Advertisement
ಇದುವರೆಗೂ ಮಾಲೂರು, ಕೋಲಾರ ತಾಲೂಕುಗಳಲ್ಲಿ ಅತಿಹೆಚ್ಚು ಎಂದರೆ 300ಕ್ಕೂ ಹೆಚ್ಚು ಪ್ರಕರಣಒಂದೇ ದಿನ ದಾಖಲಾಗಿರುವ ನಿದರ್ಶನಗಳಿವೆ.ಇತರೆ ತಾಲೂಕುಗಳಲ್ಲಿ ಇಂತಹ ಪರಿಸ್ಥಿತಿ ಇಲ್ಲ.ವಲಸಿಗರಿಂದ ಸೋಂಕು: ಒಂದು ವಾರದಿಂದಮಾಲೂರು ಪಟ್ಟಣದಲ್ಲಿ ಸೋಂಕಿನ ಪ್ರಮಾಣಕಡಿಮೆ ಆದಂತೆ ಕಾಣುತ್ತಿದ್ದರೂ, ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ.
ರೈಲಿನಲ್ಲಿ ಮಾಲೂರು ಪ್ರವೇಶಮಾಡುತ್ತಿರುವ ಜನರ ಜೊತೆಗೆ ಇಲ್ಲಿನ ಇಟ್ಟಿಗೆಕಾರ್ಖಾನೆಗಳು, ಕೋಳಿ ಫಾರಂಗಳಲ್ಲಿ ಕೆಲಸಮಾಡುವ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ,ಗುಜರಾತ್, ಅಸ್ಸಾಂ ರಾಜ್ಯಗಳ ಕೂಲಿ ಕಾರ್ಮಿಕರುಸುರಕ್ಷತಾ ಕ್ರಮ ಅನುಸರಿಸದ ಕಾರಣ ಸೋಂಕಿನಪ್ರಮಾಣವು ಹೆಚ್ಚಾಗುತ್ತಿದೆ ಎನ್ನುವುದು ಕೊರೊನಾನಿಯಂತ್ರಣ ಸಮಿತಿ ಅಭಿಪ್ರಾಯವಾಗಿದೆ. ಕೆಲವು ಸಾವು ದಾಖಲಾಗಿಲ್ಲ: ಸರ್ಕಾರದ ಅಂಕಿಅಂಶ ಪ್ರಕಾರ ತಾಲೂಕಿನಲ್ಲಿ ಕೊರೊನಾದಿಂದಗುರುವಾರದವರೆಗೂ 55 ಮಂದಿ ಮೃತಪಟ್ಟಿದ್ದಾರೆ.ಇದು ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವಮಾಲೂರು ತಾಲೂಕಿನಲ್ಲಿ ಕೆಲವು ಮೃತ ವ್ಯಕ್ತಿಗಳವಿವರ ದಾಖಲೇ ಆಗಿಲ್ಲ ಎನ್ನುವುದು ಕೆಲವರಅಭಿಪ್ರಾಯವಾಗಿದೆ.
ಶಾಸಕರಿಂದ ಶ್ರಮ: ಸರ್ಕಾರದ ಅಸಹಕಾರದನಡುವೆ ದಾನಿಗಳು, ಸ್ಥಳೀಯ ಕೈಗಾರಿಕೆಗಳು,ಗ್ರಾಮ ದೇವತೆ ಮಾರಿಕಾಂಬ ದೇವಾಲಯ ಸಮಿತಿಸಹಕಾರದೊಂದಿಗೆ ಅಗತ್ಯವಾಗಿರುವ ಎಲ್ಲಾ ಮುಂಜಾ ಗ್ರತಾ ಕ್ರಮ ಮತ್ತು ಸೌಲಭ್ಯವನ್ನು ಪಡೆಯು ವಲ್ಲಿ ಸಫಲವಾಗಿರುವ ಶಾಸಕ ಕೆ.ವೈ.ನಂಜೇಗೌಡ ನೇತೃತ್ವದ ತಾಲೂಕು ಅಡಳಿತ, ಅಗಲಿರಳುಕೊರೊನಾ ನಿಯಂತ್ರಣಕ್ಕೆ ಶ್ರಮವಹಿಸುತ್ತಿದೆ.
Related Articles
Advertisement
ಎಂ.ರವಿಕುಮಾರ್