Advertisement
ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಹೆಚ್ಚುಸೋಂಕಿತರು ಬಲಿಯಾಗಿದ್ದಾರೆ. ನಮ್ಮ ತಾಲೂಕಿನಲ್ಲಿಅಂತಹ ಘಟನೆ ಸಂಭವಿಸಬಾರದು ಎಂದು ಈಗಾಗಲೇ100ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್ ತುಂಬಿಸಿಕೊಟ್ಟಿದ್ದೇವೆ. ಈ ಕಾರ್ಯ ನಿತ್ಯ ನಡೆಯುತ್ತಿದೆ.ನಗರದ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು,ಸಿಬ್ಬಂದಿ ಕೊರತೆ ನೀಗಿಸಲು ತಾವೇ ಕೈಯಿಂದತಿಂಗಳಿಗೆ 6.5 ಲಕ್ಷ ರೂ.ನಂತೆ ಮೂರು ತಿಂಗಳು19.50 ಲಕ್ಷ ರೂ. ಖರ್ಚು ಮಾಡಿ ವೈದ್ಯರು, ಸಿಬ್ಬಂದಿಯನ್ನು ಒದಗಿಸಿದ್ದೇನೆ. ಇನ್ನು ವೈದ್ಯಕೀಯಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಸೋಂಕುತಗುಲದಂತೆ ರಕ್ಷಣಾ ಸಾಮಗ್ರಿ ವಿತರಣೆ ಮಾಡಿದ್ದೇನೆ.
Related Articles
Advertisement
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ತಕ್ಷಣ ಅದನ್ನು ತಡೆಯುವುದು ಯಾರಿ ಗಾದ್ರೂ ಕಷ್ಟ ಆಗುತ್ತೆ. ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳುಕೈಜೋಡಿಸಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಬೇಕು.
ಕೊರೊನಾ ನಿಯಂತ್ರಣ ಕಾರ್ಯದಲ್ಲಿ ವೈದ್ಯರು,ಅಧಿಕಾರಿಗಳ ಜೊತೆ ನಿಮ್ಮ ಸಮನ್ವಯ ಹೇಗಿದೆ?
ಅವರಿಗೆ ನಿಮ್ಮ ಸಲಹೆ ಏನು?ಪ್ರತಿ 8-10 ದಿನಗಳಿಗೊಮ್ಮೆ ಅಧಿಕಾರಿಗಳ ಸಭೆನಡೆಸುತ್ತೇನೆ. ಸೋಂಕಿತರ ದಾಖಲಾತಿ, ಗುಣಮುಖರಾ ದವರ ಮಾಹಿತಿ ಪಡೆಯುತ್ತೇನೆ. ವೈದ್ಯರಿಗೆ ಮತ್ತುಅಧಿಕಾರಿಗಳಿಗೆ ನಮ್ಮ ಕಡೆಯಿಂದ ಸಲಹೆ, ಸಹಾಯಮಾಡುತ್ತಿದ್ದೇನೆ. ಅಧಿಕಾರಿಗಳು ನಮ್ಮ ಸಲಹೆಗಳನ್ನುಕಾರ್ಯರೂಪಕ್ಕೆ ತರುತ್ತಿದ್ದಾರೆ. ಕೊರೊನಾನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಗ್ರಾಮೀಣ ಜನರು ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ,ನಿಮ್ಮ ಕಡೆಯಿಂದ ಜನರಿಗೆ ಮನವಿ ಏನು?
ಲಸಿಕೆ ಪಡೆದ ತಕ್ಷಣ ನಮಗೆ ಕೊರೊನಾಸೋಂಕು ಬರುವುದಿಲ್ಲ ಎಂದು ಹೇಳುವುದಿಲ್ಲ,ಸೋಂಕು ಕಾಣಿಸಿಕೊಂಡರೂ ಐಸಿಯು ಅಥವಾವೆಂಟಿಲೇಟರ್‌ಗೆ ಹೋಗುವ ಸ್ಥಿತಿ ತಪ್ಪುತ್ತದೆ.ತ್ವರಿತವಾಗಿ ಗುಣಮುಖರಾಗಲು ಸಹಕಾರಿಆಗುತ್ತದೆ. ಲಸಿಕೆ ಪಡೆಯದೇ ಹಲವು ಮಂದಿಮೃತಪಟ್ಟು ತಮ್ಮ ಕುಟುಂಬ ಕಳೆದುಕೊಂಡಿದ್ದಾರೆ.ಹೀಗಾಗಿ, ವದಂತಿಗಳಿಗೆ ಕಿವಿಗೊಡದೇ ನಮ್ಮಗ್ರಾಮೀಣ ಜನರು ಲಸಿಕೆ ಹಾಕಿಸಿಕೊಂಡುಆರೋಗ್ಯಕರ ಜೀವನ ಸಾಗಿಸಬೇಕು.
ಕೊರೊನಾ ಪರೀಕ್ಷೆ ಮಾಡಿಸಲುಹಿಂಜರಿಯುವ ಜನತೆಗೆ ನಿಮ್ಮ ಸಲಹೆ ಏನು?
ಯಾವುದೇ ಒಂದು ಮನೆಯಲ್ಲಿ ಒಬ್ಬರಿಗೆಕೊರೊನಾ ಪಾಸಿಟಿವ್ ಬಂದಿದೆ ಎಂದರೆ ಆಮನೆಯವರೆಲ್ಲರೂ ಕೊರೊನಾ ಪರೀಕ್ಷೆಮಾಡಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವುದು ಮುಖ್ಯ.ಪರೀಕ್ಷೆ ಮಾಡಿಸಿಕೊಳ್ಳದೆ, ಸೋಂಕು ಹೆಚ್ಚಾದಾಗ ಸಂಕಟಪಡುವುದು ಸರಿಯಲ್ಲ. ತಮ್ಮ ಮನೆ ಬಳಿ ಬರುವಕೊರೊನಾ ವಾರಿಯರ್ಗೆ ಸಹಕರಿಸಿ, ಕೊರೊನಾಪರೀಕ್ಷೆ ಮಾಡಿಸಿ ಅವಶ್ಯಕ ಚಿಕಿತ್ಸೆ ಪಡೆದು ಆರೋಗ್ಯಕರಜೀವನ ಸಾಗಿಸಲು ಜನರಲ್ಲಿ ಮನವಿ ಮಾಡುತ್ತೇನೆ.
ಕಾಗತಿ ಶ್ರೀನಿವಾಸ್