Advertisement

ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

06:30 PM Jun 26, 2021 | Team Udayavani |

ಚಿಂತಾಮಣಿ: ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರಪರಿಣಾಮ ಬೀರುತ್ತದೆ ಎಂದು ತಜ್ಞರು ಸಲಹೆ ನೀಡಿದ್ದು, ಅದರಂತೆವೈದ್ಯರ ನೇಮಕ ಸೇರಿ ಸೂಕ್ತ ಕ್ರಮ ಕೈಗೊಳ್ಳಲು ಶಾಸಕ ಜೆ.ಕೆ.ಕೃಷ್ಣಾರೆಡ್ಡಿಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ತಾಪಂ ಕಚೇರಿಯಲ್ಲಿ ಸಭೆ ನಡೆಸಿದ ಅವರು, ತಾಲೂಕಿನಲ್ಲಿಮಕ್ಕಳ ತಜ್ಞರಕೊರತೆ ಇದೆ.ಕಳೆದ ಬಾರಿಯಂತೆ ಮಕ್ಕಳ ತಜ್ಞರನ್ನು ನೇಮಕಮಾಡಿಕೊಂಡು, ಮೂರನೇ ಅಲೆಯಿಂದ ಮಕ್ಕಳ ರಕಣೆ ‌Ò ಮಾಡಲುಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಈಗಾಗಲೇ ತಾಲೂಕಿನ ಬಟ್ಲಹಳ್ಳಿಯಲ್ಲಿ 30 ಬೆಡ್‌ ಸಿದ್ಧಪಡಿಸಿದ್ದು,ವೈದ್ಯರ ನೇಮಕ ಮಾಡಿಕೊಂಡು ಮತ್ತೂಂದು 30 ಹಾಸಿಗೆಗಳ ಕೊಠಡಿಸಿದ್ಧಪಡಿಸಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುವುದು. ತಾಲೂಕಿನಲ್ಲಿ 22 ಸಾವಿರಮಕ್ಕಳಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ವಿತರಣೆ ಮಾಡಿ,ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಎಂದು ಸಲಹೆ ನೀಡಿದರು.

ಈ ವೇಳೆಸಭೆಯಲ್ಲಿ ತಹಶೀಲ್ದಾರ್‌ ಹನುಮಂತರಾಯಪ್ಪ, ಇಒ ಮಂಜುನಾಥ,ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ವೈದ್ಯಾಧಿಕಾರಿ ಡಾ.ಸಂತೋಷ್‌,ಸಿಡಿಪಿಒ ಮಹೇಂದ್ರಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next