ಪಣಜಿ: ನೆರೆಯ ರಾಜ್ಯಗಳಿಂದ ಗೋವಾ ರಾಜ್ಯ ಪ್ರವೇಶಿಸಲು 72 ಗಂಟೆಗಳ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿರುವುದನ್ನು ಸಡಿಲಗೊಳಿಸಲು ಗೋವಾ ರಾಜ್ಯ ಸರ್ಕಾರವು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ನ್ಯಾಯಾಲಯವು ತಳ್ಳಿಹಾಕಿದೆ.
ಸದ್ಯದ ಕೋವಿಡ್ ಸ್ಥಿತಿಯನ್ನು ಗಮನಿಸಿದರೆ ಗೋವಾ ಪ್ರವೇಶಕ್ಕೆ ನೆಗೆಟಿವ್ ಕಡ್ಡಾಯಗೊಳಿಸಿರುವುದನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ :ಈ ಸರ್ಕಾರಕ್ಕೆ ದೂರಾಲೋಚನೆಗಳೇ ಇಲ್ಲ : ರಾಜ್ಯ ಸರ್ಕಾರದ ಕೋವಿಡ್ ಪ್ಯಾಕೇಜ್ ಗೆ HDK ಆಕ್ರೋಶ
ಗೋವಾ ಸರ್ಕಾರದ ವತಿಯಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಅಡ್ವಕೇಟ್ ಜನರಲ್ ದೇವಿದಾಸ್ ಪಾಂಗಮ್ ನ್ಯಾಯಾಲಯದಲ್ಲಿ ವಾದ ಮಂಡಿಸಿ- ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಎರಡೂ ರಾಜ್ಯಗಳು ಹೇರಿರುವ ನಿರ್ಬಂಧವನ್ನು ಗೋವಾ ರಾಜ್ಯಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ, ಏಕೆಂದರೆ ಈ ಎರಡೂ ರಾಜ್ಯಗಳ ದೊಡ್ಡ ರಾಜ್ಯಗಳಾಗಿವೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಕಾರ್ಮಿಕರಿದ್ದಾರೆ. ಗೋವಾವನ್ನು ದೆಹಲಿಗೆ ಹೋಲಿಕೆ ಮಾಡಿಕೊಳ್ಳಬಹುದು.
ದೆಹಲಿಯಲ್ಲಿ ಕೋವಿಡ್ ಮಾರ್ಗಸೂಚಿಯಲ್ಲಿ ಸ್ಥಳೀಯ ನಿವಾಸಿಗಳಿಗೆ ಮತ್ತು ಕೆಲಸದ ನಿಮಿತ್ತ ದೆಹಲಿಗೆ ಆಗಮಿಸುವವರಿಗೆ ಕೋವಿಡ್ ನೆಗೆಟಿವ್ ಕಡ್ಡಾಯಗೊಳಿಸಿಲ್ಲ. ಅದೇ ರೀತಿ ಗೋವಾದಲ್ಲಿಯೂ ಕೂಡ ನೆಗೆಟಿವ್ ಖಡ್ಡಾಯಗೊಳಿಸಿರುವುದನ್ನು ತೆರವುಗೊಳಿಸಬೇಕು ಎಂದು ವಾದ ಮಂಡಿಸಿದರು.
ಆದರೆ ಕೋವಿಡ್ ಸದ್ಯದ ಸ್ಥಿತಿಯಲ್ಲಿ ಗೋವಾ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ಕಡ್ಡಾಯ ಗೊಳಿಸಿರುವುದನ್ನು ತೆರವುಗೊಳಿಸಲು ಅಸಾಧ್ಯ ಎಂದು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠ ಹೇಳಿದೆ.