Advertisement

ಕಾಲೇಜಿನಲ್ಲಿ ಕಂಟೈನ್ಮೆಂಟ್‌ ಝೋನ್‌ ನಿರ್ಮಿಸಿ ಸೋಂಕು ನಿಯಂತ್ರಣ

03:57 PM Sep 06, 2021 | Team Udayavani |

ಬೆಂಗಳೂರು: ನಗರದ ಕಾಲೇಜುಗಳಲ್ಲಿ ಹೆಚ್ಚು ಕೊರೊನಾಸೋಂಕು ಪ್ರಕರಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿಬಿಬಿಎಂಪಿ ವತಿಯಿಂದ ಕಂಟೈನ್ಮೆಂಟ್‌ ಝೋನ್‌ಗಳನ್ನುರಚಿಸಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ ಎಂದುಬಿಬಿಎಂಪಿ ಮುಖ್ಯ ಆಯುಕ್ತಗೌರವ್‌ ಗುಪ್ತ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಗರದಎರಡು ಕಾಲೇಜುಗಳಲ್ಲಿ ಕ್ಲಸ್ಟರ್‌ಕೇಸ್‌ಗಳು ದಾಖಲಾಗಿವೆ. ದಾಸರಹಳ್ಳಿಯ ಹಾಗೂಮಹಾದೇ ವಪುರ ನರ್ಸಿಂಗ್‌ ಕಾಲೇಜಿನಲ್ಲಿ ಅತೀ ಹೆಚ್ಚುಪ್ರಕರಣ ಕಂಡು ಬಂದಿವೆ.

ಅಲ್ಲಿ ಕಂಟೇನ್ಮೆಂಟ್‌ ಝೋನ್‌ಗಳನ್ನು ನಿರ್ಮಿಸಿ ಕೊರೊನಾ ಸೋಂಕು ನಿಯಂತ್ರಣಕ್ಕೆಶ್ರಮಿಸಲಾಗುತ್ತಿದೆ. ಹೋಂ ಗಾರ್ಡ್‌, ಪಾಲಿಕೆ ಮಾರ್ಷಲ್‌,ಪೊಲೀಸರು ಸಮಯೋಚಿತವಾಗಿ ಕೆಲಸ ನಿರ್ವಹಣೆಮಾಡುತ್ತಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಗಣೇಶೋತ್ಸವ ಹಾಗೂ ಹೆಚ್ಚುತ್ತಿರುವಕೋವಿಡ್‌ ಸಂಖ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು,ಮುಖ್ಯಮಂತ್ರಿ ನೇತೃತ್ವದಲ್ಲಿ ಈಗಾಗಲೇ ಒಂದು ಸುತ್ತಿನ ಸಭೆನಡೆದಿದೆ. ಕೋವಿಡ್‌ ಯಾವಾಗ ಬೇಕಾದರೂಉಲ್ಬಣವಾಗಬಹುದು. ಪಾಲಿಕೆಯಿಂದ ಮುನ್ನೆಚ್ಚರಿಕಾಕ್ರಮಕೈಗೊಳ್ಳುವ ಅವಶ್ಯಕತೆ ಇದೆ ಎಂದರು.

ಇಂದಿನಿಂದ 6ರಿಂದ 8ನೇ ತರಗತಿಗಳುಆರಂಭವಾಗುತ್ತಿವೆ. ರಾಜ್ಯಕ್ಕೆ ಹೋಲಿಸಿದರೆ, ಬಿಬಿಎಂಪಿಶಾಲೆಗಳ ಸಂಖ್ಯೆ ಕಡಿಮೆ ಇದೆ. ಶಿಕ್ಷಣ ಇಲಾಖೆ ಯಾವೆಲ್ಲಆದೇಶಗಳನ್ನು ನೀಡುತ್ತದೆಯೋ ಅದೇ ನಿಯಮಗಳನ್ನುನಾವು ಬಿಬಿಎಂಪಿ ಶಾಲೆಗಳಲ್ಲಿ ಅಳವಡಿಕೆ ಮಾಡಿಕೊಳ್ಳುತ್ತೇವೆಎಂದು ತಿಳಿಸಿದರು.

Advertisement

ಗಣೇಶ ವಿಸರ್ಜನೆಗೆ ಮೊಬೈಲ್‌ ಟ್ಯಾಂಕರ್‌: ಯಾವುದೇಧರ್ಮದವರಾದರೂ ಸರಳವಾಗಿ ಹಬ್ಬ ಆಚರಣೆಮಾಡಬೇಕು. ಮನೆ ಒಳಗೆ ಗಣೇಶ ಪ್ರತಿಷ್ಠಾಪನೆ ಮಾಡಬೇಕು. ದೇವಸ್ಥಾನಗಳಲ್ಲಿ ಗಣೇಶ ಮೂರ್ತಿಕೂರಿಸಲು ಸರ್ಕಾರ ಅನುಮತಿ ನೀಡಿದೆ. ಮನೆಗಳಲ್ಲಿ ಕೂರಿಸುವ ಗಣೇಶ ವಿಸರ್ಜನೆಗೆ ಮೊಬೈಲ್‌ ಟ್ಯಾಂಕರ್‌ಗಳಲ್ಲಿ ವಿಸರ್ಜನೆ ವ್ಯವಸ್ಥೆ ಮಾಡಲಾಗಿದೆ. ಈ ನಿಬಂಧನೆಗಳನ್ನುಪುನರ್‌ ಪರಿಶೀಲಿಸುವ ವಿಚಾರವಾಗಿ ಮತ್ತೂಂದು ಸುತ್ತಿನಸಭೆ ನಡೆಯಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next