ದಾವಣಗೆರೆ: ಜಿಲ್ಲೆಯಾದ್ಯಂತ 2021ನೇ ಸಾಲಿನಲ್ಲಿನಡೆದ 500 ಕಳವು, ವಂಚನೆ ಪ್ರಕರಣಗಳಲ್ಲಿ 250ಪ್ರಕರಣ ಪತ್ತೆ ಹಚ್ಚಿ 4.36 ಕೋಟಿ ಮೌಲ್ಯದಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು.
ಸೋಮವಾರ ಜಿಲ್ಲಾ ಪೊಲೀಸ್ ಕವಾಯತ್‌ಮೈದಾನದಲ್ಲಿ ಕಳ್ಳತನ ಪ್ರಕರಣಗಳ ಕಳವಿನಸ್ವತ್ತು ವಿಲೇವಾರಿ ಪೆರೇಡ್‌ನಲ್ಲಿ ಮಾತನಾಡಿದಅವರು, ಕಳ್ಳತನ ನಡೆದ ನಂತರ ಅನೇಕರು ನಾವುಕಳೆದುಕೊಂಡಿರುವಂತಹ ಸ್ವತ್ತು ದೊರೆಯುವುದೇಇಲ್ಲ ಎಂದೇ ಭಾವಿಸಿರುತ್ತಾರೆ. ನಮ್ಮ ಹಿರಿಯ,ಕಿರಿಯ ಅಧಿಕಾರಿಗಳು, ಸಿಬ್ಬಂದಿ ಅತ್ಯುತ್ತಮ ಕೆಲಸಮಾಡಿ, ಕಳವು ಮಾಲು ವಶಪಡಿಸಿಕೊಂಡಿದ್ದಾರೆ.
ಸಂಬಂಧಿತ ವಾರಸುದಾರರಿಗೆ ವಾಪಾಸ್ಸುನೀಡುವುದರಿಂದ ಕಳೆದುಕೊಂಡಂತಹವರಿಗೆಮತ್ತೆ ತಮ್ಮ ಸ್ವತ್ತು ಸಿಗುತ್ತಿದೆ ಎಂಬಸಂತೋಷದಲ್ಲಿದ್ದಾರೆ. ಪತ್ತೆ ಕಾರ್ಯವನ್ನು ಇನ್ನೂಚುರುಕುಗೊಳಿಸಲಾಗುವುದು ಎಂದರು.ದಾವಣಗೆರೆಯ ಸಿಇಎನ್ ಪೊಲೀಸರು67 ಕೆಜಿಯಷ್ಟು ಪೆಂಗೋಲಿನ್ ಚಿಪ್ಪುಗಳನ್ನವಶಪಡಿಸಿಕೊಂಡಿದ್ದಾರೆ. ಬ್ಯಾಂಕ್‌ನಿಂದ ಹಣ ಡ್ರಾಮಾಡಿಕೊಂಡವರ ಗಮನ ಬೇರೆ ಕಡೆ ಸೆಳೆದು ಹಣದೋಚುತ್ತಿದ್ದ ಓಜಿ ಕೊಪ್ಪಂನ 25 ಜನ ಕಳ್ಳರನ್ನ ಬಂಧಿಸಲಾಗಿದೆ.
ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿನಡೆದಿರುವ ಚಿಟ್‌ಫಂಡ್ ವಂಚನೆ ಪ್ರಕರಣದತನಿಖೆ ಪ್ರಗತಿಯಲ್ಲಿದೆ. ನಗರ ಪ್ರದೇಶದಲ್ಲಿಮನೆ, ಬೈಕ್ ಕಳ್ಳತನ ಇತರೆ ಅಹಿತಕರ ಘಟನೆಗಳತಡೆಗೆ ರಾತ್ರಿ ಬೀಟ್, ಇ-ಬೀಟ್ ಹೆಚ್ಚಿಸಲಾಗಿದೆ.ಸುಬಾಹ್ ಯೋಜನೆಯಡಿ ಮುಖ್ಯ ಸ್ಥಳಗಳಲ್ಲಿಪರಿಶೀಲನೆ ನಡೆಸಲಾಗುತ್ತಿದೆ.
ದಾವಣಗೆರೆಯಲ್ಲಿ250 ಕಡೆ, 36 ಚೆಕ್‌ಪೋಸ್ಟ್‌ನಲ್ಲಿ ಸ್ಮಾಟ್ìಸಿಟಿ ಯೋಜನೆಯಡಿ ಸಿಸಿ ಟಿವಿ, ಕ್ಯಾಮೆರಾಅಳವಡಿಸಲಾಗಿದೆ. ಕೆಲ ದಿನಗಳಿಂದ ಎಲ್ಲ ಸಿಸಿಟಿವಿ, ಕ್ಯಾಮೆರಾ ಚೆನ್ನಾಗಿ ಕೆಲಸ ಮಾಡುತ್ತಿವೆ.ಹಾಗಾಗಿ ಅಗತ್ಯ ಮಾಹಿತಿ ಲಭ್ಯವಾಗುತ್ತಿದೆ ಎಂದುತಿಳಿಸಿದರು