ಶಿವಮೊಗ್ಗ: ದಿನೇ ದಿನೇ ಕೊರೊನಾ ಹೆಚ್ಚುತ್ತಿದ್ದು, ಇದರ ತಡೆಮತ್ತು ನಿರ್ವಹಣೆಗೆ ಪ್ರತಿ ಗ್ರಾಪಂ ಮಟ್ಟದಲ್ಲಿ ಟಾಸ್ಕ್ಫೋರ್ಸ್‌ರಚಿಸಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸೋದು ರಾಜ್ಯಸರ್ಕಾರಕ್ಕೂ ಒಂದು ಸವಾಲಾಗಿದೆ. ಈ ಹಿನ್ನೆಲೆಯಲ್ಲಿರಾಜ್ಯದ ಸುಮಾರು 6 ಸಾವಿರ ಗ್ರಾಪಂಗಳಲ್ಲಿಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಕ್ಫೋರ್ಸ್‌ರಚಿಸಲಾಗುವುದು.
ಈ ಟಾಸ್ಕ್ಫೋರ್ಸ್‌ನಲ್ಲಿ ಗ್ರಾಪಂ ಮತ್ತುಇತರೆ ಸರ್ಕಾರಿ ಅ ಧಿಕಾರಿಗಳು ಇರಲಿದ್ದಾರೆ. ಗ್ರಾಮೀಣಮಟ್ಟದಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ? ಯಾರನ್ನುಆಸ್ಪತ್ರೆಗೆ ದಾಖಲು ಮಾಡಬೇಕು? ಯಾರನ್ನುಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂಬುದನ್ನುಆರೋಗ್ಯಾ ಧಿಕಾರಿಗಳ ಜತೆ ಸೇರಿಕೊಂಡು ಚರ್ಚಿಸಿ ಸಮಿತಿಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.ಮೇಕೆದಾಟು ಪಾದಯಾತ್ರೆಗೆ ಸಂಬಂ ಧಿಸಿದಂತೆಕಾಂಗ್ರೆಸ್ ನಾಯಕರಿಗೆ ಹೇಳಿದ್ದು ಅರ್ಥ ಆಗುತ್ತಿಲ್ಲ.ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯ ಕೂಡಈ ಬಗ್ಗೆ ನಿರ್ದೇಶನ ನೀಡಿದೆ. ಆದರೆ, ಒಬ್ಬ ಮಾಜಿಮುಖ್ಯಮಂತ್ರಿಯನ್ನು ಬಂಧಿ ಸಿ ಜೈಲಿನಲ್ಲಿಡಲುನಮಗೂ ಮನಸ್ಸು ಬರುತ್ತಿಲ್ಲ. ಕಾಂಗ್ರೆಸ್ ನಾಯಕರುಇದನ್ನು ಅರ್ಥ ಮಾಡಿಕೊಳ್ಳಬೇಕು.
ಪ್ರತಿದಿನಸಾವಿರಾರು ಜನ ಪಾದಯಾತ್ರೆ ಮಾಡುತ್ತಿದ್ದಾರೆ.ಅದರಲ್ಲಿ ಎಷ್ಟು ಜನರಿಗೆ ಕೊರೊನಾ ಬಂದಿದೆಯೋ ಗೊತ್ತಿಲ್ಲ.ಈಗಾಗಲೇ ಕಾಂಗ್ರೆಸ್ ನಾಯಕರಾದ ಎಚ್.ಎಂ.ರೇವಣ್ಣ,ಶಿವಶಂಕರ್ ರೆಡ್ಡಿ, ಸಿ.ಎಂ. ಇಬ್ರಾಹಿಂ ಮೊದಲಾದವರಿಗೆಸೋಂಕು ತಗುಲಿದೆ. ಇದನ್ನು ಅರಿತು ಕಾಂಗ್ರೆಸ್ ನಾಯಕರುನಡೆದುಕೊಳ್ಳಲಿ. ಕೊರೊನಾ ಸೋಂಕು ಕಡಿಮೆಯಾದ ಬಳಿಕಯಾವ ಪಾದಯಾತ್ರೆಯನ್ನಾದರೂ ಅವರು ಮಾಡಲಿ.ಯಾರೂ ಬೇಡ ಎನ್ನಲ್ಲ ಎಂದರು.