Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ನಡೆದ ಆರೋಗ್ಯಇಲಾಖೆ,ಕೋವಿಡ್ ತಡೆನಿಟ್ಟಿನಲ್ಲಿನೇಮಕವಾಗಿರುವನೋಡಲ್ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿದರು.ಲಸಿಕೆ ನೀಡುವ ಕಾರ್ಯವನ್ನು ಯೋಜನಾ ಬದ್ಧವಾಗಿ ನಿರ್ವಹಿಸಬೇಕು. ಎಷ್ಟು ಜನರಿಗೆ ಲಸಿಕೆ ನೀಡಬೇಕು ಎಂಬ ಬಗ್ಗೆ ಮೊದಲೇ ಕಾರ್ಯಯೋಜನೆಹಾಕಿಕೊಂಡು ಮಾಹಿತಿ ನೀಡಬೇಕು.
Related Articles
Advertisement
ಸೋಂಕಿತರೊಂದಿಗೆ ದೂರವಾಣಿ ಮೂಲಕಪ್ರತಿನಿತ್ಯವೂ ಸಂಪರ್ಕದಲ್ಲಿದ್ದು,ಗುಣಮುಖರಾಗುವವರೆಗೂ ಅಗತ್ಯ ಮಾರ್ಗದರ್ಶನ, ಸಲಹೆ, ಸಮಾಲೋಚನೆ ಮಾಡಬೇಕು ಎಂದರು.ಹೊಣೆಗಾರಿಕೆಇರಲಿ:ಗ್ರಾಪಂವ್ಯಾಪ್ತಿಯಲ್ಲಿಕೋವಿಡ್‌ಮುಂಜಾಗ್ರತಾಕ್ರಮಗಳ ಸಂಬಂಧ ಜಾಗೃತಿ ಕಾರ್ಯಆಯೋಜನೆ ಮಾಡಬೇಕು.130 ಗ್ರಾಪಂಗೂ ಜಾಗೃತಿಕಾರ್ಯ ಉಸ್ತುವಾರಿ ನಿರ್ವಹಿಸುವ ಸಲುವಾಗಿಕಾಲೇಜು ಉಪನ್ಯಾಸಕರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರನ್ನು ಆಯಾ ಗ್ರಾಪಂ ಕ್ಯಾಪ್ಟನ್‌ಗಳೆಂದುನಿಯೋಜನೆಮಾಡಲಾಗುತ್ತದೆ.ಮೇಲುಸ್ತುವಾರಿಗಾಗಿ19ಪ್ರಾಂಶುಪಾಲರನ್ನು ನೋಡಲ್‌ಅಧಿಕಾರಿಗಳನ್ನಾಗಿನೇಮಕ ಮಾಡುತ್ತಿದ್ದು, ಈ ಅರಿವು ಮೂಡಿಸುವಕಾರ್ಯವನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಎಂ.ಸಿ.ರವಿ, ವೈದ್ಯಕೀಯ ಕಾಲೇಜಿನ ಡೀನ್‌ಡಾ.ಸಂಜೀವ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಟಿ. ಜವರೇಗೌಡ, ಪದವಿ ಪೂರ್ವಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ,ನೋಡಲ್ ಅಧಿಕಾರಿಗಳಾದ ಕಾವೇರಿ ವನ್ಯಜೀವಿವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್,ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ನಾಗರಾಜು,ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ,ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕವೀರಭದ್ರಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿಶಿವಕುಮಾರ್ ಮತ್ತಿತರರಿದ್ದರು.