ಮಂಡ್ಯ: ಜಿಲ್ಲೆಯಲ್ಲಿ ಮತ್ತೆ ಸೋಂಕಿನಪ್ರಕರಣಗಳು ಏರಿಕೆ ಕಂಡಿದ್ದು,ಬುಧವಾರ 806 ಮಂದಿಗೆ ಸೋಂಕುಆವರಿಸಿದ್ದು, 5 ಮಂದಿ ಮೃತಪಟ್ಟಿದ್ದಾರೆ.
ಮೃತ 5 ಮಂದಿಯ ಪೈಕಿ ಮಂಡ್ಯ,ಮಳವಳ್ಳಿ, ಕೆ.ಆರ್.ಪೇಟೆಯಲ್ಲಿ ತಲಾಒಬ್ಬರು, ನಾಗಮಂಗಲದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಎಲ್ಲರೂ ಕೊರೊನಾಸೋಂಕಿನ ಜತೆಗೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದರಿಂದ ಸಾವಿನ ಸಂಖ್ಯೆ 427ಕ್ಕೇರಿದೆ.ಜಿಲ್ಲೆಯಾದ್ಯಂತ 806 ಮಂದಿಗೆ ಸೋಂಕು ಆವರಿಸಿದೆ. ಮಂಡ್ಯ 147,ಮದ್ದೂರು 146, ಮಳವಳ್ಳಿ 138, ಪಾಂಡವ ಪುರ 88, ಶ್ರೀರಂಗಪಟ್ಟಣ 149, ಕೆ.ಆರ್.ಪೇಟೆ 77, ನಾಗಮಂಗಲ57 ಹಾಗೂ ಹೊರ ಜಿಲ್ಲೆಯ 4 ಮಂದಿಗೆಸೋಂಕು ಆವರಿಸಿದೆ. ಇದುವರೆಗೂ ಜಿಲ್ಲೆ ಯಲ್ಲಿ ಒಟ್ಟು 57429 ಪ್ರಕರಣಗಳು ದಾಖಲಾಗಿವೆ.
ಅದರಂತೆ 432 ಮಂದಿಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೂ51,591 ಮಂದಿ ಚೇತರಿಸಿಕೊಂಡಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 5,409 ಸಕ್ರಿಯಪ್ರಕರಣಗಳಿದ್ದು, ಇದರಲ್ಲಿ 595 ಸರ್ಕಾರಿಆಸ್ಪತ್ರೆ, 157 ಖಾಸಗಿ ಆಸ್ಪತ್ರೆ, 1430ಮಂದಿ ಕೋವಿಡ್ ಕೇರ್ ಸೆಂಟರ್‌ಹಾಗೂ 3227 ಮಂದಿ ಮನೆಗಳಲ್ಲೇಚಿಕಿತ್ಸೆ ಪಡೆಯುತ್ತಿದ್ದಾರೆ. 3,451ಮಂದಿಗೆ ಪರೀಕ್ಷೆ ನಡೆಸಲಾಗಿತ್ತು.
ಅದರಲ್ಲಿ 2,485 ಆರ್‌ಟಿಪಿಸಿಆರ್ ಹಾಗೂ966 ಮಂದಿಗೆ ರ್ಯಾಪಿಡ್ ಪರೀಕ್ಷೆ ಮಾಡಿಸಿ ಕೊಂಡಿದ್ದರು. ಇದುವರೆಗೂ ಒಟ್ಟು7,49,835 ಮಂದಿ ಪರೀಕ್ಷೆಗೊಳಗಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾ ಕಾರಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.