಲು ಆರೋಗ್ಯ ಇಲಾಖೆ ಮತ್ತುವಾರಿಯರ್ಸ್‌ಗಳು ಹೆಚ್ಚು ಸಹಕಾರನೀಡುತ್ತಿದ್ದಾರೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್, ಗ್ರಾಪಂ ಉಪಾಧ್ಯಕ್ಷೆ ಕಾಂತಮ್ಮ,ಕನ್ನಮಂಗಲ ಗ್ರಾಪಂ ಅಧ್ಯಕ್ಷ ಕೆ.ಆರ್.ನಾಗೇಶ್, ಮುಖಂಡರಾದ ಡಿ.ಆರ್.ಮುನೇಗೌಡ, ಆಂಜಿನಪ್ಪ, ರಮೇಶ್,ಚಂದ್ರಪ್ಪ, ಗ್ರಾಪಂ ಸದಸ್ಯೆ ಮೀನಾಕ್ಷಿಮುನಿಕೃಷ್ಣ, ಗ್ರಾಪಂ ಪಿಡಿಒ ಸುಶೀಲಮ್ಮಹಾಜರಿದ್ದರು.