Advertisement

ಕೊರೊನಾ ತಡೆಗೆ ಮುಂಜಾಗ್ರತೆ ಅಗತ್ಯ

05:09 PM Jul 05, 2021 | Team Udayavani |

ನೆಲಮಂಗಲ:ಕೊರೊನಾ ಸೋಂಕಿನ ಬಗ್ಗೆ ಜನರು ಭಯಬಿಟ್ಟುಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಕಡ್ಡಾಯವಾಗಿ ಲಸಿಕೆಪಡೆದುಕೊಳ್ಳಬೇಕು ಎಂದು ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯೋಜನೆ ಪ್ರಾದೇಶಿಕ ನಿರ್ದೇಶಕ ಸೀನಪ್ಪ ಹೇಳಿದರು.

Advertisement

ತಾಲೂಕಿನ ಅರಿಶಿನಕುಂಟೆಯ ರುಡ್‌ಸೆಟ್‌ನಲ್ಲಿ ನಡೆದ ಲಸಿಕೆಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜಗತ್ತಿನಲ್ಲಿಮನುಷ್ಯನ ಮೇಲೆ ನಿರಂತರವಾಗಿ ಸಾಂಕ್ರಾಮಿಕ ರೋಗಗಳುದಾಳಿಮಾಡುತ್ತಿವೆ. ಆದರೆ,ಅವುಗಳ ನಿಯಂತ್ರಣಲಸಿಕೆಯಿಂದ ಸಾಧ್ಯ. ಪ್ರತಿಯೊಬ್ಬರು ಯಾವುದೇ ಅನುಮಾನ ಪಡದೇ ಲಸಿಕೆಪಡೆದುಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸುವ ಜತೆಲಸಿಕೆ ಪಡೆದು ಕೊರೊನಾ ದೂರ ಮಾಡಬೇಕು ಎಂದರು.

ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕಡ್ಡಾಯವಾಗಿಲಸಿಕೆ ಪಡೆದುಕೊಂಡು ಜಾಗೃತಿ ವಹಿಸುವಂತೆ ಲಸಿಕಾ ಅಭಿಯಾನದಲ್ಲಿ ಮಾಹಿತಿ ನೀಡಿ, ರುಡ್‌ಸೆಟ್‌ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿದಂತೆ 50ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಯಿತು.

ಜನಜಾಗೃತಿ ವೇದಿಕೆ ಜಿಲ್ಲಾ ಸಂಚಾಲಕಿ ವೀಣಾ ರಮೇಶ್‌ಮಾತನಾಡಿದರು. ಅರಿಶಿನಕುಂಟೆ ರುಡ್‌ಸೆಟ್‌ ನಿರ್ದೇಶಕಆನಂದ್‌, ಉಪನ್ಯಾಸಕ ಉದಯಕುಮಾರ್‌, ಆರೋಗ್ಯ ಇಲಾಖೆಯ ಅನುಸೂಯ, ಮುಖಂಡ ವಿಜಯ್‌ಹೊಸಪಾಳ್ಯಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next