Advertisement

ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತದ ಕ್ರಮ

04:27 PM Aug 23, 2021 | Team Udayavani |

ದೇವನಹಳ್ಳಿ: ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ತಲೆನೋವಾಗಿತ್ತು. ಆದರೇ ಜಿಲ್ಲಾಡಳಿತದ ಸಮಯೋಚಿತನಿರ್ಧಾರ, ಸೂಕ್ಷ್ಮತೆ, ತೀಕ್ಷ ¡ ತೆಯಿಂದ ದಿನಕಳೆದಂತೆಜಿಲ್ಲೆಯಲ್ಲಿ ಸೋಂಕು ಇಳಿಮುಖಗೊಂಡಿದೆ.

Advertisement

ಜಿಲ್ಲಾಡಳಿತದ ವಿವೇಚಿತ ನಿರ್ಧಾರ: ಕಳೆದ2-3ದಿನಗಳಿಂದ ಕೊರೊನಾ ಸೋಂಕಿತರ ಪ್ರಕರಣಗಳು 7-11ರವರೆಗೆ ಸೋಂಕಿತರು ಪತ್ತೆಯಾಗಿದೆಯಷ್ಟೇ. ಜಿಲ್ಲಾಡಳಿತ ಕೊರೊನಾ ತಡೆಗೆ ಸಾಕಷ್ಟುಕಾರ್ಯಕ್ರಮ ಮಾಡುತ್ತಿದೆ. ಆತಂಕದಲ್ಲಿದ್ದ ಜಿಲ್ಲಾಜನತೆಗೆ ಧೈರ್ಯ ತುಂಬಿದೆ. ಆರೋಗ್ಯ ಇಲಾಖೆಯಕೋವಿಡ್‌ ಮಾರ್ಗಸೂಚಿ ಅನ್ವಯ ಕ್ರಮಜರುಗಿಸಿಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಇಳಿಮುಖವಾಗುವಂತೆ ನೋಡಿಕೊಳ್ಳಲಾಗಿದೆ.

ಸೌಲಭ್ಯಕೊರತೆ ಸರಿದೂಗಿಸಿದೆವು: ಜಿಲ್ಲೆಯ ನಾಲ್ಕುತಾಲೂಕುಗಳ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆಅತ್ಯವಶ್ಯಕವಾಗಿದ್ದ ಆಕ್ಸಿಜನ್‌, ವೆಂಟಿಲೇಟರ್‌,ಆಕ್ಸಿಜನ್‌ ಹಾಸಿಗೆ ಸೇರಿದಂತೆ ಅನೇಕಸೌಲಭ್ಯಗಳ ಕೊರತೆ ಎದುರಾಗಿತ್ತು.ಸರ್ಕಾರದ ಅನುದಾನದಲ್ಲಿ ಆಕ್ಸಿಜನ್‌,ವೆಂಟಿಲೇಟರ್‌, ಆಕ್ಸಿಜನ್‌ ಹಾಸಿಗೆಸೇರಿದಂತೆ ವಿವಿಧ ಸೌಲಭ್ಯಗಳನ್ನುಒದಗಿಸಲಾಗಿತ್ತು.

ವಿವಿಧ ಕಂಪನಿಗಳುಮತ್ತು ಅಪಾರ್ಟ್‌ಮೆಂಟ್‌ಗಳಿಂದಆಕ್ಸಿಜನ್‌ ಸಾಂದ್ರಕ ಸೇರಿದಂತೆ ಆಸ್ಪತ್ರೆಗೆ ಬೇಕಾದಅಗತ್ಯ ವಸ್ತುಗಳನ್ನು ಜಿಲ್ಲಾಧಿಕಾರಿಗಳು ಹಾಗೂಅಧಿಕಾರಿಗಳು ಒದಗಿಸುವಕೆಲಸ ಮಾಡಿದ್ದರು.

ಹಳ್ಳಿಗಳ ಕಡೆಗೆ ವೈದ್ಯರ ನಡಿಗೆ: ಕಪ್ಪು ಶಿಲೀಂಧ್ರಕಾಯಿಲೆಗೆ ಇಡೀ ರಾಷ್ಟ್ರ ಮತ್ತು ರಾಜ್ಯದಲ್ಲಿಯೇದೊಡ್ಡಬಳ್ಳಾಪುರ ತಾಲೂಕಿನಲ್ಲಿ ಯಶಸ್ವಿಶಸ್ತ್ರಚಿಕಿತ್ಸೆನಡೆಸಲಾಯ್ತು.ದೊಡ್ಡಬಳ್ಳಾಪುರತಾಲೂಕಿನಲ್ಲಿ ಮೇಕ್‌ ಶಿಪ್ಟ್ ಆಸ್ಪತ್ರೆಆರಂಭಿಸಿ ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆಮಾಡಲಾಗಿತ್ತು. ಹಳ್ಳಿಗಳ ಕಡೆಗೆ ವೈದ್ಯರನಡಿಗೆ ಎಂಬ ವಿನೂತನ ಕಾರ್ಯಕ್ರಮಹಮ್ಮಿಕೊಳ್ಳಲಾಯಿತು.

Advertisement

ಆ ಮೂಲಕಹಳ್ಳಿಗಳಲ್ಲಿಯೇ ತಪಾಸಣೆ ನಡೆಸಿ ಸೋಂಕು ಪತ್ತೆ ಹಚ್ಚಿಪಾಸಿಟೀವ್‌ ಬಂದವರಿಗೆ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಯ್ತು. ಅಲ್ಲದೇ ಔಷಧಿಕಿಟ್‌ ನೀಡಿ ಹೋಮ್‌ ಐಸೋಲೇಶನ್‌ನಲ್ಲಿ ಗುಣಮುಖವಾಗುವಂತೆ ಕ್ರಮಕೈಗೊಂಡಿತ್ತು.

3ನೇ ಅಲೆ ತಡಗೆ ಒತ್ತು: 3ನೇ ಅಲೆ ತಡೆಗೆಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮುನ್ನೆಚ್ಚರಿಕ್ರಮ ಕೈಗೊಳ್ಳಲಾಯಿತು. ಮಕ್ಕಳ ಮೇಲೆ ಹೆಚ್ಚುಪರಿಣಾಮ ಬೀರುವುದರಿಂದ ಮಕ್ಕಳ ತಜ್ಞರೊಂದಿಗೆಹಳ್ಳಿಗಳಲ್ಲಿ ಕಾರ್ಯಕ್ರಮ ಮಾಡಿ ಸ್ಥಳದಲ್ಲಿಯೇಮಕ್ಕಳನ್ನು ಪರೀಕ್ಷೆ ಮಾಡಿಸಲಾಯಿತು. ಅಪೌಷ್ಟಿಕಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಜಿಲ್ಲಾಡಳಿತನೀಡಿದೆ.

ಹೀಗೆ ಹತ್ತು ಹಲವಾರು ಕಾರ್ಯಹಮ್ಮಿಕೊಂಡಿದೆ.3ನೇ ಅಲೆ ತಡೆಗೆ ಸರ್ಕಾರದಿಂದ ಜಿಲ್ಲೆಗೆಬರುತ್ತಿರುವ ಕೊರೊನಾ ಲಸಿಕೆಯನ್ನು ಪ್ರತಿನಿತ್ಯ 5ರಿಂದ 6ಸಾವಿರ ಲಸಿಕೆ ಜನಸಂಖ್ಯಾ ಆಧಾರದ ಮೇಲೆ4 ತಾಲೂಕುಗಳಿಗೆ ವಿತರಿಸಲಾಗಿದೆ. ಗ್ರಾಮೀಣಭಾಗದಪ್ರಾಥಮಿಕಆರೋಗ್ಯಕೇಂದ್ರಗಳಲ್ಲಿಲಸಿಕೆಯಸಮಸ್ಯೆ ಕಾಡುತ್ತಿದೆ. ಜನರು ಲಸಿಕೆ ಹಾಕಿಸಿಕೊಳ್ಳಲುಮುಂದಾಗಿದ್ದಾರೆ.

ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next