ಹೊನ್ನಾಳಿ: ಕೋವಿಡ್ ಸಂದರ್ಭದಲ್ಲಿ ಶಿಕ್ಷಣಕ್ಕೆ ಬಲವಾದ ಪೆಟ್ಟು ಬಿದ್ದಿದ್ದು ಈಗ 6ರಿಂದ ಉನ್ನತಶಿಕ್ಷಣ ತರಗತಿಯವರೆಗೆ ಶಿಕ್ಷಣ ಸಂಸ್ಥೆಗಳು ತೆರೆದಿದ್ದು ವಿದ್ಯಾರ್ಥಿಗಳು ಅಭ್ಯಾಸದ ಕಡೆ ಗಮನ ಕೊಡಬೇಕು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ಪಟ್ಟಣದ ಕೆಪಿಎಸ್, ಬಾಲಕಿಯರಸರ್ಕಾರಿ ಪದವಿಪೂರ್ವ ಕಾಲೇಜು ಮತ್ತುಬಾಲಕಿಯರ ಸರ್ಕಾರಿ ಪ್ರೌಢಶಾಲೆಗಳಲ್ಲಿಹಮ್ಮಿಕೊಂಡಿದ್ದ ಶಿಕ್ಷಣ ಹಾಗೂ ಕೊರೊನಾ ಜಾಗೃತಿಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳ ನೈಜಪ್ರತಿಭೆ ಹೊರ ಹೊಮ್ಮಲು ಸಾಧ್ಯವಾಗಲಿಲ್ಲ ಇದಕ್ಕೆಕೊರೊನಾ 1 ಮತ್ತು 2ನೇ ಅಲೆ ಕಾರಣವಾಗಿದ್ದುಈ ವರ್ಷ 3ನೇ ಅಲೆ ಬರುತ್ತದೆ ಎಂದು ತಜ್ಞರುಹೇಳುತ್ತಿದ್ದಾರೆ ದೇವರ ದಯದಿಂದ ಕೊರೊನಾ ಸಂಪೂರ್ಣ ತೊಲಗಬೇಕಿದೆ ಎಂದರು.ಶಿಕ್ಷಣ ಎಂಬ ಮೂರಕ್ಷರದ ಪದ ಬಹಳ ಮಹತ್ವಪಡೆದಿದೆ.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸರ್ಕಾರಎಲ್‌ಕೆಜಿಯಿಂದ ಪದವಿಪೂರ್ವ ಶಿಕ್ಷಣದ ವ್ಯವಸ್ಥೆಮಾಡಿದ್ದು, ಈ ವ್ಯವಸ್ಥೆಯನ್ನು ಪೋಷಕರುಸದುಪಯೋಗ ಮಾಡಿಕೊಂಡು ತಮ್ಮ ಮಕ್ಕಳನ್ನುಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಹೇಳಿದರು.
ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುವಿದ್ಯಾರ್ಥಿಗಳು ತಮ್ಮ ತಂದೆ, ತಾಯಿಗಳು ಎರಡುಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆಯೋಇಲ್ಲವೋ ಎಂಬುದನ್ನು ಮಾಹಿತಿ ಪಡೆದು ಪೋಷಕರಲ್ಲಿಜಾಗೃತಿ ಮೂಡಿಸಿ ಲಸಿಕೆ ಪಡೆಯದಿದ್ದರೆ ತಕ್ಷಣಲಸಿಕೋತ್ಸವದಲ್ಲಿ ಭಾಗವಹಿಸಿ ಲಸಿಕೆ ಪಡೆಯಲುಅರಿವು ಮೂಡಿಸಬೇಕು ಎಂದರು.
ಪ್ರಾಂಶುಪಾಲ ವಿ.ಪಿ.ಪೂರ್ಣಾನಂದ ಪ್ರಾಸ್ತಾವಿಕಮಾತನಾಡಿದರು. ಉಪನ್ಯಾಸಕ ಆಕಾಶ್‌ನಿರೂಪಿಸಿದರು. ವಿದ್ಯಾರ್ಥಿಗಳಾದ ಶಾಲಿನಿ,ಸಚಿನ್, ರಾಕೇಶ್ ಅನಿಸಿಕೆ ವ್ಯಕ್ತಪಡಿಸಿದರು.
ತಾ.ಪಂ ಮಾಜಿ ಅಧ್ಯಕ್ಷ ಎಸ್.ಪಿ.ರವಿಕುಮಾರ್,ಮಾಜಿ ಉಪಾಧ್ಯಕ್ಷ ಸಿದ್ದಲಿಂಗಪ್ಪ, ಮಾಜಿ ಸದಸ್ಯಹನುಮಂತಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ಗಣೇಶ್,ಸದಸ್ಯರಾದ ಸದಾಶಿವಪ್ಪ, ಅಜೇಯ್‌ರೆಡ್ಡಿ, ಗಜಾನನ,ಗಿರೀಶ್, ಸತೀಶ್, ಮಧು, ರಾಮೇಗೌಡ ಇತರರುಉಪಸ್ಥಿತರಿದ್ದರು.