Advertisement

 ಕೋವಿಡ್‌ ಆರೈಕೆ ಕೇಂದ್ರಕೆ ಸಿಎಂ ಭೇಟಿ, ಪರಿಶೀಲನೆ

08:56 PM May 29, 2021 | Team Udayavani |

ತುಮಕೂರು: ಕೊರೊನಾ ತೀವ್ರತೆ ಹೆಚ್ಚಾಗಿರುವಜಿಲ್ಲೆಗಳಿಗೆ ಪ್ರತಿ 15 ದಿನಕ್ಕೊಮ್ಮೆ ಒಂದು ಜಿಲ್ಲೆಗೆ ಭೇಟಿನೀಡಲು ನಿರ್ಧರಿಸಿರುವ ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಮೊದಲ ಭೇಟಿಯಾಗಿಕಲ್ಪತರು ನಾಡು ತುಮಕೂರಿಗೆ ಭೇಟಿ ನೀಡಿಅಧಿಕಾರಿಗಳ ಸಭೆ ನಡೆಸಿ ನಂತರ ಕೋವಿಡ್‌ ಕೇರ್‌ಸೆಂಟರ್‌ಗಳನ್ನು ಪರಿಶೀಲಿಸಿದರು.

Advertisement

ನಗರ ಸಮೀಪದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಬಳಿ ಇರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಡಳಿತದ ವತಿಯಿಂದ ಹಲವು ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿಪ್ರಾಥಮಿಕ ಹಂತದಲ್ಲಿರುವ ಕೋವಿಡ್‌ ಸೋಂಕಿತರಿಗೆಚಿಕಿತ್ಸೆ ನೀಡುತ್ತಿರುವ ಬಗ್ಗೆ ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಸಿಎಂಗೆ ಮಾಹಿತಿ ನೀಡಿದರು.

ಸಿದ್ಧಗಂಗಾ ಮಠದ ಕೋವಿಡ್‌ ಕೇರ್‌ ಸೆಂಟರ್‌,ಟೂಡಾ ಟ್ರಕ್‌ ಟರ್ಮಿನಲ್‌ ಬಳಿ ಇರುವ ಕ್ರೀಡಾ ಸಮುಚ್ಛಾಯದ ಕೋವಿಡ್‌ ಕೇರ್‌ ಸೆಂಟರ್‌, ತುಮಕೂರುನಗರದ ಹೃದಯಭಾಗದಲ್ಲಿರುವ ಶ್ರೀ ರೇಣುಕಾ ವಿದ್ಯಾಪೀಠದಲ್ಲಿರುವ ಕೋವಿಡ್‌ ಕೇರ್‌ ಸೆಂಟರ್‌ ಹಾಗೂರೆಡ್‌ಕ್ರಾಸ್‌ ಸಂಸ್ಥೆಯಿಂದ ಬೆಳಗುಂಬದಲ್ಲಿ ಕೋವಿಡ್‌ಕೇರ್‌ ಸೆಂಟರ್‌ ಕಾರ್ಯನಿರ್ವಹಿಸುತ್ತಿವೆ ಎಂದುಮಾಹಿತಿ ನೀಡಿದರು.

ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ ಸಿಂಗ್‌,ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಮಹಾನಗರ ಪಾಲಿಕೆವ್ಯಾಪ್ತಿಯಲ್ಲಿ ಕೋವಿಡ್‌ ವಾರ್‌ ರೂಮ್‌ಪ್ರಾರಂಭಿಸಿದ್ದು, ಉಚಿತವಾಗಿ ಆ್ಯಂಬುಲೆನ್ಸ್‌ ಹಾಗೂಜನ ಸೇವಾ ರಥದ ವ್ಯವಸ್ಥೆ ಮಾಡಿರುವ ಬಗ್ಗೆಮುಖ್ಯಮಂತ್ರಿಗಳಿಗೆ ತಿಳಿಸಿದರು. ಮಹಾನಗರ ಪಾಲಿಕೆಮೇಯರ್‌ ಬಿ.ಜಿ. ಕೃಷ್ಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next