ಎಚ್.ಶಿವರಾಜು
ಮಂಡ್ಯ: ಕೊರೊನಾ ಸೋಂಕಿನ ಎರಡನೇಅಲೆಯ ನಂತರ ಮುಂದಿನ ದಿನಗಳಲ್ಲಿ 3ನೇಅಲೆ ಪ್ರಾರಂಭವಾಗಲಿದೆ ಎಂಬ ವರದಿಜಿಲ್ಲೆಯ ಜನರನ್ನು ಆತಂಕ ಕ್ಕೀಡು ಮಾಡಿದೆ.ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಿದ್ಧತೆ ಆರಂಭಿಸಿದೆ.
ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟುಸಾವು-ನೋವು ಸಂಭವಿಸಿದೆ. ಸುಮಾರು350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ದ್ದರೆ,18ಕ್ಕೂಹೆಚ್ಚು ಮಂದಿಗೆ ಬ್ಲಾಕ್ ಫಂಗಸ್ ಸೋಂಕುಪತ್ತೆಯಾಗಿದೆ.
ಸದ್ಯ ಪಾಸಿಟಿವಿಟಿ ದರ ಶೇ.3.5ರಷ್ಟಿದ್ದು, ಸೋಂಕು ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಈ ನಡುವೆ ಮೂರನೇ ಅಲೆಎದುರಿಸಲು ಜನರು ಸಿದ್ಧರಾಗಬೇಕಿದೆ.ಮಕ್ಕಳ ಮೇಲೆ ಹೆಚ್ಚು ನಿಗಾ: ಮೂರನೇಅಲೆಯು ಮಕ್ಕಳಿಗೆ ಹಾಗೂ ದೊಡ್ಡÊ ರಿಗೂಸಂಕಷ್ಟ ತಂದೊಡ್ಡಬಹುದು. ಆದರೆ ಎಲ್ಲಿಯೂ ಕೇವಲ ಮಕ್ಕಳಿಗೆ ಮಾತ್ರ ಬರಲಿದೆಎಂಬುದನ್ನು ವೈಜ್ಞಾನಿಕವಾಗಿ ವರದಿ ಹೇಳಿಲ್ಲ.
ಆದರೂ ಮಕ್ಕಳ ಮೇಲೆ ಹೆಚ್ಚು ನಿಗಾ ವಹಿಸಬೇಕಾಗಿದೆ ಎಂಬುದು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ವೈದ್ಯರ ಅಭಿಪ್ರಾಯವಾಗಿದೆ.