Advertisement

ಸರ್ಕಾರದಿಂದ ಗರಿಷ್ಠ ನೆರವು ಕೊಡಿಸುವ ಪ್ರಯತ್ನ

06:12 PM May 26, 2021 | Team Udayavani |

ಹಾಸನ: ಕೊರೊನಾ ವ್ಯಾಪಕವಾಗಿ ಹರಡುತ್ತಿರುವಸಂಕಷ್ಟದ ಸಮಯದಲ್ಲಿ ಜನಪ್ರತಿನಿಧಿಗಳು,ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜಸೇವಕರು ಸೇರಿದಂತೆ ಹಲವರು ವೈಯಕ್ತಿವಾಗಿನೇರವಾಗಿ ಸೋಂಕಿತರಿಗೆ ಸ್ಪಂದಿಸುತ್ತಿದ್ದಾರೆ.

Advertisement

ಕೆಲವು ಶಾಸಕರು ಲಕ್ಷಾಂತರ ರೂ. ವೆಚ್ಚ ಮಾಡಿಸೋಂಕಿತರಿಗೆ ನೆರವಾಗುತ್ತಿದ್ದು, ಹಾಸನಕ್ಷೇತ್ರದ ಬಿಜೆಪಿ ಶಾಸಕಪ್ರೀತಂ ಜೆ.ಗೌಡ ಅವರುಸೋಂಕಿತರ ಚಿಕಿತ್ಸೆಗೆಮಾರ್ಗ ದರ್ಶನ,ಔಷಧಿ ವಿತರಣೆ,ಊಟೋ ಪಚಾರಮಾಡುತ್ತಿದ್ದಾರೆ. ಆದರೆಅವರು ಎಲ್ಲೂ ಕಾಣಿಸಿಕೊಳ್ಳದೆ ಎಲೆಮರೆಕಾಯಿಯಂತೆ ತಮ್ಮಅಭಿಮಾನಿಗಳು, ಪಕ್ಷದಕಾರ್ಯಕರ್ತರ ಪಡೆಯೊಂದಿಗೆ ಹಾಸನ ವಿಧಾನಸಭಾಕ್ಷೇತ್ರದಲ್ಲಿ ಸಾವಿರಾರು ಸೋಂಕಿತರಿಗೆ ನೆರವುನೀಡುತ್ತಿದ್ದಾರೆ.

ಹಾಸನದಲ್ಲಿ ಕೊರೊನಾ ವ್ಯಾಪಕವಾಗುತ್ತಿದೆಯಲ್ಲಾ?

ಹೌದು, ಹಾಸನ ನಗರವೂ ಸೇರಿರುವುದರಿಂದಹಾಸನ ಕ್ಷೇತ್ರದಲ್ಲಿಕೊರೊನಾ ಸೋಂಕಿತರುಹೆಚ್ಚಿದ್ದಾರೆ.ಅವರಿಗೆ ಅಗತ್ಯ ಚಿಕಿತ್ಸಾ ವ್ಯವಸ್ಥೆ ಆಗುತ್ತಿದೆ.„

ಚಿಕಿತ್ಸೆಗೆ ವ್ಯವಸ್ಥೆ ಏನು?

Advertisement

ಹಿಮ್ಸ್‌ ಆಸ್ಪತ್ರೆ, 3 ಕೊರೊನಾ ಕೇರ್‌ಸೆಂಟರ್‌ಗಳಲ್ಲಿ ಹಾಸನ ನಗರದಲ್ಲಿ ಚಿಕಿತ್ಸಾವ್ಯವಸ್ಥೆ ಮಾಡಲಾಗಿದೆ. ಚುಚ್ಚುಮದ್ದು,ಆಕ್ಸಿಜನ್‌ ಸೇರಿದಂತೆ ಸರ್ಕಾರದಿಂದ ಗರಿಷ್ಠನೆರವುಕೊಡಿಸುವ ಪ್ರಯತ್ನ  ಮಾಡಿದ್ದೇನೆ.

ಚಿಕಿತ್ಸಾ ವ್ಯವಸ್ಥೆಗೆ ನೀವು ವೈಯಕ್ತಿಕವಾಗಿ ಹೇಗೆ ಸ್ಪಂದಿಸುತ್ತಿದ್ದೀರಿ?

ಅಧಿಕಾರಿಗಳ ಸಭೆ ನಡೆಸಿ ಹಿಮ್ಸ್‌ ಆಸ್ಪತ್ರೆಯಲ್ಲಿಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ, ಕೋವಿಡ್  ಕೇರ್‌ಸೆಂಟರ್‌ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಮೇಲೆಒತ್ತಡ ತಂದು ಹೆಚ್ಚುವರಿ ಆಕ್ಸಿಜನ್‌, 40 ವೆಂಟಿಲೇಟರ್,60 ಆಕ್ಸಿಜನ್‌ ಕಾನ್ಸಂಟ್ರೇಟರ್, ರೆಮ್‌ಡಿಸಿವಿರ್‌ಇಂಜೆಕ್ಷನ್‌ ಸೇರಿದಂತೆ ಸಾಧ್ಯವಾದ ಎಲ್ಲಔಷಧೋಪಚಾರ ಪಡೆದುಕೊಡಲಾಗಿದೆ.  ಚಿಕಿತ್ಸೆನಿರ್ವಹಣೆಗೆ 10 ಕೋಟಿ ರೂ. ಜಿಲ್ಲೆಗೆ  ಮಂಜೂರುಮಾಡಿಸಲೂ ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ .

 ಕೊರೊನಾ ಸಂಕಷ್ಟದ ಸಮಯದಲ್ಲಿ ನಿಮ್ಮ ವೈಯಕ್ತಿಕ ಕೊಡುಗೆ ಏನು?

ಸೋಂಕಿತರಿಗೆ ಪಕ್ಷಾತೀತವಾಗಿ ನೆರವಾಗಬೇಕುಎಂದು ನಾನು ಎಲ್ಲೂ ಕಾಣಿಸಿಕೊಳ್ಳದೆ ಅಭಿಮಾನಿಗಳು ಹಾಗೂ ಹಿತೈಷಿಗಳ ಮೂಲಕ ನೆರವಾಗುತ್ತಿದ್ದೇನೆ. ವಾರ್‌ ರೂಂ ತೆರೆದು ಸಹಾಯವಾಣಿ ಮೂಲಕ ಸೋಂಕಿತರು ಎಲ್ಲಿ ಚಿಕಿತ್ಸೆ ಪಡೆಯಬೇಕು ಎಂಬ ಮಾಹಿತಿ, ಅನಿವಾರ್ಯವಾದವರಿಗೆ ಆಸ್ಪತ್ರೆಗೆ ಬರಲು ವಾಹನದವ್ಯವಸ್ಥೆ ಮಾಡಲಾಗುತ್ತಿದೆ. ಹೋಂ ಐಸೋಲೇಷನ್‌ನಲ್ಲಿಇದ್ದವರನ್ನು ಸಂಪರ್ಕಿಸಿ ಮೆಡಿಕಲ್‌ ಕಿಟ್‌ನ್ನು ಮನೆಗೆತಲಪಿಸುತ್ತಿದ್ದೇವೆ. ಅಗತ್ಯವಿದ್ದವರಿಗೆ ಬೆಳಗ್ಗೆ ತಿಂಡಿ,ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಅವರ ಮನೆಯಬಳಿಗೇ ಹೋಗಿ ನನ್ನ ಅಭಿಮಾನಿಗಳು ಕೊಟ್ಟುಬರುತ್ತಿದ್ದಾರೆ. ಇದುವರೆಗೆ 13,000 ಮೆಡಿಕಲ್‌ ಕಿಟ್‌,ಪ್ರತಿದಿನ 4000 ತಿಂಡಿ ಪ್ಯಾಕೆಟ್‌, 5,500 ಊಟ ಕೊಡಲಾಗುತ್ತಿದೆ.

ತಿಂಡಿ, ಊಟ ವನ್ನು ಸೋಂಕಿಲ್ಲದ ಕಾರ್ಮಿಕರು, ಅಲೆಮಾರಿಗೂ ಸೇರಿ ದಂತೆ ಅಗತ್ಯವಿದ್ದವರಿಗೆ ಕೊಡುತ್ತಿದ್ದೇವೆ. ಕಲ್ಯಾಣ ಮಂಟಪ ವೊಂದರಲ್ಲಿ ತಿಂಡಿ, ಊಟಸಿದ್ಧಪಡಿಸಿಪ್ಯಾಕೆಟ್‌ ಮಾಡಿಪೂರೈಸಲಾಗುತ್ತಿದೆ.

 ಇಷ್ಟೊಂದು ಕೊಡುಗೆಯ ಉದ್ದೇಶ?
ನಾನೂ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದೇನೆ.  ಸೋಂಕಿತರ ಸಂಕಷ್ಟ ಅರಿವಾಗಿದೆ. ಚುನಾವಣೆಸಂದರ್ಭದಲ್ಲಿ ರಾಜಕಾರಣಿಗಳು ಸಾಕಷ್ಟು ಭರವಸೆಕೊಡುವುದು ಸಹಜ. ಆದರೆ ಜನರು ಸಂಕಷ್ಟದಲ್ಲಿರುವಾಗಸ್ಪಂದಿಸುವುದು ಮುಖ್ಯ. ಹಾಗಾಗಿ ನಾನು ಎಲ್ಲೂ ಕಾಣಿಸಿಕೊಳ್ಳದೆ, ಹೇಳಿಕೊಳ್ಳದೆ ಎಲೆಮರೆಯ ಕಾಯಿಯಂತಿದ್ದೇನೆ.ಸೋಂಕಿತರ ಚಿಕಿತ್ಸೆಗೆ ಮಾರ್ಗದರ್ಶನ, ಔಷಧೋಪಚಾರ, ಊಟೋಪಚಾರ ಸಮರ್ಪಕವಾಗಿ  ತಲಪುತ್ತಿದೆ. ಈಸ್ಪಂದನೆ ನನಗೆ ತೃಪ್ತಿ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next