ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ Í ೇ.78 ವಿದ್ಯಾರ್ಥಿಗಳಿಗೆ ಈಗಾಗಲೇ ಕ ೋವಿಡ್ ಲಸಿಕೆ ಹಾಕಲಾಗಿದೆ.ಒಂದೆರಡು ದಿನಗಳಲ್ಲಿ ಶೇ.100 ಗುರಿ ಸಾಧಿಸಲುಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಆರ್.ಲತಾ ಜಿಲ್ಲಾ ಆರೋಗ್ಯ ಮñ ು ¤ ಕುಟುಂಬಕ ಲ್ಯಾಣಾಧಿಕಾರಿ ಹಾಗೂ ಕಾಲೇಜು ಶಿಕ್ಷಣಇಲಾಖೆಯ ಜಿಲ್ಲಾ ಲೀಡ್ ಕಾಲೇಜುಪ್ರಾಂಶುಪಾಲರಿಗೆ ಸೂಚನೆ ನೀಡಿದರು.
ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಪದವಿ ವ್ಯಾಸಂಗಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲಸಿಕಾಕರಣಕುರಿತು ಅಪರ ಮುಖ್ಯ ಕಾರ್ಯದರ್ಶಿ ಹಾಗೂಅಭಿವೃದ್ಧಿ ಆಯುಕ್ತರು ಬೆಂಗಳೂರಿನಿಂದ ನಡೆಸಿದವಿಡಿಯೋ ಸಂವಾದದಲ್ಲಿ ಭಾಗವಹಿಸಿ ಸರ್ಕಾರದಸೂಚನೆಗಳನ್ನು ಆಲಿಸಿದ ನಂತರ ಮಾತನಾಡಿದರು.
ಶೇ.22 ವಿದ್ಯಾರ್ಥಿಗಳಿಗೆ ಲಸಿಕೆ ಬಾಕಿ: ಜಿಲ್ಲೆಯಲ್ಲಿಎಂಜಿನಿಯರಿಂಗ್, ಡಿಪ್ಲೊಮಾ, ಪಾಲಿಟೆಕ್ನಿಕ್,ಬಿ.ಇಡಿ ಕಾಲೇಜು ಸೇರಿ 57 ಪದವಿ ಕಾಲೇಜುಗಳಿವೆ.ಇಲ್ಲಿ ವ್ಯಾಸಂಗ ಮಾಡುತ್ತಿರುವ 26,561ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಗುರಿ ನಿಗದಿಪಡಿಸಿದ್ದು, ಈ ಪೈಕಿ ಶೇ.78 ವಿದ್ಯಾರ್ಥಿಗಳಿಗೆಮೊದಲ ಡೋಸ್ ಲಸಿಕೆ ಹಾಕಿಸಲಾಗಿದೆ.
ಲಸಿಕೆಪಡೆಯದಿರುವ ಶೇ.22 ವಿದ್ಯಾರ್ಥಿಗಳಿಗೆ ಮೊದಲಡೋಸ್ ಲಸಿಕೆ ಹಾಕಲು ಒಂದೆರಡು ದಿನಗಳಲ್ಲಿಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಮತ್ತುಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನಸೂಚನೆ ನೀಡಿದರು.ವಿದ್ಯಾರ್ಥಿಗಳ ಸಂಪರ್ಕ ಮಾಡಿ: ಸರ್ಕಾರಿ ಮತ್ತುಖಾಸಗಿ ಪದವಿ ಕಾಲೇಜುಗಳ ಕಡೆಯಿಂದವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಅಥವಾನೇರವಾಗಿ ಸಂಪರ್ಕ ಮಾಡಿ ಲಸಿಕಾ ಕೇಂದ್ರಗಳಿಗೆಕರೆತಂದು ಹಾಕಿಸುವ ವ್ಯವಸ್ಥೆ ಮಾಡಬೇಕು.
ಈಗಾಗಲೇ ಲಸಿಕೆ ಪಡೆದಿರುವ ವಿದ್ಯಾರ್ಥಿಗಳ ವಿವರಮತ್ತು ಲಸಿಕೆ ಪಡೆಯಬೇಕಾಗಿರುವ ವಿದ್ಯಾರ್ಥಿಗಳವಿವರನ್ನು ಕೂಡಲೇ ಸಲ್ಲಿಸುವಂತೆ ಜಿಲ್ಲೆಯ ಎಲ್ಲಾಕಾಲೇಜು ಮುಖ್ಯಸ್ಥರಿಗೆ ತಿಳಿಸಬೇಕು, ಈ ನಿಟ್ಟಿನಲ್ಲಿಕಾರ್ಯನಿರ್ವಹಣೆ ಮಾಡುವಂತೆ ಕಾಲೇಜು ಶಿಕ್ಷಣಇಲಾಖೆಯ ಜಿಲ್ಲಾ ಲೀಡ್ ಕಾಲೇಜುಪ್ರಾಂಶುಪಾಲರಿಗೆ ಸೂಚನೆ ನೀಡಿದರು.ವಿಡಿಯೋ ಸಂವಾದದಲ್ಲಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾಆರ್.ಕಬಾಡೆ, ಕಾಲೇಜು ಶಿಕ್ಷಣ ಇಲಾಖೆಯ ಜಿಲ್ಲಾಲೀಡ್‌ಕಾಲೇಜಿನ ಪ್ರಾಂಶುಪಾಲ ಎಲ್.ನಾಗರಾಜು,ಆರ್‌ಸಿಎಚ್‌ಒ ಚನ್ನಕೇಶವರೆಡ್ಡಿ, ವಿವಿಧ ಇಲಾಖೆಗಳಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.