Advertisement
545 ಸಕ್ರಿಯ ಪ್ರಕರಣಗಳಿದ್ದು, 172 ಮಂದಿಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ತೀವ್ರತೆ ಮುಂದುವರಿದರೆ ಇನ್ನು ಹತ್ತೇ ದಿನದಲ್ಲಿ ಜಿಲ್ಲೆಯ ಪ್ರತಿನಿತ್ಯದ ಪ್ರಕರಣಗಳ ಸಂಖ್ಯೆ ಒಂದು ಸಾವಿರದ ಹತ್ತಿರಕ್ಕೆ ಬರುವ ಆತಂಕ ಎದುರಾಗಿದೆ. ಜ. 6ರಂದು ಜಿಲ್ಲೆಯಲ್ಲಿ 2 ಪ್ರಕರಣ ಗಳು ವರದಿಯಾಗಿದ್ದವು. ಅಂದು ಇಡೀ ಜಿಲ್ಲೆಯಲ್ಲಿದ್ದುದು ಕೇವಲ 8 ಸಕ್ರಿಯ ಪ್ರಕರಣಗಳು. ಈಗ ಎಂಟೇ ದಿನದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 545 ಕ್ಕೇರಿದೆ.
Related Articles
Advertisement
ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಎಂದು ಜನರು ಮೈಮರೆಯುತ್ತಿದ್ದಾರೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ. ಕಳೆದ ನಾಲ್ಕೈದು ದಿನಗಳವರೆಗೂ ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಈಗ ಆಸ್ಪತ್ರೆಯಲ್ಲಿ 172 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪೈಕಿ 6 ಮಂದಿಗೆ ಆಕ್ಸಿಜನ್ ನೀಡಲಾಗುತ್ತಿದೆ. ಆಕ್ಸಿಜನ್ ಅವಲಂಬಿತರಾಗಿರುವವರಲ್ಲಿ 40 ರಿಂದ 60 ವರ್ಷದವರಿದ್ದಾರೆ. ನಗರ ಸಮೀಪದ ಮಾದಾಪುರ ಕೋವಿಡ್ ಕೇರ್ ಕೇಂದ್ರ ಹಾಗೂ ನಗರದ ಹೊಸ ಹೌಸಿಂಗ್ ಬೋರ್ಡ್ ಕಾಲೋನಿಬಳಿಯಿರುವ ಮುಕ್ತ ವಿವಿ ಕೋವಿಡ್ ಕೇಂದ್ರವನ್ನು ಮತ್ತೆ ತೆರೆಯಲಾಗಿದ್ದು, ಸೋಂಕಿತರಲ್ಲಿ ಕಡಿಮೆ ರೋಗ ಲಕ್ಷಗಳಿರುವವರನ್ನು ಈ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ.
ಮಾಸ್ಕ್ ಕೂಡ ಧರಿಸುತ್ತಿಲ್ಲ :
ಜಿಲ್ಲೆಯಲ್ಲಿ ಕೋವಿಡ್ ತೀವ್ರ ವೇಗದಲ್ಲಿ ಹರಡುತ್ತಿದ್ದರೂ ಜನರು ಇದರ ಬಗ್ಗೆ ನಿರ್ಲಕ್ಷಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿರಬೇಕೆಂಬ ಪರಿಜ್ಞಾನವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕೋವಿಡ್ ಜಾಗೃತಿ ಪಡೆ, ನಗರಸಭೆ ಸಿಬ್ಬಂದಿ ದಂಡ ವಿಧಿಸುತ್ತಿದ್ದಾರೆ ಎಂಬ ವೇಳೆ ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ. ಬಳಿಕ ಮಾಸ್ಕ್ ಧರಿಸುತ್ತಿಲ್ಲ. ಹೀಗಾಗಿ ಸೋಂಕಿತರು ತಮ್ಮ ಮಧ್ಯದಲ್ಲೇ ಇದ್ದರೂಗೊತ್ತಿಲ್ಲದಂತೆ ಉಳಿದವರಿಗೆ ಹರಡುತ್ತಿದೆ. ಇನ್ನೂ ಭೌತಿಕ ಅಂತರವಂತೂ ಇಲ್ಲವೇ ಇಲ್ಲದಂತಾಗಿದೆ. 2ನೇ ಅಲೆಯಲ್ಲಿ ಸ್ವಲ್ಪಕಡೆಯಾದರೂ ಭೌತಿಕ ಅಂತರದ ಪಾಲನೆ ಕಾಣಬಹುದಿತ್ತು. ಈಗ ಭೌತಿಕ ಅಂತರ ಕಾಪಾಡಿ ಎಂದರೆ ತಮಾಷೆ ವಿಷಯದಂತಾಗಿದೆ.
71 ಮಕ್ಕಳಿಗೆ ಕೋವಿಡ್ : ಒಟ್ಟು ಪ್ರಕರಣಗಳ ಪೈಕಿ 20ವರ್ಷಕ್ಕಿಂತ ಕಡಿಮೆ ವಯಸ್ಸಿನವರು 71 ಮಂದಿ ಇದ್ದಾರೆ. ಇದರಲ್ಲಿ 10 ವರ್ಷದಿಂದ20 ವರ್ಷದವರೆಗಿನ 53 ಮಂದಿ ಹಾಗೂ 10 ವರ್ಷಕ್ಕಿಂತ ಕಡಿಮೆ ಇರುವ 18 ಮಕ್ಕಳಿದ್ದಾರೆ.
ಪ್ರತಿ ದಿನ ಒಂದೂವರೆ ಸಾವಿರ ಇದ್ದ ಪರೀಕ್ಷೆಯ ಸಂಖ್ಯೆಯನ್ನು ಐದು ಸಾವಿರಕ್ಕೆಏರಿಸಲಾಗಿದೆ. ಶಾಲೆಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 16 ಕೋವಿಡ್ ಕೇರ್ ಕೇಂದ್ರಗಳಿವೆ. ಈಗ 2 ಕಾರ್ಯನಿರ್ವಹಿಸುತ್ತಿವೆ.ಪ್ರಕರಣ ಹೆಚ್ಚಾದಂತೆ ತೆರೆಯಲಾಗುವುದು. – ಡಾ. ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯಾಧಿಕಾರಿ.
– ಕೆ.ಎಸ್. ಬನಶಂಕರ ಆರಾಧ್ಯ