ದೊಡ್ಡಬಳ್ಳಾಪುರ: ಕೊರೊನಾ ಸಂಕಷ್ಟದ ಸಮಯದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥಮಕ್ಕಳ ರಕ್ಷಣೆ, ಪೋಷಣೆಗಾಗಿ ಕೇಂದ್ರ ಮತ್ತುರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನುರೂಪಿಸಿದೆ.
ಇಂತಹ ಮಕ್ಕಳಿದ್ದರೆ ಕೂಡಲೇಸಂಬಂಧಪಟ್ಟಂತಹ ಅಧಿಕಾರಿಗಳಿಗೆ ತಿಳಿಸಬೇಕುಎಂದು ಡಿವೈಎಸ್‌ಪಿ ಟಿ.ರಂಗಪ್ಪ ಹೇಳಿದರು.ನಗರದ ಗಂಗಾಧರಪುರ ಲೇಔಟ್‌ನಲ್ಲಿಜನಸಹಾಯಕೆ.ಸಿ.ವಿ.ಟಿ ಹಾಗೂ ಭಗವಾನ್ ಬುದ್ಧಸಮುದಾಯ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿನಡೆದ ಆರೋಗ್ಯ ತಪಾಸಣೆ ಹಾಗೂ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಕಡು ಬಡವರಿಗೆಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರಕೆಲವು ಮಹತ್ವಪೂರ್ಣ ಕ್ರಮಗಳನ್ನು ಕೈಗೊಂಡಿದೆಎಂದರು.
ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ:ಅನಾಥಮಕ್ಕಳಿಗಾಗಿ ಬಾಲ ಸೇವಾ ಯೋಜನೆಯನ್ನುಪ್ರಕಟಿಸಿದ್ದು, ಮಾಸಿಕ 3,500 ರೂ. ಸಹಾಯಧನವನ್ನು ನೀಡಲಿದೆ. ತಂದೆ-ತಾಯಿಯನ್ನುಕಳೆದುಕೊಂದ ಮಕ್ಕಳನ್ನು ನೋಂದಾಯಿತ ಮಕ್ಕಳಪಾಲನ ಸಂÓಗಳಿೆ§ ಗೆ ದಾಖಲಿಸಿ, ಆರೈಕೆಮಾಡಲಾಗುವುದು.
ಈ ಮಕ್ಕಳಿಗೆ ವಸತಿ ಶಾಲೆಗಳಲ್ಲಿಉಚಿತ ಶಿಕ್ಷಣ, 10ನೇ ತರಗತಿ ತೇರ್ಗಡೆಯಾದವರಿಗೆಉನ್ನತ ವ್ಯಾಸಂಗ ಅಥವಾ ಕೌಶಲ ಅಭಿವೃದ್ಧಿಗೆಲ್ಯಾಬ್‌ಟ್ಯಾಪ್ ಅಥವಾ ಟ್ಯಾಬ್ , 21 ವರ್ಷಪೂರೈಸಿರುವ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಅಥವಾವಿವಾಹ, ಸ್ವಯಂ ಉದ್ಯೋಗಕ್ಕೆ 1 ಲಕ್ಷ ರೂ.ಸಹಾಯಧನ ನೀಡಲಾಗುವುದು. ಅನಾಥ ಮಕ್ಕಳಿಗೆಒಬ್ಬ ಮಾರ್ಗದರ್ಶಿ ಅಥವಾ ಹಿತೈಷಿಯನ್ನು ಒದಗಿಸಿ, ಅವರ ಜೀವನಕ್ಕೆ ಆತ್ಮಸೈರ್ಯ ತುಂಬಲಾಗುವುದು.
ಯಾರೊಬ್ಬರು ವಿಚಲಿತರಾಗುವುದು ಬೇಡ.ಕೊರೊನಾ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಮನೆಯಿಂದ ಹೊರಗೆ ಬಾರದಿರುವಾಗ ಯುವ ಜನರುಸೇರಿ ಇಂತಹ ಉತ್ತಮ ಕೆಲಸ ಮಾಡುತ್ತಿರುವುದುಶ್ಲಾಘನೀಯ ಎಂದರು.ಕೊರೊನಾ ತಡೆಗೆ ಆತ್ಮಸ್ಥೆ çರ್ಯವೇ ಮಾರ್ಗ:ತಹಶೀಲ್ದಾರ್ ಟಿ.ಎಸ್ ಶಿವರಾಜು ಮಾತನಾಡಿ,ಕೊರೊನಾ ಎದುರಿಸಲು ನಮ್ಮಲ್ಲಿನ ಆತ್ಮಸೈರ್ಯ,ಧನಾತ್ಮಕ ಮನೋಭಾವವೇ ಏಕೈಕ ಮಾರ್ಗವಾಗಿದೆ.ಯಾವುದೇ ದೊಡ್ಡ ಆಸ್ಪತ್ರೆ, ಲಕ್ಷ ಲಕ್ಷ ಖರ್ಚುಮಾಡಿದರುಕೊನೆಗೆ ನಮ್ಮೊಳಗಿನ ಧೈರ್ಯವೇ ನಮ್ಮಜೀವ ಉಳಿಸುವುದು.
ಹೀಗಾಗಿ ಕೊರೊನಾ ಸೋಂಕಿತರು ಭಯಪಡಬಾರದು ಎಂದು ತಿಳಿಸಿದರು.ವೈದ್ಯರಾದ ಶೇಖ್ ಸೆಹ್ರಾನ್, ಕೆಸಿವಿಟಿ ಜಿಲ್ಲಾ ಸಂಚಾಲಕ ರಾಜು ಸಣ್ಣಕ್ಕಿ, ಮುಖಂಡರಾದನವೀನ್ ಕುಮಾರ್, ಲೋಕೇಶ್, ಛಲವಾದಿಸುರೇಶ್, ಸಾಬೀರ್, ಜಗನ್ನಾಥ, ಮುತ್ತುರಾಜು,ಗಂಗಾಧರ್, ನವೀದ್, ಭರತ್, ಶಂಕರ್, ಪ್ರಕಾಶ್,ಆಶಾ ಕಾರ್ಯಕರ್ತರಾದ ಮಂಜುಳಾ,ಮುನಿರತ್ನಮ್ಮ ಹಾಜರಿದ್ದರು.