ಕೋಲಾರ: ಕೋವಿಡ್ ತಡೆಗೆ ಹೋಂ ಐಸೋಲೇಷನ್‌ನಿಲ್ಲಿಸಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆಸ್ಥಳಾಂತರಿಸಿ ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಸೂಚನೆ ನೀಡಿದರು.
ಭಾನುವಾರ ಜಿಲ್ಲೆಗೆ ಭೇಟಿ ನೀಡಿದ್ದ ಅವರು, ನಗರದ ಜಿಲ್ಲಾಸ್ಪತ್ರೆ, ಇಟಿಸಿಎಂ ಆಸ್ಪತ್ರೆಯ ಲಸಿಕಾಕೇಂದ್ರಗಳನ್ನು ಪರಿಶೀಲಿಸಿದ ನಂತರ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.ಹೋಂ ಐಸೋಲೇಷನ್‌ನಿಂದಾಗಿ ಸೋಂಕು ಹೆಚ್ಚುಹರಡಲು ಕಾರಣವಾಗಿದೆ. ಸೋಂಕಿತರು ಮಾರ್ಗಸೂಚಿ ಪಾಲಿಸುತ್ತಿಲ್ಲ, ಇದನ್ನು ತಡೆಯದಿದ್ದರೆಕೋವಿಡ್ ಮಾರಿ ಹಬ್ಬುತ್ತಲೇ ಹೋಗುತ್ತದೆ. ಈಕೂಡಲೇ ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ನಿಲ್ಲಿಸಿಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಂಕಿತರಿಗೆ ಆಕ್ಸಿಜನ್ ಬೆಡ್, ಐಸಿಯು ನೀಡಿಕೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ, ಅಂತಹದೂರುಗಳು ಬಾರದಂತೆ ಎಚ್ಚರವಹಿಸಿ ಎಂದ ಅವರು,ಸೋಂಕಿತರ ಸಂಖ್ಯೆ ಕಡಿಮೆಯಾಗಲು ಎಲ್ಲಾ ಅಗತ್ಯಕ್ರಮ ಕೈಗೊಳ್ಳಿ, ಪ್ರಾಣ ಉಳಿಸಿ ಎಂದು ತಾಕೀತುಮಾಡಿದರು.
ಸಿಬ್ಬಂದಿ, ವೈದ್ಯರ ನೇಮಕಕ್ಕೆ ಒಪ್ಪಿಗೆ: ಸಭೆಯಲ್ಲಿಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಜಗದೀಶ್ ಜಿಲ್ಲಾಸ್ಪತ್ರೆಯಲ್ಲಿನ ತಜ್ಞ ವೈದ್ಯರು,ಅರವಳಿಗೆ ತಜ್ಞರು, ಸಿಬ್ಬಂದಿ ಕೊರತೆಯನ್ನು ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತಂದು ಸಿಬ್ಬಂದಿ ಕೊರತೆಯಿಂದ ತೊಂದರೆಯಾಗಿದೆ, ಹಲವು ತಜ್ಞರು ಹೆಚ್ಚುಕಾಲ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.ಇದಕ್ಕೆ ಸ್ಪಂದಿಸಿದ ಮುಖ್ಯಕಾರ್ಯದರ್ಶಿ ರವಿಕುಮಾರ್,ಕೂಡಲೇ ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಒಪ್ಪಿಗೆ ನೀಡಿ ನೇಮಕಾತಿ ಪ್ರಕ್ರಿಯೆ ಮಾಡಿಮುಗಿಸಿ ಎಂದು ಸೂಚಿಸಿದರು.
ಕೋವಿಡ್ ಟೆಸ್ಟ್ ಹೆಚ್ಚಿಸಲು ಸೂಚನೆ: ಸೋಂಕು ಹರಡುವಿಕೆ ತಡೆಗೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಸಂಖ್ಯೆ ಹೆಚ್ಚಿಸಲು ಸೂಚಿಸಿದ ಅವರು, ಸೋಂಕಿತರಪ್ರಾಥಮಿಕ ಸಂಪರ್ಕ ಇರುವವರಿಗೆ ಟೆಸ್ಟ್ ಕಡ್ಡಾಯಗೊಳಿಸಿ ಎಂದು ಸೂಚಿಸಿದರು. ಕೋವಿಡ್ ಲಸಿಕೆಹಾಕುವ ಪ್ರಮಾಣವನ್ನು ಹೆಚ್ಚಿ ಸಲು ಸೂಚಿಸಿ, ಲಸಿಕೆ ಅಗತ್ಯತೆ ಇದ್ದರೆ ಗಮನಕ್ಕೆ ತನ್ನಿ ಲಸಿಕೆ ಹಾಕಿಸಿಕೊಳ್ಳಲುಜನತೆಯಲ್ಲಿ ಜಾಗೃತಿ ಮೂಡಿಸಿ ಎಂದು ತಿಳಿಸಿದರು.