Advertisement

3 ದಿನ ಎಲ್ಲಾ ಅಂಗಡಿ ತೆರೆಯಲು ಅನುಮತಿ

09:02 PM Jun 23, 2021 | Team Udayavani |

ಹಾಸನ: ಕೊರೊನಾ ನಿಯಂತ್ರಣಕ್ಕೆ ವಾರದಲ್ಲಿಮೂರು ದಿನ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಲು ಜಿಲ್ಲಾಧಿಕಾರಿಯವರು ಹೊರಡಿಸಿದ್ದ ಆದೇಶದಲ್ಲಿಮಾರ್ಪಾಡು ಮಾಡಿ ಸೋಮವಾರ, ಬುಧವಾರ,ಶುಕ್ರವಾರ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದುವಹಿವಾಟು ನಡೆಸಲು ಅವಕಾಶ ಕಲ್ಪಿಸಿದ್ದಾರೆ.

Advertisement

ಹವಾ ನಿಯಂತ್ರಿತ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಮಾಲ್‌ಗ‌ಳು ಹೊರತುಪಡಿಸಿಉಳಿದ ಅಂಗಡಿಗಳು ವಾರದಲ್ಲಿ ಮೂರು ದಿನ ಬೆಲಗ್ಗೆ 6 ರಿಂದ ಮಧ್ಯಾಹ್ನ 2ಗಂಟೆವರೆಗೆ ವ್ಯವಹರಿಸಬಹುದು.ಇನ್ನುಳಿದ ಮಂಗಳವಾರ, ಗುರುವಾರ, ಶನಿವಾರಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹೊರಡಿಸಿರುವಆದೇಶದಲ್ಲಿ ತಿಳಿಸಿದ್ದಾರೆ.

ಬ್ಯಾಂಕ್‌ಗಳು ಸೋಮವಾರ,ಬುಧವಾರ, ಶುಕ್ರವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 1ಗಂಟೆ ವರೆಗೆ ಸಾರ್ವಜನಿಕರ ಸೇವೆಗೆ ಅವಕಾಶವಿದೆ.ಇನ್ನುಳಿದ ಮಂಗಳವಾರ, ಗುರುವಾರ ಮತ್ತು ಶನಿವಾರಬೆಳಗ್ಗೆ 10ರಿಂದ ಮಧ್ಯಾಹ್ನ1 ಗಂಟೆ ವರೆಗೆ ಸಾರ್ವ ಜನಿಕಸೇವೆ ಹೊರತುಪಡಿಸಿ ಕಚೇರಿ ಕೆಲಸಕ್ಕೆ ಮಾತ್ರ ಅವಕಾಶನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next