ಕೋಲಾರ: ಜಿಲ್ಲಾಡಳಿತ ಹಾಗೂಜನಪ್ರತಿನಿ ಧಿಗಳ ಸಹಕಾರದಿಂದಜಿಲ್ಲೆಯಲ್ಲಿ ಕೊರೊನಾ ಹತೋಟಿಗೆತರಲು ಸಾಧ್ಯವಾಗಿದೆ ಎಂದು ಸಂಸದಎಸ್.ಮುನಿಸ್ವಾಮಿ ಹೇಳಿದರು.
ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜ ಸೇವಕಸಿಎಂಆರ್ ಶ್ರೀನಾಥ್ ಮತ್ತು ಹರೀಶ್‌ನೇತೃತ್ವದಲ್ಲಿ ಉಚಿತ ಕೋವಿಡ್ ಮೆಡಿ ಸಿನ್‌ಕಿಟ್ ವಿತರಿಸಿ ಮಾತನಾಡಿ, ಜಿಲ್ಲೆಯಲ್ಲಿಕಠಿಣ ಲಾಕ್‌ಡೌನ್ ಜಾರಿಯಿಂದಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಆಗುತ್ತಿದೆ ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಇಂಚರಗೋವಿಂದರಾಜು ಮಾತನಾಡಿ, ಜಿಲ್ಲಾಕೇಂದ್ರದ ಸ್ಯಾನಿಟೋರಿಯಂನಲ್ಲಿ ವಿಶೇಷಅನುದಾನ 5 ಕೋಟಿ ರೂ.ನಲ್ಲಿ ಆಸ್ಪತ್ರೆಯನಿರ್ಮಾಣಕ್ಕೆ ಸಿದ್ಧವಾಗಿದ್ದು, ಇದಕ್ಕೆ ಜಿಲ್ಲಾಉಸ್ತುವಾರಿ ಸಚಿವ, ಸಂಸದ, ಜನಪ್ರತಿನಿಧಿಗಳು, ಡೀಸಿ, ಅರಣ್ಯ ಇಲಾಖೆ ಅಧಿ ಕಾರಿಗಳು ಸಹಕರಿಸಲಿದ್ದಾರೆ ಎಂದರು.
ರಾಜ್ಯ ಸರಕಾರ ಎನ್‌ಒಸಿ ಪತ್ರನೀಡುವ ಮೂಲಕ ಆರೋಗ್ಯಕ್ಕೆ ಇಲಾಖೆಗೆ ಜಮೀನು ವರ್ಗಾವಣೆಗೊಂಡನಂತರ ಕಟ್ಟಡ ಕಾಮಗಾರಿಯನ್ನುಪ್ರಾರಂಭಿಸಲು ಡೀಸಿ ಜೊತೆಚರ್ಚಿಸಲಾಗುತ್ತದೆ ಎಂದು ಹೇಳಿದರು.ಜಿಲ್ಲಾ ಧಿಕಾರಿ ಡಾ.ಆರ್.ಸೆಲ್ವಮಣಿಮಾತನಾಡಿ, ಹೋಂಐಸೋಲೇಷನ್‌ನಲ್ಲಿ ಇರುವ ಸೋಂಕಿತರಿಗೆ ವೈದ್ಯರು ನೀಡುವಸಲಹೆ ಸೂಚನೆ ಪಡೆದು, ಕೋವಿಡ್‌ಕಿಟ್‌ನಲ್ಲಿ ಇರುವ ಮಾತೆ ಸೇವನೆಮಾಡಿದ್ರೆ, ಶೀಘ್ರ ಗುಣಮುಖರಾಗಿಹೊರಬರಬಹುದು ಎಂದು ಹೇಳಿದರು.
ಸಮಾಜ ಸೇವಕ ಸಿಎಂಆರ್ ಶ್ರಿನಾಥ್‌ಮಾತನಾಡಿ, ಜಿಲ್ಲೆಯಲ್ಲಿ ಸೋಂಕಿತರಸಂಖ್ಯೆ ಹೆಚ್ಚು ಇದ್ದರೂ ಸರ್ಕಾರ ಮತ್ತುಜಿಲ್ಲಾಡಳಿತ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸುತ್ತಿದೆ ಎಂದರು.