Advertisement
ನಿಮ್ಮ ಕ್ಷೇತ್ರದಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ?
Related Articles
Advertisement
ತಾಲೂಕು ಕೋವಿಡ್ ಟಾಸ್ಕ್ಫೋರ್ಸ್ ಅಧ್ಯಕ್ಷ ನಾಗಿ ಎರಡು ಮೂರು ದಿನಕ್ಕೊಮ್ಮೆತಾಲೂಕು ಟಾಸ್ಕ್ಫೋರ್ಸ್ ಸಭೆ ನಡೆಸುತ್ತಿದ್ದೇನೆ. ಈಗ ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಟಾಸ್ಕ್ ಫೋರ್ಸ್ ಮೀಟಿಂಗ್‌ಮಾಡು ತ್ತಿದ್ದೇನೆ. ಸೋಮವಾರ ಸಂತೆ ಮರಹಳ್ಳಿಹೋಬಳಿಯ ಆರು ಗ್ರಾಮಗಳಲ್ಲಿ ಮೀಟಿಂಗ್‌ನಡೆಸಿದೆ. ಈ ಸಭೆಗಳಲ್ಲಿ ತಹಶೀಲ್ದಾರ್, ತಾಪಂ ಇಒ,ತಾಲೂಕು ಆರೋಗ್ಯ ಅಧಿಕಾರಿ, ಗ್ರಾಪಂ ಅಭಿವೃದ್ಧಿಅಧಿಕಾರಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮದಮುಖಂಡರು ಆಶಾ,ಅಂಗನವಾಡಿಕಾರ್ಯಕರ್ತರುಇರುತ್ತಾರೆ.ಈಸಭೆಯಲ್ಲಿ ಮುಖ್ಯವಾಗಿ ನಾನುಹೇಳುತ್ತಿರುವುದು, ಹೋಂ ಐಸೋಲೇಷನ್‌ನಲ್ಲಿಯಾರನ್ನೂ ಇಡಬೇಡಿ. ಸೋಂಕಿತರನ್ನು ಕೋವಿಡ್‌ಕೇರ್‌ಗೆ ಕಳುಹಿಸಿ, ಇದರಿಂದ ಸೋಂಕು ಪ್ರಕರಣಗಳನ್ನು ತುಂಬಾಕಡಿಮೆ ಮಾಡಬಹುದು.ಅಲ್ಲದೇ ನನ್ನ ಕ್ಷೇತ್ರದಲ್ಲಿ 5 ಕೋವಿಡ್ ಕೇರ್‌ಸೆಂಟರ್ ಇದೆ. 2ತಾಲೂಕು ಆಸ್ಪತ್ರೆಗಳು, ಒಂದುಸಮುದಾಯ ಆರೋಗ್ಯ ಕೇಂದ್ರವಿದೆ. ಅವುಗಳಿಗೆಲ್ಲಾ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಗಳನ್ನು ಗಮನಿಸುತ್ತಿದ್ದೇನೆ. ಈ ಕುರಿತು ಆರೋಗ್ಯಾಧಿಕಾರಿಗಳಜೊತೆ ಚರ್ಚಿಸುತ್ತೇನೆ.
ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ನಡೆದು24 ದಿನಗಳಾದರೂ ರಾಜ್ಯ ಸರ್ಕಾರ ತಪ್ಪಿತಸ್ಥರವಿರುದ್ಧ ಕ್ರಮ ಕೈಗೊಂಡಿಲ್ಲ ಏಕೆ?
ಮೂವರು ಸದಸ್ಯರ ಸಮಿತಿ ಹೈಕೋರ್ಟ್‌ಗೆವರದಿ ನೀಡಿದೆ. ಈ ವರದಿಯನ್ನು ಪರಿಶೀಲಿಸಿಹೈಕೋರ್ಟ್ ತೀರ್ಮಾ® ಕೈಗೊಳ್ಳಬೇಕು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್‌ಗಳುಸಾಲುತ್ತಿಲ್ಲ. ಇದಕ್ಕೇನು ಪರಿಹಾರ?ಈ ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಸರ್ಕಾರಬೆಡ್‌ಗಳನ್ನು ಜಾಸ್ತಿ ಮಾಡಬೇಕು. ಈ ಬಗ್ಗೆ ಸಚಿವರಗಮನಕ್ಕೆ ತರುತ್ತೇನೆ. ಮೂರನೇ ಅಲೆ ಬರುವ ಹೊತ್ತಿಗೆ ಮಕ್ಕಳಿಗೋಸ್ಕರ ಒಂದು ನಿಗದಿತ ಆಸ್ಪತ್ರೆ ಸಹ ಬೇಕು.
ಕ್ಷೇತ್ರದ ಜನರಿಗೆ ನಿಮ್ಮ ಮನವಿ ಏನು?
ಹೋಂ ಐಸೋಲೇಶನ್ ಶೂನ್ಯ ಮಾಡಿದರೆ ಈ ಕೊರೊನಾ ಸೋಂಕುಹರಡುವಿಕೆಯ ಚೈನ್ ಕಡಿತ ವಾಗುತ್ತದೆ. ಇನ್ನೊಂದು ವಾರದಲ್ಲಿಪರಿಸ್ಥಿತಿ ಇನ್ನಷ್ಟು ನಿಯಂತ್ರಣಕ್ಕೆ ಬರುತ್ತದೆ. ಜನರು ಸಹಕರಿಸಬೇಕು. ಹ ಳ್ಳಿಗಳಲ್ಲಿ ರೋಗ ಲಕ್ಷಣ ಕ ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ನಿರ್ಲಕ್ಷ್ಯ ಮಾಡಬೇಡಿ. ತಕ್ಷಣ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗಬಹುದು.
ಕೆ.ಎಸ್. ಬನಶಂಕರ ಆರಾಧ್ಯ