Advertisement

ದಿನಗಟ್ಟಲೆ ಕಾದರೂ ಸಿಗದ ಲಸಿಕೆ: ಪ್ರತಿಭಟನೆ

04:43 PM May 28, 2021 | Team Udayavani |

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಲಸಿಕಾಯಣಯೋಜನೆಯಡಿ 45 ವರ್ಷ ಮೇಲ್ಪಟ್ಟವರಿಗೆಲಸಿಕೆ, 18 ವರ್ಷ ಮೇಲ್ಪಟ್ಟ ಮುಂಚೂಣಿಕಾರ್ಯಕರ್ತರಿಗೆ ಲಸಿಕೆ ಹಾಕಲಾಗುತ್ತಿದೆಎಂದು ಸರ್ಕಾರ ಪ್ರಚಾರ ಮಾಡುತ್ತಿದೆ.ಆದರೆ ಲಸಿಕೆಗಳ ಸರಬರಾಜು ಸೂಕ್ತ ಸಮಯಕ್ಕೆ ಆಗದೇ, ಜನರು ಸಾಲುಗಟ್ಟಿ ನಿಲ್ಲಬೇಕಿದೆ.

Advertisement

ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿಯೂ ಅರ್ಹ 45 ವರ್ಷ ಮೇಲ್ಟಟ್ಟವರಿಗೆಲಸಿಕೆ ಸಿಗದೇ ಅಲೆದಾಡುವಂತಾಗಿದೆ.ಲಸಿಕೆಗಾಗಿ ಪ್ರತಿಭಟನೆ: ತಾಲೂಕಿನದೊಡ್ಡಬೆಳವಂಗಲ ಗ್ರಾಪಂ ವ್ಯಾಪ್ತಿಯದೊಡ್ಡಹೆಜ್ಜಾಜಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಲಸಿಕೆಗಾಗಿ ನೂರಾರು ಜನಸಾಲುಗಟ್ಟಿ ನಿಂತಿದ್ದು ಲಸಿಕೆ ನೀಡದೇವಾಪಸ್‌ ಕಳುಹಿಸಿದ ಸಿಬ್ಬಂದಿ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರಾಂತ ರೈತ ಸಂಘದ ತಾಲೂಕುಕಾರ್ಯದರ್ಶಿ ಸಿ.ಎಚ್‌.ರಾಮಕೃಷ್ಣ,ದೊಡ್ಡಹೆಜ್ಜಾಜಿ ಪಿ.ಎಚ್‌.ಸಿ.ಯಲ್ಲಿ ಸರ್ಕಾರಿನಿಗದಿಪಡಿಸಿರುವ ಅರ್ಹ ಎಲ್ಲ ವಯೋಮಾನದವರಿಗೆ ಲಸಿಕೆ ನೀಡುವುದಾಗಿ ತಿಳಿಸಿದ್ದರು.ಕೊ ವಾಕ್ಸಿನ್‌ 2ನೇ ಡೋಸ್‌ ಕೊಡುವುದಾಗಿಹಿಂದೆಯೇ ತಿಳಿಸಿದ್ದರು. ಆದರೆ ಸುಮಾರು100ಕ್ಕಿಂತ ಹೆಚ್ಚು ರೈತರು ಕೂಲಿ ಕಾರ್ಮಿಕರು,ಮಹಿಳೆಯರು ಲಸಿಕೆ ಪಡೆಯಲು ಬಂದಿದ್ದು ಲಸಿಕೆ ಇಲ್ಲ ಎಂದು ಹೇಳುತ್ತಿದ್ದಾರೆ.ಆದರೆ ತಹಶೀಲ್ದಾರ್‌ ಭೇಟಿ ನೀಡಿದಾಗಲಸಿಕೆ ಲಭ್ಯವಿದೆ ಎನ್ನುತ್ತಾರೆ.

ದೊಡ್ಡಬೆಳವಂಗಲ ಮತ್ತು ಚಿಕ್ಕಬೆಳವಂಗಲ ಗ್ರಾಮಗಳಲ್ಲಿ ಅತ್ಯಧಿಕ ಕೋವಿಡ್‌ ಕೇಸ್‌ಗಳಿದ್ದರೂಗ್ರಾಮಗಳಲ್ಲಿ ಕ್ಯಾಂಪ್‌ ಮತ್ತು ಮನೆಮನೆನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲಎಂದು ದೂರಿದರು.ಪ್ರಾಂತ ರೈತ ಸಂಘದ ಅಧ್ಯಕ್ಷ ವಿಜ¿åಕುಮಾರ್‌, ಗ್ರಾಪಂ ಅಧ್ಯಕ್ಷ ರಾಮಕೃಷ್ಣಯ್ಯ,ಸದಸ್ಯ ಸದಾಶಿವಮೂರ್ತಿ, ಗ್ರಾಪಂ ಮಾಜಿಸದಸ್ಯರಾದ ಸಿ.ರಮೇಶ್‌, ರವಿಕುಮಾರ್‌,ಗಿರೀಶ್‌ಗೌಡ, ಮೋಹನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next