Advertisement

ರಿಪೇರಿಗೆ ಹೋದ ಆ್ಯಂಬುಲೆನ್ಸ್ ವಾಪಸ್‌ ಬಂದಿಲ್ಲ

06:33 PM Jun 03, 2021 | Team Udayavani |

ಚಿಕ್ಕನಾಯಕನಹಳ್ಳಿ: ‌ತಾಲೂಕಿನಲ್ಲಿ ಕೋವಿಡ್‌ರೋಗಿಗಳನ್ನು ಕೋವಿಡ್‌ ಸೆಂಟರ್‌ಗಳಿಗೆ ಕರೆದೊಯ್ಯಲು, ಗುಣಮುಖರಾದವರನ್ನು ಮನೆಗೆಬಿಡಲು ತುರ್ತು ವಾಹನದ ಅವಶ್ಯಕತೆ ಇದೆ.ಸೋಂಕಿತರು ಕೋವಿಡ್‌ ಸೆಂಟರ್‌ಗೆ ಹೋಗಲು ಸಮಸ್ಯೆ ಉಂಟಾಗಿದೆ.ತಾಲೂಕಿನಲ್ಲಿ ಪ್ರತಿದಿನ ಕೋವಿಡ್‌ ಪಾಸಿಟಿವ್‌ಕೇಸ್‌ ದಾಖಲಾಗುತ್ತಿದ್ದು, ಮನೆಯಲ್ಲಿ ಐಸೋಲೇಷನ್‌ಗೆ ಅನುಕೂಲವಿಲ್ಲದವರುಕೋವಿಡ್‌ ಸೆಂಟರ್‌ಗೆ ದಾಖಲಾಗುತ್ತಿದ್ದಾರೆ.

Advertisement

ಕೋವಿಡ್‌ ಕೇಂದ್ರದಿಂದ ಪ್ರತಿದಿನ ಹಲವಾರುಸೋಂಕಿತರು ಗುಣಮುಖರಾಗಿ ಮನೆಗೆಹಿಂದಿರುಗುತ್ತಿದ್ದು, ಇವರಿಗೆ ಸಾರಿಗೆ ಸಮಸ್ಯೆಉಂಟಾಗುತ್ತಿದೆ. ಸೋಂಕಿತರು ಎಂಬ ಕಾರಣಕ್ಕೆಖಾಸಗಿ ವಾಹನಗಳು ಇವರನ್ನು ವಾಹನಕ್ಕೆ ಹತ್ತಿ ಸಲುಹಿಂಜರಿಯುತ್ತಿದ್ದು, ಇದರಿಂದ ಆಸ್ಪತ್ರೆಯ ಆ್ಯಂಬುಲೆನ್ಸ್‌ಗೆ ಹಲವಾರು ಗಂಟೆ ಕಾಯ್ದುಕುಳಿತುಕೊಳ್ಳುವ ಅನಿವಾರ್ಯ ಉಂಟಾಗಿದೆ.

ಆ್ಯಂಬುಲೆನ್ಸ್‌ ವಾಪಸ್‌ ಬಂದಿಲ್ಲ: ತಾಲೂಕುಆಸ್ಪತ್ರೆಯಲ್ಲಿ 5 ಆ್ಯಂಬುಲೆನ್ಸ್‌ಗಳಿದ್ದು, ಇವುಗಳ ಪೈಕಿಎರಡು ಆ್ಯಂಬುಲೆನ್ಸ್‌ ರಿಪೇರಿಗೆ ಹೋಗಿ ಹಲವಾರುತಿಂಗಳು ಕಳೆದಿದೆ. ಸದ್ಯ ಇರುವ 3 ಆ್ಯಂಬುಲೆನ್ಸ್‌ತುರ್ತು ರೋಗಿಗಳನ್ನು ದೂರದ ಆಸ್ಪತ್ರೆಗೆ ಬಿಡಲು,ಸಾವನಪ್ಪಿದ ರೋಗಿಯನ್ನು ಶವ ಸಂಸ್ಕಾರ ಮಾಡಲುಸೇರಿದಂತೆ ಕೊರೊನಾ ಸೋಂಕಿತರನ್ನು ಕೋವಿಡ್‌ ಸೆಂಟರ್‌ಗೆ ಹೋಗಲು ಕಾರ್ಯನಿರ್ವಹಿಸುತ್ತಿವೆ.

ಆ್ಯಂಬುಲೆನ್ಸ್‌ಗಳು ತುರ್ತು ಕೆಲಸಕ್ಕೆ ಹೋದಸಂದರ್ಭದಲ್ಲಿ ಕೋವಿಡ್‌ ಸೆಂಟರ್‌ನಿಂದಬಿಡುಗಡೆಕೊಂಡ ಹಾಗೂ ಸೋಂಕಿತರನ್ನುಕರೆದೊಯ್ಯಲು ವಾಹನ ಇಲ್ಲವಾಗಿವೆ. ಇದರಿಂದಕೋವಿಡ್‌ ರೋಗಿಗಳು ವಾಹನಕ್ಕಾಗಿ ಪರದಾಡುವಸ್ಥಿತಿ ಉಂಟಾಗಿದೆ.ಪಾಸಿಟಿವ್‌ ಬಂದ ವ್ಯಕ್ತಿಗಳನ್ನು ಕೋವಿಡ್‌ಸೆಂಟರ್‌ಗಳಿಗೆ ಬಿಡಲು ಸಹ ವಾಹನದ ಸಮಸ್ಯೆ ಉಂಟಾಗಿದೆ. ಕೋವಿಡ್‌ ಕೇಂದ್ರಗಳು ಕಾರ್ಯನಿರ್ವಹಿಸುವವರಿಗೆಪಾಸಿಟಿವ್‌ವ್ಯಕ್ತಿಗಳನ್ನುಹಾಗೂಗುಣಮುಖರಾದ ವ್ಯಕ್ತಿಗಳ ಸಂಚಾರಕ್ಕೆ ಪ್ರತೇಕ ವಾಹನ ಸೌಕರ್ಯ ಅಗತ್ಯವಾಗಿದೆ. ಇದರಿಂದಸೋಂಕಿತರಿಗೆ ಅನುಕೂಲವಾಗುತ್ತದೆ ಎಂದುಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚೇತನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next