Advertisement

ಲಸಿಕೆಯಿಂದ ಕೋವಿಡ್‌ ನಿಯಂತ್ರಣ ಸಾಧ್ಯ

07:31 PM Jun 26, 2021 | Team Udayavani |

ಮಂಡ್ಯ: ಕೋವಿಡ್‌ ಲಸಿಕೆ ಪಡೆದಲ್ಲಿಯಾವುದೇ ತೊಂದರೆಯೂ ಆಗುವುದಿಲ್ಲ.ಇದರಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯಾನಂದ ತಿಳಿಸಿದರು.

Advertisement

ನಗರದ ಪಿಇಎಸ್‌ ಇಂಜಿನಿಯರಿಂಗ್‌ಕಾಲೇಜಿನ ಡಾ.ಎಚ್‌.ಡಿ.ಚೌಡಯ್ಯಸಭಾಂಗಣದಲ್ಲಿಪಿಇಟಿ,ಪಿಇಎಸ್‌ಇಂಜಿನಿಯರಿಂಗ್‌ ಕಾಲೇಜು, ಐಎಸ್‌ಟಿಇ ಅಧ್ಯಾಪಕರ ಸಂಘ, ರೆಡ್‌ಕ್ರಾಸ್‌, ರಾಷ್ಟ್ರೀಯಸೇವಾ ಯೋಜನೆ ಇವರ ವತಿಯಿಂದಕಾಲೇಜಿನ ಅಧ್ಯಾಪಕರು, ಸಿಬ್ಬಂದಿಗಳಿಗೆ ಕೋವಿಡ್‌ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದ ಅವರು,ಕೋವಿಡ್‌ ಸೋಂಕು ಇಡೀ ಜಗತ್ತನ್ನೇ ವಿಪ್ಲವಗೊಳಿಸಿದೆ.

ಇದರಿಂದಾಗಿ ಎಲ್ಲವರ್ಗದವರೂ ತೊಂದರೆಗೊಳಗಾಗಿದ್ದಾರೆ.ಲಸಿಕೆ ಹಾಕಿಸಿಕೊಂಡಲ್ಲಿ ಯಾವುದೇತೊಂದರೆಯೂ ಆಗುವುದಿಲ್ಲ. ಲಸಿಕೆಪಡೆದಿದ್ದರೆತೊಂದರೆಅನುಭವಿಸಬೇಕಾಗುತ್ತದೆ. ಎಲ್ಲರೂ ಲಸಿಕೆ ಪಡೆದು ಕೋವಿಡ್‌ನಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಪಿಇಟಿ ಕಾರ್ಯದರ್ಶಿ ಎಸ್‌.ಎಲ್‌.ಶಿವಪ್ರಸಾದ್‌, ಆರ್‌ಸಿಎಚ್‌ ಅಧಿಕಾರಿ ಡಾ.ಸೋಮಶೇಖರ್‌, ಕಾಲೇಜಿನಪ್ರಾಂಶುಪಾಲ ಡಾ.ಸೋಮಶೇಖರ್‌,ಐಎಸ್‌ಟಿಇ ಅಧ್ಯಾಪಕರ ಸಂಘದ ಅಧ್ಯಕ್ಷಹಾಗೂ ಯುವ ರೆಡ್‌ಕ್ರಾಸ್‌ ಕಾರ್ಯಕ್ರಮಾಧಿಕಾರಿ ಡಾ.ಬಿ.ಎಸ್‌.ಶಿವಕುಮಾರ್‌,ಡಾ.ಬಿ.ಷಣ್ಮುಖ, ಡಾ.ಎಂ.ಎನ್‌.ವೀಣಾ,ಡಾ.ರೇವಣೇಶ್‌, ದೈಹಿಕ ಶಿಕ್ಷಣ ನಿರ್ದೇಶಕಅನಂತಪದ್ಮನಾಭಪ್ರಭು ಎಂ.ಎ.ವೇಣುಗೋಪಾಲ…, ಸಿ.ಜೆ.ಶೇಶಪ್ಪ, ಆರ್‌.ಎಂ.ಶಿವರಾಮು, ಮನು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next