ಹೊನ್ನಾಳಿ: ಕೊರೊನಾ ಮೂರನೇ ಅಲೆಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿದಿನೇ ದಿನೇ ಹೆಚ್ಚುತ್ತಿದ್ದು ಮುನ್ನೆಚ್ಚರಿಕೆಯಾಗಿಎಚ್.ಕಡದಕಟ್ಟೆ ಗ್ರಾಮದ ಬಳಿರುವಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿಕೋವಿಡ್ ಕೇರ್ ಸೆಂಟರ್ ತೆರೆಯಲುಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಿಎಂರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಕೊರೊನಾ ವಿಪತ್ತು ನಿರ್ವಹಣಾ ಸಮಿತಿಸಭೆ ಹಾಗೂ ಗಣರಾಜ್ಯೋತ್ಸವ ಕುರಿತುಪೂರ್ವಬಾವಿ ಸಭೆಯಲ್ಲಿ ಅವರುಮಾತನಾಡಿದರು.ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ54 ಸಕ್ರೀಯ ಪ್ರಕರಣಗಳಿದ್ದು, ಅವಳಿತಾಲೂಕಿನಲ್ಲಿ ದಿನೇ ದಿನೇ ಕೊರೊನಾಪ್ರಕರಣಗಳು ಹೆಚ್ಚುತ್ತಿವೆ. ಅಧಿಕಾರಿಗಳುಜನರಲ್ಲಿ ಕೊರೊನಾ ಜಾಗೃತಿ ಮೂಡಿಸುವಂತೆಶಾಸಕರುಕೆರೆ ನೀಡಿದರು.
ಈಗಾಗಲೇ ಮುನ್ನೇಚ್ಚರಿಕಾ ಕ್ರಮವಾಗಿಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್,ಮೂರು ಆಂಬ್ಯುಲೆನ್ಸ್, ಆಕ್ಸಿಜನ್ ಕಾನ್Õಟೇಟರ್ ಸೇರಿದಂತೆ ಇತರ ಎಲ್ಲ ಸಕಲಸಿದ್ಧತೆ ಮಾಡಿಕೊಂಡಿದ್ದು, ಕೊರೊನಾಮೂರನೇ ಅಲೆ ಬರಬಾರದೆಂದು ದೇವರಲ್ಲಿಪ್ರಾರ್ಥಿಸುತ್ತಿದ್ದೇನೆ ಎಂದರು.ಹೊನ್ನಾಳಿ-ನ್ಯಾಮತಿ ಅವಳಿತಾಲೂಕಿನಾದ್ಯಂತ ಮೊದಲನೇ ಹಾಗೂಎರಡನೇ ಲಸಿಕೆ ಸೇರಿದಂತೆ ಕೊರೊನಾವಾರಿಯರ್ಸ್‌ಗಳಿಗೆ, 60 ವರ್ಷ ಮೇಲ್ಪಟ್ಟವರಿಗೆಬೂಸ್ಟರ್ ಲಸಿಕೆ, 15 ವರ್ಷ ಮೇಲ್ಪಟ್ಟವರಿಗೆವಿದ್ಯಾರ್ಥಿಗಳಿಗೆ ಲಸಿಕೆ ಸೇರಿದಂತೆ ಒಟ್ಟು3,33,274 ಜನರಿಗೆ ಕೊರೊನಾ ಲಸಿಕೆನೀಡಲಾಗಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಲಸಿಕೆನೀಡಿದು,ª ಅದಕ್ಕೆ ಕಾರಣರಾದ ಅಧಿಕಾರಿಗಳಿಗೆಅಭಿನಂದಿಸುತ್ತೇನೆ ಎಂದರು.
ಸರಳ ಗಣರಾಜ್ಯೋತ್ಸವ: ದಿನೇ ದಿನೇಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿಸರಳವಾಗಿ ಗಣರಾಜ್ಯೋತ್ಸವ ನಡೆಸಲು ಸಭೆತೀರ್ಮಾನಿಸಿತು.ಹೊನ್ನಾಳಿ ತಾಲೂಕು ಕ್ರೀಡಾಂಗಣದಲ್ಲಿಹಾಗೂ ನ್ಯಾಮತಿಯ ಸರ್ಕಾರಿ ಬಾಲಕಿಯರಪದವಿ ಪೂರ್ವ ಕಾಲೇಜಿನ ಆವರಣದಲ್ಲಿಕೋವಿಡ್ ನಿಯಮಗಳ ಪ್ರಕಾರ ಸರಳವಾಗಿಆಚರಿಸಲಾಗುವುದು ಎಂದು ಶಾಸಕರುತಿಳಿಸಿದರು.ತಹಶೀಲ್ದಾರ್ ಬಸವರಾಜ ಕೊಟೂರ,ತಾಲೂಕು ಆರೋಗ್ಯಾ ಧಿಕಾರಿ ಡಾ|ಕೆಂಚಪ್ಪ,ಸಿಪಿಐ ದೇವರಾಜ್, ಪುರಸಭೆ ಮುಖ್ಯಾಧಿಕಾರಿಪಂಪಾಪತಿ ನಾಯ್ಕ ಸೇರಿದಂತೆ ವಿವಿಧಇಲಾಖೆ ಅಧಿಕಾರಿಗಳಿದ್ದರು.