Advertisement
ಅಪೂರ್ಣ ಕಾಮಗಾರಿ: ಟೆಂಡರ್ ಶೂರ್ ಮಾದರಿಯಲ್ಲಿಅಭಿವೃದ್ಧಿಪಡಿಸುತ್ತಿರುವ ರಸ್ತೆ ಕಾಮಗಾರಿಅಪೂರ್ಣವಾಗಿಲ್ಲ. ಕಾಮಗಾರಿಗಾಗಿ ರಸ್ತೆ, ಫುಟ್‌ಪಾತ್‌ಗಳನ್ನು ಅಗೆಯಲಾಗಿದೆ. ಡಕ್ಟ್ಗಳ ಅಳವಡಿಕೆಗೆ ತೆಗೆದಗುಂಡಿಗಳನ್ನು ಮುಚ್ಚಿಲ್ಲ. ರಸ್ತೆಯ ತುಂಬೆಲ್ಲ ಫುಟ್‌ಪಾತ್‌ಗಳಲ್ಲಿ ಜಲ್ಲಿ, ಮರಳು, ಬೃಹತ್ ಗಾತ್ರದ ಕೊಳವೆಗಳನ್ನುಇರಿಸಲಾಗಿದೆ.
Related Articles
Advertisement
ಕಾಮಗಾರಿ ಸ್ಥಳಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸು ವಂತೆ ಪಾಲಿಕೆ ಆಯುಕ್ತಗೌರವ್ ಗುಪ್ತ ಅವರು, ಪ್ರಧಾನ ಅಭಿಯಂತರರು, ಎಂಟು ವಲಯಗಳ ಮುಖ್ಯಅಭಿಯಂತರರಿಗೆ ಸೂಚಿಸಿದ್ದಾರೆ.
ಆದರೆ, ಎರಡನೇ ಶನಿವಾರ ಹಾಗೂ ಭಾನುವಾರ ರಜೆ ಇದ್ದಕಾರಣ ಅಧಿಕಾರಿಗಳು ಕಾಮಗಾರಿ ಸ್ಥಳಗಳತ್ತ ಹೆಜ್ಜೆ ಹಾಕಿಲ್ಲ. ಹೀಗಾಗಿ, ಕಾಮಗಾರಿ ಸ್ಥಳದಲ್ಲಿನ ಡೆಬ್ರಿಸ್, ಸಂಗ್ರಹಿಸದ ಸಾಮಗ್ರಿಗಳು ಅಲ್ಲೇ ಉಳಿದಿವೆ. ಮ್ಯಾನ್‌ಹೋಲ್, ಚರಂಡಿ, ರಸ್ತೆಅಗೆದ ಗುಂಡಿ ಮುಚ್ಚಿಲ್ಲ ಮತ್ತು ಟ್ರೆಂಚ್ ಹಾಕ್ಕಿಲ್ಲ. ಕೊರೊನಾ ಕೆಲಸದಿಂದ ಹೊರಬಂದು,ಪಾಲಿಕೆ, ಸ್ಮಾರ್ಟ್‌ಸಿಟಿ ಮತ್ತು ಜಲಮಂಡಳಿ ಅಧಿಕಾರಿಗಳು ಸಮನ್ವಯತೆಯೊಂದಿಗೆಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ
ಬ್ಯಾರಿಕೇಡ್‌ಗಳಿಲ್ಲ
ಕಾಮಗಾರಿ ನಡೆಯುತ್ತಿರುವ ಕೆಲವೇಕೆಲವು ಜಾಗಗಳಲ್ಲಿ ಮಾತ್ರ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಅದನ್ನು ಹೊರತುಪಡಿಸಿ ಕೆಲವೆಡೆ ಬ್ಯಾರಿಕೇಡ್‌ಗಳೇ ಇಲ್ಲ.ಶಿವಾನಂದ ವೃತ್ತ, ಇನ್ ಫ್ಯಾಂಟ್ರಿ ರಸ್ತೆ ಸೇರಿಕೆಲ ರಸ್ತೆಗಳಲ್ಲಿ ಕೆಲವು ಕಡೆ ರಸ್ತೆ ಅಗೆದಿರುವಜಾಗದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿಲ್ಲ.
ಮೋಹನ್ ಭದ್ರಾವತಿ
ವಿಕಾಸ್ ಆರ್. ಪಿಟ್ಲಾಳಿ