Advertisement
ಸುದ್ದಿಗಾರರೊಂದಿಗೆಮಾತನಾಡಿದಅವರು,ಪಾಲಿಕೆ ವ್ಯಾಪ್ತಿಯ ಕೋವಿಡ್ ಪರಿಸ್ಥಿತಿ ಬಗ್ಗೆಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದಸಭೆಯಲ್ಲಿ ಚರ್ಚೆ ನಡೆದಿದೆ. ಆರೋಗ್ಯ ತಜ್ಞರು ಹಾಗೂಹಿರಿಯ ಸಚಿವರು ತಮ್ಮ ಸಲಹೆಗಳನ್ನು ವ್ಯಕ್ತಪಡಿಸಿದ್ದಾರೆ.ಸಭೆಯಲ್ಲಿ ವಿಶೇಷವಾಗಿ ಹೆಚ್ಚು ಕೊರೊನಾ ಸೋಂಕುಪಾಸಿಟಿವಿಟಿ ದರ ಇರುವ ಪ್ರದೇಶಗಳಲ್ಲಿ ಸೋಂಕು ದರಇಳಿಕೆ ಮಾಡಲು ಏನೇನು ಕ್ರಮ ಕೈಗೊಳ್ಳಬೇಕು ಎಂದುಚರ್ಚಿಸಲಾಗಿದೆ ಎಂದರು.
Related Articles
Advertisement
ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ತೀವ್ರ ನಿಗಾ:ನಗರದಲ್ಲಿ ಶೇಕಡಾ ಎಷ್ಟು ಪಾಸಿಟಿವಿಟಿ ದರ ಹೆಚ್ಚಳವಾದರೆಲಾಕ್‌ಡೌನ್ ಅವಶ್ಯಕತೆ ಇರುತ್ತದೆ ಎಂಬ ಸುದ್ದಿಗಾರರಪ್ರಶ್ನೆಗೆ, ನಗರದಲ್ಲಿ ಕೊರೊನಾ ಸೋಂಕು ಪಾಸಿಟಿವಿಟಿ ದರಹೆಚ್ಚಿರುವ ಪ್ರದೇಶಗಳಲ್ಲಿ ತೀವ್ರ ನಿಗಾ ಇಡುವಂತೆ ಎಂದುಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.
ಜತೆಗೆ,ಕೊರೊನಾ ಸೋಂಕು ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚುಕಂಡುಬಂದರೆ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಆರೋಗ್ಯತಜ್ಞರ ಪ್ರಕಾರ, ಶೇ.40ಕ್ಕಿಂತ ಹೆಚ್ಚು ಕ್ರಿಟಿಕಲ್ ಕೇರ್‌ಹಾಸಿಗೆ(ಬೆಡ್)ಗಳು ಭರ್ತಿಯಾದರೆ ಆಗ ಸೂಕ್ತ ಕ್ರಮಜಾರಿಗೊಳಿಸುವಂತೆ ಸಲಹೆಯನ್ನು ನೀಡಿದ್ದಾರೆ. ಈ ಎಲ್ಲಸಲಹೆಗಳನ್ನುಗಣನೆಗೆ ತೆಗೆದುಕೊಂಡು, ಸೂಕ್ತಸಮಯದಲ್ಲಿತೀರ್ಮಾನಕೈಗೊಳ್ಳಲಾಗುವುದು ಎಂದರು.
ಸರಳವಾಗಿ ಹಬ್ಬ ಆಚರಣೆಗೆ ಸೂಚನೆ: ವರಮಹಾಲಕ್ಷ್ಮೀ ಹಬ್ಬಕ್ಕೆ ನಾಲ್ಕು ದಿನಗಳು ಮಾತ್ರ ಬಾಕಿ ಇದ್ದು, ಪಾಲಿಕೆವತಿಯಿಂದ ಮಾರುಕಟ್ಟೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲುಯಾವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ, ಕೋವಿಡ್‌ಹಿನ್ನಲೆಯಲ್ಲಿ ಎಲ್ಲ ಹಬ್ಬಗಳನ್ನು ಸರಳವಾಗಿ ಮನೆಯಲ್ಲೇಆಚರಣೆ ಮಾಡು ವಂತೆ ಈಗಾಗಲೇ ರಾಜ್ಯ ಸರ್ಕಾರ,ಮಾರ್ಗಸೂಚಿಹೊರಡಿಸಿದೆ. ವರಮಹಾಲಕ್ಷ್ಮೀ,ಮೊಹರಂ,ಗಣೇಶ ಹಬ್ಬ ಅಥವಾ ಇನ್ನಿತರ ಹಬ್ಬಗಳನ್ನು ಯಾವ ರೀತಿಕೋವಿಡ್ ಪಾಲನೆಯೊಂದಿಗೆ ಆಚರಣೆ ಮಾಡಬೇಕುಎಂದು ಸ್ಪಷ್ಟವಾಗಿ ಮಾರ್ಗಸೂಚಿಗಳನ್ನು ಬಿಡುಗಡೆಮಾಡಲಾಗಿದೆ. ಎಲ್ಲರೂ ಆಮಾರ್ಗಸೂಚಿಗಳನ್ನೊಳಗೊಂಡಂತೆ ಹಬ್ಬ ಆಚರಣೆಮಾಡಬೇಕು ಎಂದು ಸಲಹೆ ನೀಡಿದರು.