Advertisement
ಮುಂಬೈ, ಗೋವಾ, ಬೆಂಗಳೂರುಸೇರಿ ಹೊರ ರಾಜ್ಯಗಳಲ್ಲಿ ವ್ಯವಹಾರ ಮತ್ತುಉದ್ಯೋಗಳನ್ನರಸಿ ಚನ್ನರಾಯಪಟ್ಟಣತಾಲೂಕಿನಿಂದ ಹೋದವರು ಹೆಚ್ಚಿನಸಂಖ್ಯೆಯಲ್ಲಿ ದ್ದಾರೆ. ಲಾಕ್‌ಡೌನ್ ಜಾರಿಯಾದನಂತರ ಅವರೆಲ್ಲರೂ ಸ್ವಗ್ರಾಮಗಳಿಗೆ ಸೋಂಕಿನೊಂದಿಗೆ ವಾಪಸ್ಸಾಗಿ ಸ್ಥಳೀಯರಿಗೂ ಹರಡುತ್ತಾರೆಎಂಬ ಅಪವಾದವಿದೆ.
Related Articles
Advertisement
ಹೌದು, ಹಾಸನ ಜಿಲ್ಲೆಯಲ್ಲಿ ಹಾಸನದ ನಂತರಚನ್ನರಾಯಪಟ್ಟಣ ತಾಲೂಕಿನಲ್ಲಿ ಕೊರೊನಾಪ್ರಕರಣ ಹೆಚ್ಚು. ಚನ್ನರಾಯಪಟ್ಟಣ ತಾಲೂಕಿನ 25ಸಾವಿರಕ್ಕೂ ಹೆಚ್ಚು ಮಂದಿ ಮುಂಬೈ, ಬೆಂಗಳೂರುಸೇರಿ ವಿವಿಧ ಮಹಾನಗರಗಳಲ್ಲಿ ಬದುಕುಕಟ್ಟಿಕೊಂಡಿದ್ಧಾರೆ. ಲಾಕ್‌ಡೌನ್‌ಜಾರಿಯಾಗಿದ್ದರಿಂದ ಈಗಾಗಲೇ 15ಸಾವಿರ ಮಂದಿ ತಾಲೂಕಿನ ಗ್ರಾಮೀಣಭಾಗಕ್ಕೆ ಆಗಮಿಸಿದ್ದು ಪಟ್ಟಣಕ್ಕಿಂತಗ್ರಾಮೀಣ ಭಾಗದಲ್ಲಿ ಸೋಂಕುವ್ಯಾಪಕವಾಗಿ ಹರಡಿದೆ. ಸೋಂಕಿತರಿಗೆಲ್ಲಾಕೋವಿಡ್ ಕೇಂದ್ರ ಹಾಗೂ ಆಸ್ಪತ್ರೆಯಲ್ಲಿಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಈಗಪ್ರತಿನಿತ್ಯವೂ 150 ರಿಂದ 200 ಮಂದಿಗುಣಮುಖರಾಗುತ್ತಿದ್ದಾರೆ.ಕಳೆದ 2-3 ದಿನಗಳಿಂದ ಸೋಂಕಿತರಸಂಖ್ಯೆ ಕಡಿಮೆ ಆಗುತ್ತಿದೆ. ಗುಣಮುಖರಾಗು ತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸೋಂಕಿಗೆ ಮೃತರಾಗುವವರ ಸಂಖ್ಯೆ ಕಡಿಮೆ ಆಗಬೇಕಿದೆ. ಅದ ಕ್ಕಾಗಿಚಿಕಿತ್ಸಾ ವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ.
ತಾಲೂಕಿನ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವ್ಯವಸ್ಥೆಹೇಗಿದೆ, ಜನ ಏನಂತ?
ಕೊರೊನಾ 2ನೇ ಅಲೆಯಲ್ಲಿ ಸೋಂಕಿನ ಪ್ರಕರಣಹೆಚ್ಚಿದ್ದರಿಂದ ಚಿಕಿತ್ಸಾ ವ್ಯವಸ್ಥೆ ಕೊರತೆ ಉಂಟಾಯಿತು.ವಿಶೇಷವಾಗಿ ಆಮ್ಲಜನಕಯುಕ್ತ ಹಾಸಿಗೆಗೆ ತ್ರೀವಕೊರತೆ ಎದುರಾಯಿತು. ಈಗ ತಕ್ಕ ಮಟ್ಟಿಗೆ ಸೌಲಭ್ಯದೊರೆತಿವೆ. ಅದರೆ, ತಾಲೂಕಿನಲ್ಲಿ 12 ಮಂದಿವೈದ್ಯರು, 20 ಮಂದಿ ನರ್ಸ್ ಸಮಸ್ಯೆ ಇದೆ. ವೆಂಟಿಲೇಟರ್‌ಗೆ ಅಗತ್ಯ ಇರುವಷ್ಟು ಸಿಬ್ಬಂದಿ ಕೊರತೆ ಇದೆ.ಹೀಗಾಗಿ ಚನ್ನರಾಯಪಟ್ಟಣದ ಆಸ್ಪತ್ರೆಗೆ ಡಿಸಿಎಂಅಶ್ವತ್ಥನಾರಾಯಣ, ಆರೋಗ್ಯ ಸಚಿವಡಾ.ಸುಧಾಕರ್, ಜಿಲ್ಲಾ ಮಂತ್ರಿ ಕೆ.ಗೋಪಾಲಯ್ಯಅವರನ್ನು ಆಹ್ವಾನಿಸಿ ಅವರಿಗೆ ಮನವರಿಕೆಮಾಡಿಕೊಟ್ಟು ಚಿಕಿತ್ಸಾ ಸೌಲಭ್ಯ ಪಡೆಯುವ ಪ್ರಯತ್ನಮಾಡಿದ್ದೇನೆ. ಪರಿಣಾಮವಾಗಿ ತಾಲೂಕು ಆಸ್ಪತ್ರೆಗೆಆಕ್ಸಿಜನ್ ಪ್ಲಾಂಟ್ ಮಂಜೂರಾಗಿದೆ. ವೈದ್ಯರ ಹುದ್ದೆಗೆನೇಮಕಾತಿಯೂ ಆಗುತ್ತಿದೆ.
ಸೋಂಕಿತರು, ಸಂಕಷ್ಟದಲ್ಲಿಇರುವವರಿಗೆ ಹೇಗೆಸ್ಪಂದಿಸುತ್ತಿರುವಿರಿ?
ಕನಿಷ್ಠ ವಾರಕ್ಕೆ ಒಮ್ಮೆಯಾದರೂಕೊರೊನಾ ಕೇಂದ್ರಗಳಿಗೆ ಭೇಟಿ ನೀಡಿಚಿಕಿತ್ಸೆ ಪಡೆಯುತ್ತಿರುವವರಿಗೆ ಧೈರ್ಯತುಂಬುತ್ತಿರುವೆ. ನಿತ್ಯ ಗುಣಮಟ್ಟದ ಆಹಾರಪೂರೈಕೆ ಆಗುತ್ತಿದೆಯೇ ಎಂಬುದರ ಬಗ್ಗೆ ವರದಿಪಡೆದು ಪರಿಶೀಲಿಸುತ್ತಿರುವೆ. ಕೊರೊನಾ ಕೇರ್‌ಕೇಂದ್ರದಲ್ಲಿನ ಮೂಲ ಸೌಕರ್ಯಕ್ಕೆ ಕೊರತೆ ಆಗದಂತೆತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದೇನೆ.ಪ್ರತಿ 2ದಿನಕ್ಕೆ ಒಮ್ಮೆ ತಾಲೂಕು ಮಟ್ಟದ ಅಧಿಕಾರಿಗಳಸಭೆ ಮಾಡಿ ಮಾಹಿತಿ ಪಡೆದು ಲಾಕ್‌ಡೌನ್‌ಕಟ್ಟಿನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆನೀಡುವೆ.
ಕ್ಷೇತ್ರದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವ್ಯವಸ್ಥೆಹೇಗಿದೆ?
ಮೊದಲನೆಯದಾಗಿ ಸರ್ಕಾರದಿಂದ ಸಿಗುವಸೌಲಭ್ಯ ಅರ್ಹರಿಗೆ ತಲುಪಬೇಕು. ಈ ಬಗ್ಗೆಚುನಾಯಿತ ಪ್ರತಿನಿಧಿಗಳಸಹಕಾರದೊಂದಿಗೆ ಹೆಚ್ಚು ಗಮನಹರಿಸಿರುವೆ. ಪರಿಣಾಮಚನ್ನರಾಯಪಟ್ಟಣದ ಸರ್ಕಾರಿಆಸ್ಪತ್ರೆಯಲ್ಲಿ ಹೆಚ್ಚುವರಿ ಐಸಿಯೂಬೆಡ್ ವ್ಯವಸ್ಥೆಯಾಗಿದೆ. 3 ಕೊರೊನಾಕೇರ್ ಕೇಂದ್ರ ತೆರೆದು ಮೂಲಕ ನೂರಾರುಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರವಣಬೆಳಗೊಳ,ಹಿರೀಸಾವೆ, ದಂಡಿಗನಹಳ್ಳಿ ಹೋಬಳಿ ಕೇಂದ್ರದಲ್ಲಿನವಸತಿ ಶಾಲೆಯಲ್ಲಿ ಕೊರೊ ನಾ ಕೇರ್ ಕೇಂದ್ರ ತೆರೆದುಗ್ರಾಮೀಣ ಭಾಗದಲ್ಲಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸಿಸೋಂಕಿನಿಂದ ಗುಣಮುಖರನ್ನಾಗಿಮಾಡಲಾಗುತ್ತಿದೆ.
ಸಂಕಷ್ಟದಲ್ಲಿ ಇರುವವರಿಗೆ ನಿಮ್ಮವೈಯಕ್ತಿಕ ಕೊಡುಗೆ ಏನು?
ವೈಯಕ್ತಿಕವಾಗಿ ಸಾಕಷ್ಟು ಮಂದಿಗೆ ಚಿಕಿತ್ಸೆಗೆ ವ್ಯವಸ್ಥೆಮಾಡಿರುವೆ. ಆದರೆ, ನಾನು ಮಾಡಿದ ಸಹಾಯವನ್ನುನಾನೇ ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಆದರೆ,ಬೇರೆಯವರೂ ಸಂಕಷ್ಟದಲ್ಲಿರುವವರಿಗೆ ನೆರವಾಗಲುಪ್ರೇರಣೆ ಆಗಲಿ ಎಂದು ಕೆಲ ಉದಾಹರಣೆ ನೀಡುತ್ತೇನೆ. ಪೊಲೀಸ್ ಇಲಾಖೆ ಎಲ್ಲಾ ಸಿಬ್ಬಂದಿಗೆ ಮಾಸ್ಕ್,ಸ್ಯಾನಿಟೈಜರ್ ನೀಡಲಾಗಿದೆ. ಆರೋಗ್ಯ ಇಲಾಖೆ 40ಸಿಬ್ಬಂದಿಗೆ ನಿತ್ಯವೂ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ 250 ಪೊಟ್ಟಣ ಆಹಾರ ವಿತರಣೆ ಮಾಡಲಾಗುತ್ತಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 10 ಮಾಸ್ಕ್ ನೀಡಲಾ ಗಿದೆ. ಕೊರೊನಾಕೇರ್ ಕೇಂದ್ರಗಳಿಗೆ ಅಗತ್ಯ ಔಷಧಿ ಯನ್ನು ಆರೋಗ್ಯಇಲಾಖೆ ಸಹಕಾರದೊಂದಿಗೆ ಒದ ಗಿಸುತ್ತಿದ್ದೇನೆ.ಹೀಗೆ ನನ್ನ ಕೈಲಾದ ನೆರವು ನೀಡಿದ್ದೇನೆ. ಶಾಸಕನಾಗಿಇದು ನನ್ನ ಕರ್ತವ್ಯ ಎಂದು ಭಾವಿಸಿರುವೆ.
ಜಿಲ್ಲಾಡಳಿತ, ಸರ್ಕಾರಕ್ಕೆ ತಮ್ಮ ಸಲಹೆಏನು?
ಜಿಲ್ಲೆಯ ಶಾಸಕರ ನಿರಂತರ ಒತ್ತಡಗಳಿಂದಾಗಿಕಳೆದೆರಡು ವಾರಗಳಿಂದ ಚನ್ನರಾಯಪಟ್ಟಣ ತಾಲೂಕಿಗಷ್ಟೇ ಅಲ್ಲ ಜಿಲ್ಲೆಯ ಎಲ್ಲಾ ಕಡೆ ಸೋಂಕಿತರಿಗೆಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸುತ್ತಿದೆ. ಆದರೆಬೇಡಿಕೆಯಷ್ಟು ಲಸಿಕೆ ಪೂರೈಕೆ ಮಾಡುತ್ತಿಲ್ಲ.ತಾಲೂಕಿನಲ್ಲಿ ಶೇ.20 ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಸರ್ಕಾರ ಹೆಚ್ಚು ಲಸಿಕೆ ನೀಡಿದರೆ ತಾಲೂಕಿನಸಮುದಾಯ ಕೇಂದ್ರ, ಪ್ರಾಥಮಿಕ ಆರೋಗ್ಯಕೇಂದ್ರದ ಮೂಲಕ ಜನರಿಗೆ ಲಸಿಕೆ ಹಾಕಿಸಲುಶ್ರಮಿಸುತ್ತೇನೆ. ಲಸಿಕೆ ಪೂರೈಕೆ ಪ್ರಮಾಣ ಹೆಚ್ಚಲಿಎಂದು ಒತ್ತಾಯಿಸುತ್ತೇನೆ. ಹಾಗೆಯೇ ಜನರೂಕೊರೊನಾ ನಿಯಂತ್ರಣಕ್ಕೆ ಸಹಕಾರ ನೀಡಲಿ ಎಂದುಆಶಯ ವ್ಯಕ್ತಪಡಿಸುತ್ತೇನೆ.
ಶಾಮಸುಂದರ್ ಕೆ.ಅಣ್ಣೇನಹಳ್ಳಿ