Advertisement

ಕೋವಿಡ್ ಸಂದೇಶದ ಒಟ್ಟಿಗೆ ಮೊಬೈಲ್‌ಗ‌ೂ “ವೈರಸ್‌’ತಗಲುತ್ತೆ!

11:23 AM May 20, 2020 | mahesh |

ಕೋವಿಡ್ ಜಾಗೃತಿ ಸಂಬಂಧಿತ ಆ್ಯಪ್‌ಗಳು, ಸಂದೇಶಗಳ ಲಿಂಕ್‌ಗಳ ಮೇಲೆ ಕ್ಲಿಕ್ಕಿಸುವಾಗ ಎಚ್ಚರ. ಇದರೊಂದಿಗೆ ಸೆರ್ಬರಸ್‌ ಎಂಬ ವೈರಸ್‌ ಕೂಡ ನಿಮ್ಮ ಸ್ಮಾರ್ಟ್‌ಫೋನ್‌ ಸೇರಬಹುದು! ಈ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ಎಲ್ಲ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಿದೆ. ಕೋವಿಡ್ ಸಂಬಂಧಿತ ಸಂದೇಶ, ಆ್ಯಪ್‌ಗ್ಳಿಂದ ಲಾಭ ಪಡೆದುಕೊಳ್ಳಲೆಂದೇ, ಬ್ಯಾಂಕಿಂಗ್‌ ಟ್ರೋಜನ್‌ಗೆ ಸಂಬಂಧಿಸಿದ ಈ ವೈರಸ್‌ ಅನ್ನು ಹ್ಯಾಕರ್ಸ್‌ಗಳು ಸೃಷ್ಟಿಸಿದ್ದಾರೆ. ಇಂಥ ಕೊಂಡಿಗಳನ್ನು ಕ್ಲಿಕ್ಕಿಸಿದಾಗ, ಸೆರ್ಬರಸ್‌ ವೈರಸ್‌ ಸ್ಮಾರ್ಟ್‌ಫೋನನ್ನು ಸೇರಿ, ಕ್ರೆಡಿಟ್‌ ಕಾರ್ಡ್‌, ಬ್ಯಾಂಕ್‌ ಖಾತೆಗೆ ಸಂಬಂಧಿಸಿದ ವಿವರಗಳನ್ನು, ಹ್ಯಾಕರ್ಸ್‌ಗಳಿಗೆ ರವಾನಿಸುತ್ತದೆ. ಅಲ್ಲದೆ, ಫೋನ್‌ನಲ್ಲಿನ ಎಲ್ಲ ಪಾಸ್‌ವರ್ಡ್‌, ನಂಬರ್‌ಗಳನ್ನೂ ಕದ್ದು, ಸೈಬರ್‌ ಫಿಶಿಂಗ್‌ಗೆ ಎಡೆಮಾಡಿಕೊಡುತ್ತದೆ ಎಂದು ಸಿಬಿಐ ಮೂಲಗಳು ಎಚ್ಚರಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next