Advertisement

ಕೊರೊನಾ ಲೆಕ್ಕಿಸದೇ ಶ್ರೀಕಂಠೇಶರನಿಗೆ  ಕದ್ದುಮುಚ್ಚಿ ಮುಡಿಕೊಟ್ಟ ಭಕ್ತರು!

08:20 PM Jun 22, 2021 | Team Udayavani |

ನಂಜನಗೂಡು: ಲಾಕ್‌ಡೌನ್‌ ನಡುವೆಯೂಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಕೊರೊನಾ ಸೋಂಕುಲೆಕ್ಕಿಸಿದೇ ಭಕ್ತರು ಮುಡಿ ಸಮರ್ಪಿಸಿ ಕಪಿಲಾನದಿಯಲ್ಲಿ ಪುಣ್ಯಸ್ನಾನ ಮಾಡಿ ಧನ್ಯತಾಭಾವ ಮೆರೆದರು.

Advertisement

ಕಳೆದ 2 ತಿಂಗಳಿನಿಂದ ದೇವಾಲಯಬಂದ್‌ ಆಗಿದ್ದು, ಮುಡಿ ತೆಗೆಯುಲೂ ಕೂಡಅವಕಾಶ ಕಲ್ಪಿಸಿಲ್ಲ. ಸೋಮವಾರ ಕಪಿಲಾ ಸ್ನಾನಘಟ್ಟದ ಸಮೀಪ ನಿಯಮ ಮೀರಿ ಕದ್ದುಮುಚ್ಚಿಮುಡಿ ತೆಗೆದ ಇಬ್ಬರು ಕೌÒರಿಕರನ್ನು ಪೊಲೀಸರುವಶಕ್ಕೆ ಪಡೆದಿದ್ದಾರೆ. ಆದರೆ, ಮುಡಿ ಕೊಟ್ಟ ಭಕ್ತರುಮಾತ್ರ ಹೊರಗಿನಿಂದಲೇ ದೇವರ ದರ್ಶನ ಪಡೆದುಮನೆ ಸೇರಿದ್ದಾರೆ.

ಆಗಿದ್ದೇನು?: ರಾಜ್ಯದ ಬಹುತೇಕ ಕಡೆ ಜೂ.21ರಿಂದ ಲಾಕ್‌ಡೌನ್‌ ಸಡಿಲಿಕೆ ಮಾಡಿ, ಬಸ್‌ ವ್ಯವಸ್ಥೆಕಲ್ಪಿಸಲಾಗಿದೆ. ಆದರೆ, ಮೈಸೂರು ಜಿಲ್ಲೆಯಲ್ಲಿಸೋಂಕು ಹೆಚ್ಚಿರುವುದರಿಂದ ಲಾಕ್‌ಡೌನ್‌ವಿಸ್ತರಿಸಲಾಗಿದೆ. ನಗರ ಹೊರತು ಪಡಿಸಿ ಜಿಲ್ಲೆಯಲ್ಲಿಬಸ್‌ ಸಂಚಾರ ಕಲ್ಪಿಸಲಾಗಿದೆ. ಹೀಗಾಗಿ ಭಕ್ತರುಲಾಕ್‌ಡೌನ್‌ತೆರವಾಗಿದೆಎಂದು ಭಾವಿಸಿ ದೇಗುಲದಸನ್ನಿಧಿಗೆ ಆಗಮಿಸಿದ್ದರು. ಇನ್ನು ಕೆಲವರುಸೋಮವಾರ ಶುಭದಿನವಾಗಿದ್ದರಿಂದ ಹರಕೆತೀರಿಸಲು ದೂರದಊರುಗಳಿಂದ ಬಂದಿದ್ದರು.

ಶ್ರೀಕಂಠೇಶ್ವರನ ದೇವಾಲಯ ಜೊತೆಗೆ ಭಕ್ತರುಮುಡಿ ಕೊಡುವ ಮುಡಿಕಟ್ಟೆ ಮಂದಿರ ಕೂಡಬಂದ್‌ ಮಾಡಲಾಗಿದೆ. ಈ ನಡುವೆ ಸೋಮವಾರಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಮುಡಿ ಸಮರ್ಪಿಸಲುಹಾತೊರೆಯುತ್ತಿದ್ದರು. ದೇವರಿಗೆ ಹರಕೆ ಹೊತ್ತಸಾಕಷ್ಟು ಭಕ್ತರು ಮುಡಿ ತೀರಿಸಲಾಗದೆಪರಿತಪಿಸುತ್ತಿದ್ದರು.ಸೋಮವಾರ ಬೆಳಗ್ಗೆ ಶ್ರೀಕಂಠೇಶ್ವರನಿಗೆ ಭಕ್ತರುಮುಡಿ ಅರ್ಪಿಸುವ ವಿಷಯ ನಗರದಲ್ಲಿ ಹಬ್ಬಿತು.ಕೊರೊನಾದಿಂದಾಗಿ ತಲೆಗೂದಲನ್ನು ತೆಗೆಸಿಕೊಳ್ಳುವವರಾರೂ ಸಿಗದೆ ಪರಿತಪಿಸುತ್ತಿದ್ದ ಕೌÒರಿಕರು ಇದುಸುಸಮಯ ಎನ್ನುತ್ತಾ ಕಪಿಲಾ ಸ್ನಾನ ಘಟ್ಟದತ್ತದೌಡಾಯಿಸಿದರು.

ನದಿ ಸಮೀಪ ಕದ್ದುಮುಚ್ಚಿಮುಡಿ ತೆಗೆದರು. ಭಕ್ತರು ತಾ ಮುಂದು ನಾಮುಂದು ಎನ್ನುತ್ತಾ ಹರಕೆ ತೀರಿಸಿದರು.ಕೊರೊನಾ ನಿಯಮಾವಳಿ ಉಲ್ಲಂಘಿಸಿ ಮುಡಿತೆಗೆಯುತ್ತಿರುವ ಸುದ್ದಿ ತಿಳಿದ ಪೊಲೀಸರೂ ನದಿದಡದತ್ತ ಬಂದರೆ, ಅತ್ತ ದೇವಾಲಯದ ಬಾಗಿಲುಕೂಡ ಬಂದ್‌ ಆಗಿದೆ.

Advertisement

ಇತ್ತ ಮುಡಿ ಸಮರ್ಪಿಸುವ ಮುಡಿಕಟ್ಟೆಮಂದಿರದ ಬಾಗಿಲಿನ ಬೀಗವೂ ನೇತಾಡುತ್ತಿದೆ.ಆದರೆ, ಮುಡಿಕೊಟ್ಟವರು ಮಾತ್ರ ನುಣುಪಾಗಿಪಳಪಳನೆ ಹೊಳೆಯುತ್ತಿರುವ ತಲೆಯೊಂದಿಗೆ ಕಪಿಲೆಯಲ್ಲಿ ಮಿಂದೆದ್ದು, ಶ್ರೀಕಂಠೇಶ್ವರನ ದೇವಾಲಯದಹೆಬ್ಟಾಗಿಲಿಗೆಬಂದುಹರಕೆತೀರಿಸಿದತೃಪ್ತಿಯ ಭಾವದಿಂದ ದೇವರಿಗೆ ಕೈಮುಗಿದುಹೋಗುತ್ತಿರುವುದುಕಂಡು ಬಂತು.ಹಾಗಾದರೆಈಭಕ್ತರ ಮುಡಿ ತೆಗೆದವರುಯಾರು, ಎಲ್ಲಿ ತೆಗೆದರು ಎಂದು ಪರಿಶೀಲಿಸಿದಾಗ,ಮುಡಿಕಟ್ಟೆ ಕಟ್ಟಡದ ಹಿಂಬಾಗಿಲಿನಲ್ಲಿ ಮುಡಿತೆಗೆಯುತ್ತಿರುವ ದೃಶ್ಯಗಳು ಕಂಡು ಬಂದವು.

ಕೋವಿಡ್‌ ಮಾರ್ಗಸೂಚಿ ಮೀರಿ ಭಕ್ತರ ಮುಡಿತೆಗೆದ ಸಂಬಂಧ ನಗರ ಪೊಲೀಸ್‌ ಠಾಣೆ ಎಸ್‌ಐವಿಜಯರಾಜ ಇಬ್ಬರು ಕೌÒರಿಕರನ್ನು ವಶಕ್ಕೆಪಡೆದಿದ್ದಾರೆ. ಇದರೊಂದಿಗೆ ಸೋಮವಾರ ಮುಡಿತೆಗೆಯುವಕಾರ್ಯಕ್ಕೆ ತೆರೆ ಎಳೆಯಲಾಯಿತು.ಮೈಸೂರಿನಲ್ಲಿ ಅದರಲ್ಲೂ ನಂಜನಗೂಡುತಾಲೂಕಿನಲ್ಲಿ ಅತಿ ಹೆಚ್ಚು ಸೋಂಕಿನ ಪ್ರಕರಣಗಳುಕಂಡು ಬರುತ್ತಿವೆ. ಈ ನಡುವೆ, ಭಕ್ತರುಕದ್ದುಮುಚ್ಚಿಮುಡಿ ತೆಗೆಸಿಕೊಳ್ಳುತ್ತಿರುವುದು, ಅಂತರವಿಲ್ಲದೇಕಪಿಲಾ ನದಿಯಲ್ಲಿ ದುಂಬಾಲು ಬಿದ್ದ ಸ್ನಾನಮಾಡುತ್ತಿರುವುದು ಆತಂಕಕ್ಕೆಕಾರಣವಾಗಿದೆ.

ಶ್ರೀಧರ್ಆರ್‌.ಭಟ್

Advertisement

Udayavani is now on Telegram. Click here to join our channel and stay updated with the latest news.

Next