Advertisement

ಕೋವಿಡ್‌ ಲಾಕ್‌ಡೌನ್‌ಗೆ 2 ವರ್ಷ ಪೂರ್ತಿ

02:15 AM Mar 23, 2022 | Team Udayavani |

ಮಾ. 24ಕ್ಕೆ ಸರಿಯಾಗಿ ಎರಡು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿಯವರು ಟೆಲಿವಿಷನ್‌ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಕೊರೊನಾ ಲಾಕ್‌ಡೌನ್‌ ಘೋಷಿಸಿದರು. ಈ ನಿರ್ಧಾರಕ್ಕೆ ಈಗ 2 ವರ್ಷ ಸಂದಿದೆ. ಆ ಹಿನ್ನೆಲೆಯಲ್ಲಿ ಅದರ ಒಂದು ಹಿನ್ನೋಟ ಇಲ್ಲಿದೆ.

Advertisement

ಭಾರತದಲ್ಲಿ 1,581 ಹೊಸ ಪ್ರಕರಣ
ದೇಶದಲ್ಲಿ ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗಿನವರೆಗಿನ 24 ಗಂಟೆಗಳಲ್ಲಿ 1,581 ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4,30,10,971 ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದೇ ಅವಧಿಯಲ್ಲಿ 33 ಜನರು ಕೊರೊನಾದಿಂದಾಗಿ ಸಾವಿಗೀಡಾಗಿದ್ದು, ಈವರೆಗೆ ಸಾವಿಗೀಡಾದವರ ಸಂಖ್ಯೆ 5,16,543 ಕ್ಕೇರಿದೆ. ಇನ್ನು, ಸಕ್ರಿಯ ಪ್ರಕರಣಗಳ ಸಂಖ್ಯೆ 23,913ರಷ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸ್ಥಿತ್ಯಂತರಗಳೇನು?
1. ಬೇರೆ ರಾಜ್ಯಗಳಿಗೆ ಕೂಲಿಗಾಗಿ ವಲಸೆ ಹೋದ ಹಲ ವಾರು ಮಂದಿಯ ಮೇಲೆ ದುಷ್ಪರಿಣಾಮ ಬೀರಿತು.
2. ದೇಶದ ನಾನಾ ರಾಜ್ಯಗಳಲ್ಲಿನ ವಿದ್ಯುತ್‌ ಬೇಡಿಕೆಯ ಪ್ರಮಾಣ ಗಣನೀಯವಾಗಿ ಕುಸಿಯಿತು.
3. ಲಕ್ಷಾಂತರ ಜನರು ನಿರುದ್ಯೋಗಿಗಳಾದರು.
4. ಜನತಾ ಕರ್ಫ್ಯೂ ಆರಂಭದಲ್ಲಿ ನಿಷೇಧಕ್ಕೀಡಾಗಿದ್ದ ಮದ್ಯ ಮಾರಾಟಕ್ಕೆ ಮೇ 4ರಿಂದ ಅವಕಾಶ ನೀಡಲಾಯಿತು.
5. ಹಸಿವು, ಆತ್ಮಹತ್ಯೆ, ಬಳಲಿಕೆ, ರಸ್ತೆ ಹಾಗೂ ರೈಲು ಅಪಘಾತಗಳು ಇತ್ಯಾದಿಗಳಿಂದಾಗಿ ಮೇ 10ರ ಹೊತ್ತಿಗೆ ದೇಶಾದ್ಯಂತ 350 ಸಾವು ಸಂಭವಿಸಿದವು.
6. ದೇಶದ ಆರ್ಥಿಕತೆ ಕುಸಿತ. 2018ರ ಜನವರಿಯಲ್ಲಿ ಶೇ. 8.2ರಷ್ಟಿದ್ದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಪ್ರಮಾಣ ಶೇ. 3.1ಕ್ಕೆ ಇಳಿಯಿತು.

ಆದ ಪ್ರಮುಖ ಬದಲಾವಣೆಗಳು
1. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಬಗ್ಗೆ ಜಾಗೃತಿ.
2. ಓವರ್‌ ದಿ ಟಾಪ್‌ (ಒಟಿಟಿ) ಹೆಚ್ಚು ಜನಪ್ರಿಯ.
3. “ವರ್ಕ್‌ ಫ್ರಂ ಹೋಂ’ಗೆ ಹೆಚ್ಚಿನ ಕಂಪೆನಿಗಳ ಆಸಕ್ತಿ.
4. ಗೂಗಲ್‌ ಮೀಟ್‌ ರೀತಿಯ ಹಲವು ಆ್ಯಪ್‌ ಲಗ್ಗೆ.
5. ಮೋದಿ ಸರಕಾರ‌ದ ಕ್ಯಾಶ್‌ಲೆಸ್‌ ಇಂಡಿಯಾಕ್ಕೆ ಹೊಸ ಅರ್ಥ. ಡಿಜಿಟಲ್‌ ಪಾವತಿ ಉತ್ತುಂಗಕ್ಕೆ.

ಮತ್ತೊಂದು ನಗರ ಲಾಕ್‌ಡೌನ್‌
ಚೀನದ ಈಶಾನ್ಯ ವಲಯದ ಜಿಲಿನ್‌ ಪ್ರಾಂತ್ಯದಲ್ಲಿರುವ ಶೆನ್ಯಂಗ್‌ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 4 ಸಾವಿರ ದಾಟಿದ (4,770) ಹಿನ್ನೆಲೆಯಲ್ಲಿ ಆ ನಗರದಲ್ಲಿ ಚೀನ ಸರಕಾರ‌ ಲಾಕ್‌ಡೌನ್‌ ಜಾರಿಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next