Advertisement

ಕೋವಿಡ್‌ ಪರಿಹಾರಧನಕ್ಕೆ ಅರ್ಜಿ ಆಹ್ವಾನ

05:21 PM Jul 17, 2021 | Team Udayavani |

ಕೋಲಾರ: ನೇಕಾರರ ಕೋವಿಡ್‌ ಪ್ಯಾಕೇಜ್‌ ಯೋಜನೆಯಡಿವಿದ್ಯುತ್‌ ಮಗ್ಗ ಹಾಗೂ ಮಗ್ಗ ಪೂರ್ವ ಕಾರ್ಮಿಕರಿಗೆ,ಕೆಲಸಗಾರರಿಗೆ ತಲಾ3ಸಾವಿರ ರೂ.ನಂತೆ ಪರಿಹಾರಧನ ನೀಡಲಾಗುವುದು.

Advertisement

ಅರ್ಹರು ಸರಕಾರದ ಸೇವಾ ಸಿಂಧುಪೋರ್ಟಲ್‌ನ ಸಾಮಾನ್ಯ ನಮೂನೆಯಲ್ಲಿ ಆನ್‌ಲೈನ್‌ ಮೂಲಕಅರ್ಜಿ ಸಲ್ಲಿಸಬೇಕು. ಆಧಾರ್‌ ಕಾರ್ಡ್‌ ಪ್ರತಿ ಹಾಗೂ ನೇರ ಹಣವರ್ಗಾವಣೆಗೆ ಸಮ್ಮತಿ ಪತ್ರ, ಘಟಕದ ಆರ್‌.ಆರ್‌ ಸಂಖ್ಯೆಯುಳ್ಳಬೆಸ್ಕಾಂ ಬಿಲ್‌ನ ಪ್ರತಿ, ಘಟಕದ ಉದ್ಯೋಗಾಧಾರ್‌, ಪಿಎಂಟಿಉದ್ದಿಮೆದಾರರ ಪರವಾನಗಿ ಪತ್ರ, ಪಾಸ್‌ಬುಕ್‌ ಪ್ರತಿ (ಬ್ಯಾಂಕ್‌ಖಾತೆಗೆ ಆಧಾರ್‌ ಸಂಖ್ಯೆ ಲಿಂಕ್‌ ಆಗಿರಬೇಕು), ಘಟಕದಮಾಲಿಕರಿಂದ ನೇಕಾರಕೆಲಸಗಾರರ ವಿವರಗಳನ್ನುಲೆಟರ್‌ಹೆಡ್‌,ಬಾಂಡ್‌ ಪೇಪರ್‌, ಸಾಮಾನ್ಯ ಕಾಗದದಲ್ಲಿ ದೃಢೀಕರಣ ಪತ್ರಸಲ್ಲಿಸಬೇಕಾದ ಅವಶ್ಯ ದಾಖಲಾತಿಗಳಾಗಿವೆ.

ಈ ಯೋಜನೆಯಸೌಲಭ್ಯ ಪಡೆಯಲು ಜಿಲ್ಲೆಯಲ್ಲಿರುವ ನೋಂದಾಯಿತ ವಿದ್ಯುತ್‌ಮಗ್ಗ ನೇಕಾರರ ಸಹಕಾರ ಸಂಘಗಳ ‌ ನ್ನು ಸಂಪರ್ಕಿಸಿ ಸೂಕ್ತಮಾಹಿತಿ ಪಡೆದುಕೊಳ್ಳಬಹುದು.ಮಾಹಿತಿಗೆ ದೂ.08152-243519 ಹಾಗೂ ಉಪನಿರ್ದೇಶಕರ ಕಚೇರಿ, ನಂ.ಎಸ್‌-9, ಎಸ್‌-9ಎ,2ನೇ ಮಹಡಿ,ಜಿಲ್ಲಾಡಳಿತ ಭವನ, ಎನ್‌.ಎಚ್‌-75, ಮುಳಬಾಗಿಲು ರಸ್ತೆ,ಕುಂಬಾರಹಳ್ಳಿ ಗ್ರಾಮ,ಕೋಲಾರ ಇಲ್ಲಿಗೆ ಸಂಪರ್ಕಿಸಿ

Advertisement

Udayavani is now on Telegram. Click here to join our channel and stay updated with the latest news.

Next