ಪುಣೆ: ಪುಸ್ತಕಗಳು ಧೂಳಿನ ಜತೆಗೆ ಮಣ್ಣು ಹಿಡಿಯದಂತೆ ತಡೆಯುವ ಮೂಲಕ ಪುಸ್ತಕಗಳನ್ನು ಸುರಕ್ಷಿತವಾಗಿಡಲು ಲಾಕ್‌ಡೌನ್ ಸಂದರ್ಭದಲ್ಲಿ ಗ್ರಂಥಾಲಯಗಳನ್ನು ತೆರೆದಿ ಡಬೇಕೆಂದು ಗ್ರಂಥಾಲಯ ನಿರ್ವಾಹಕರು ಒತ್ತಾಯಿಸಿರುವುದಲ್ಲದೆ, ಪುಸ್ತಕಗಳ ವಿನಿಮಯಕ್ಕಾಗಿ ಒಂದೇ ಸಮಯದಲ್ಲಿ ಗ್ರಂಥಾಲಯ ದಲ್ಲಿ ಜನಸಂದಣಿ ಉಂಟಾಗದ ಕಾರಣ ಸಾಮಾಜಿಕ ಅಂತರದ ನಿಯಮಗಳನ್ನು ಅನು ಸರಿಸಲು ಸಾಧ್ಯವಿದೆ ಎಂದು ಸೂಚಿಸಲಾಗಿದೆ.
ಓದುವ ಹಸಿವನ್ನು ನೀಗಿಸಲು ಜ್ಞಾನವನ್ನು ಒದಗಿಸುವ ಗ್ರಂಥಾಲಯಗಳು ಕಳೆದ ಎರಡು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದರಿಂದ ಮೂಲ ಪುಸ್ತಕಗಳ ಸುರಕ್ಷತೆ ಮತ್ತು ಗ್ರಂಥಾಲಯಗಳು ಆರ್ಥಿಕ ಆದಾಯ ಸಂಕಷ್ಟದಲ್ಲಿದೆ. ಅಗತ್ಯ ಸೇವೆಗಳಲ್ಲಿ ಪುಸ್ತಕಗಳನ್ನು ಸೇರಿಸುವ ಮೂಲಕ ಗ್ರಂಥಾಲಯಗಳು ಮತ್ತು ಪುಸ್ತಕ ಮಳಿಗೆಗಳನ್ನು ತೆರೆಯಲು ಗ್ರಂಥಾಲಯ ನಿರ್ವಾಹಕರು ಆಗ್ರಹಿಸುತ್ತಿದ್ದಾರೆ.
ಪುಣೆ ನಗರ ವಚನ್ ಮಂದಿರ, ಪುಣೆ ಮರಾಠಿ ಗ್ರಂಥಾಲಯ, ಸಿದ್ಧಾರ್ಥ್ ಗ್ರಂಥಾಲಯ, ಮಹಾರಾಷ್ಟ್ರ ಸಾಹಿತ್ಯ ಪರಿಷತ್, ಸರಕಾರಿ ಗ್ರಂಥಾಲಯ, ತ್ವಾಷ್ಟಾ ಕಸರ್ ಸಮಾಜದ ಸಹಿತ ನಗರದಲ್ಲಿ ಅನೇಕ ಸಣ್ಣ ಮತ್ತು ದೊಡ್ಡ ಗ್ರಂಥಾಲಯಗಳಿವೆ. ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾದ ಬಳಿಕ ಎ. 1ರಿಂದ ವಿಧಿಸಲಾದ ಕಟ್ಟುನಿಟ್ಟಿನ ನಿರ್ಬಂಧಗಳಿಂದಾಗಿ ಗ್ರಂಥಾಲಯಗಳನ್ನು ಮುಚ್ಚಲಾಗಿದೆ. ಪುಸ್ತಕಗಳು ಧೂಳು ಹಿಡಿಯುತ್ತಿವೆ. ಒಂದೆಡೆ ಎರಡು ತಿಂಗಳ ಆದಾಯವಿಲ್ಲ, ಮತ್ತೂಂದೆಡೆ ಸಿಬಂದಿ ವೇತನ ಮತ್ತು ಇತರ ಹಲವಾರು ವೆಚ್ಚಗಳು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಿದೆ.
ಅನೇಕ ಗ್ರಂಥಾಲಯಗಳಲ್ಲಿ ಪುಸ್ತಕಗಳ ಮೇಲೆ ಭಾರೀ ಧೂಳು ಸಂಗ್ರಹಗೊಂಡಿದೆ ಎಂದು ಉಲ್ಲೇಖ ಗ್ರಂಥಪಾಲಕ ಪ್ರಸಾದ್ ಭಾದಸವಾಲೆ ಹೇಳಿದ್ದಾರೆ. ಪುಸ್ತಕಗಳು ಹಾಳಾಗದಂತೆ ಯಾವುದೇ ವ್ಯವಸ್ಥೆಗಳನ್ನು ಮೊದಲೇ ಮಾಡಲು ಸಮಯವಿರಲಿಲ್ಲ. ಹಲವಾರು ದಿನಗಳ ಬಳಿಕ ಗ್ರಂಥಾಲಯಗಳನ್ನು ತೆರೆದಬಳಿಕ ಕಡಿಮೆ ಗುಣಮಟ್ಟದ ಕಾಗದದ ಪುಸ್ತಕಗಳು ಹಾಳಾಗುವುದಲ್ಲದೆ, ಮಳೆಯಿಂದಾಗಿ ಪುಸ್ತಕ ಗಳು ಹಾಳಾಗುವ ಸಾಧ್ಯತೆ ಇದೆ.