ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಕೊರತೆಯೇಖಾಸಗಿ ಆಸ್ಪತ್ರೆಗಳಿಗೆ ವರವಾಗಿ ಪರಿಣಮಿಸಿದೆ. ಸದ್ಯ ರಾಜಧಾನಿಯಲಸಿಕೆ ಅಭಿಯಾನದಲ್ಲಿ ಸರ್ಕಾರಿ ಆಸ್ಪತ್ರೆಗಳಿಗಿಂತಲೂ ಖಾಸಗಿ ಆಸ್ಪತ್ರೆಗಳೇ ಮುಂಚೂಣಿಯಲ್ಲಿವೆ. ದೇಶದಲ್ಲಿಯೇ ಅತಿಹೆಚ್ಚುಖಾಸಗಿ ಲಸಿಕಾಕೇಂದ್ರಗಳನ್ನು ಬೆಂಗಳೂರು ಹೊಂದಿದ್ದು, ಸರ್ಕಾರಿ ಲಸಿಕೆಕೇಂದ್ರಗಳಿಗಿಂತಲೂ ಇವುಗಳಸಂಖ್ಯೆಯೇ ಹೆಚ್ಚಿದೆ. ಈ ಅಂಶವೂ ದೇಶದಲ್ಲಿಯೇ ಅತಿ ವೇಗದ ಲಸಿಕೆ ಅಭಿಯಾನ ಬೆಂಗಳೂರಿನಲ್ಲಿ ನಡೆಯಲು ಪ್ರಮುಖಕಾರಣವಾಗಿದೆ.
ಆರಂಭದಲ್ಲಿಖಾಸಗಿ ಆಸ್ಪತ್ರೆಗಳು ಲಸಿಕೆ ಅಭಿಯಾನದಲ್ಲಿ ದಂಧೆ ನಡೆಸುತ್ತಿವೆ ಎಂಬ ಅಭಿಪ್ರಾಯವ್ಯಕ್ತವಾದರೂ, ನಗರದಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಮಂದಿಗೆ ಲಸಿಕೆ ನೀಡುವ ಮೂಲಕ ಪ್ರಮುಖಪಾತ್ರವಹಿಸಿವೆ.ಹೆಲ್ತ್ ಟೂರಿಸಂ ಹಬ್ ಆದ ಬೆಂಗಳೂರಿನ ಲಸಿಕೆ ಅಭಿಯಾನದಲ್ಲಿ ಸರ್ಕಾರಿ ಲಸಿಕೆಕೇಂದ್ರಗಳಿಗಾಗಿ ಪರದಾಟವೇಖಾಸಗಿಆಸ್ಪತ್ರೆಗಳತ್ತ ಜನರ ನೋಟ… ಇದಕ್ಕೆಕಾರಣವಾದ ಅಂಶಗಳ ಪತ್ತೆಗೆ ಈ ಬಾರಿ “ಸುತ್ತಾಟ’…
ಕೊರೊನಾ ಸೋಂಕಿನಿಂದ ರಕ್ಷಣೆಗೆ ಸದ್ಯಕೊರೊನಾ ಲಸಿಕೆಯೊಂದೇಬ್ರಹ್ಮಾಸ್ತ್ರ. ಶೀಘ್ರ ಹೆಚ್ಚು ಮಂದಿ ಲಸಿಕೆ ಪಡೆದಷ್ಟು ಮುಂಬರುವಅಲೆ ಆರ್ಭಟದಿಂದ ತಪ್ಪಿಸಿಕೊಳ್ಳಬಹುದು ಎಂದು ವೈದ್ಯಕೀಯಸಂಶೋಧನಾ ಸಂಸ್ಥೆಗಳು ಮತ್ತು ತಜ್ಞರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಲಸಿಕೆಅಭಿಯಾನವನ್ನು ಸಮರೋಪಾದಿಯಲ್ಲಿ ನಡೆಸಲು ಖಾಸಗಿ ಆಸ್ಪತ್ರೆಗಳಿಗೂಲಸಿಕೆ ವಿತರಿಸಲು ಅನುಮತಿ ನೀಡಲಾಯಿತು. ಆರಂಭದಲ್ಲಿ ಸರ್ಕಾರದಿಂದನೀಡಿದ ಲಸಿಕೆಯನ್ನು 250 ರೂ. ಸೇವಾ ಶುಲ್ಕ ಪಡೆದು ಲಸಿಕೆವಿತರಿಸಲಾಗುತ್ತಿತ್ತು. ಆದರೆ, ನಿಗದಿಗಿಂತ ಹೆಚ್ಚು ಶುಲ್ಕ ಪಡೆಯಲಾಗುತ್ತಿದೆಎಂದು ತಿಂಗಳ ಮಟ್ಟಿಗೆ ಲಸಿಕೆ ಅಭಿಯಾನ ಸ್ಥಗಿತಗೊಳಿಸಲಾಗಿತ್ತು.
ನಂತರಮತ್ತೆ ಅಭಿಯಾನಕ್ಕೆ ವೇಗ ನೀಡಲು ಮತ್ತು ದಾಸ್ತಾನು ಕೊರತೆ ನೀಗಿಸಲುನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಖರೀದಿಸಿ ವಿತರಿಸಲು ಜುಲೈನಲ್ಲಿಅನುಮತಿ ನೀಡಲಾಯಿತು. ಅಲ್ಲದೆ, ಹಣ ವಸೂಲಿ ತಪ್ಪಿಸಲು ಕೊವಿಶೀಲ್ಡ್‌ಗೆ720 ರೂ.ಕೊವ್ಯಾಕ್ಸಿನ್‌ಗೆ1,410 ರೂ. ದರ ನಿಗದಿ ಮಾಡಲಾಯಿತು.ಇನ್ನೊಂದೆಡೆ ಉಚಿತ ಲಸಿಕೆ ನೀಡುತ್ತಿದ್ದ ಸರ್ಕಾರಿ ವಲಯದಲ್ಲಿ ತೀವ್ರದಾಸ್ತಾನು ಕೊರತೆ ಉಂಟಾಗಿ ಲಸಿಕೆಗೆ ಜನ ಪರದಾಡುತ್ತಿದ್ದರು.
ಈಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ಬೆಂಗಳೂರಿನಲ್ಲಿಮೇಲುಗೈ ಸಾಧಿಸಿವೆ.ಶೇ.45 ರಷ್ಟು ಲಸಿಕೆ ಖಾಸಗಿಯಲ್ಲಿ ವಿತರಣೆ: ಜನವರಿ 16 ರಿಂದಇಲ್ಲಿಯವರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 85 ಲಕ್ಷ ಡೋಸ್‌ನಷ್ಟುಕೊರೊನಾ ಲಸಿಕೆ ವಿತರಿಸಲಾಗಿದೆ. ಈ ಪೈಕಿ ಶೇ. 55 ರಷ್ಟು ಲಸಿಕೆಯನ್ನುಮಾತ್ರ ಬಿಬಿಎಂಪಿ ವಿತರಿಸಿದ್ದು, ಶೇ.45 ರಷ್ಟು ಲಸಿಕೆ ಖಾಸಗಿ ಆಸ್ಪತ್ರೆಗಳುನೀಡಿವೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯ ಲಸಿಕೆ ಅಭಿಯಾನದಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಖಾಸಗಿ ಪಾಲಿದೆ.
ಬೇಕಿರುವುದು 75ಸಾವಿರ, ಸಿಗುತ್ತಿರುವುದು30 ಸಾವಿರಕ್ಕಿಂತ ಕಮ್ಮಿ
ನಿತ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಲಕ್ಷ ಡೋಸ್‌ಗೂ ಅಧಿಕ ಲಸಿಕೆ ಹಂಚುವ ಸಾಮರ್ಥಯವಿದೆ.ಅಲ್ಲದೆ, ಲಸಿಕಾಕೇಂದ್ರಗಳಿಂದ ನಿತ್ಯಕನಿಷ್ಠ75ಸಾವಿರ ಡೋಸ್ ಬೇಡಿಕೆ ಇರುತ್ತದೆ. ಆದರೆ, ಲಸಿಕೆದಾಸ್ತಾನುಕೊರತೆಯಿಂದಕನಿಷ್ಠ30 ಸಾವಿರಡೋಸ್‌ಕೂಡ ಬಿಬಿಎಂಪಿಗೆ ನೀಡಲಾಗುತ್ತಿದೆ.ಅದರಲ್ಲೂಕೆಲ ಆಸ್ಪತ್ರೆಗಳಿಗೆ ನಿತ್ಯ50 ಅಥವಾ 100ಡೋಸ್ ಮಾತ್ರ ಸಿಗುತ್ತಿದೆ. ಇನ್ನು300ಆಸುಪಾಸಿನಲ್ಲಿ ಲಸಿಕೆಕೇಂದ್ರಗಳನ್ನುಗುರುತಿಸಿದ್ದರು, ಅರ್ಧಷ್ಟುಕೇಂದ್ರಗಳು ನೋಸ್ಟಾಕ್‌ಬೋರ್ಡ್ ಹಾಕಿರುತ್ತವೆ. ಇದರಿಂದ ಖಾಸಗಿ ಕಡೆದಾರಿ ಸಾರ್ವಜನಿಕರಿಗೆ ಅನಿವಾರ್ಯವಾಗಿದೆ.
ಜಯಪ್ರಕಾಶ್ ಬಿರಾದಾರ್